ವಿಜಯಪುರ: ಪ್ರೇಮಿಗಳು (Lovers) ಓಡಿ ಹೋಗಿದ್ದಕ್ಕೆ ಯುವಕನ ತಂದೆ-ತಾಯಿ (Father- Mother) ಮೇಲೆ ಯುವತಿ ಮನೆಯವರು ಹಲ್ಲೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಜಾಲಗೇರಿ ಗ್ರಾಮದಲ್ಲಿ ನಡೆದಿದೆ.
ತಂದೆ- ತಾಯಿ ಮೇಲೆ ಹಲ್ಲೆ ನಡೆದ ವಿಚಾರ ತಿಳಿದು ಪ್ರೇಮಿಗಳಾದ 22 ವರ್ಷದ ಅಮರ್ ಹಾಗೂ 24 ವರ್ಷದ ಅರ್ಚನಾ ಇದೀಗ ಅಜ್ಞಾತ ಸ್ಥಳದಿಂದ ವೀಡಿಯೋ ಬಿಡುಗಡೆ ಮಾಡಿದ್ದಾರೆ. ಇದನ್ನೂ ಓದಿ: ಮೊಬೈಲ್ ಕದಿಯಲು ಹೋಗಿ ಕಳ್ಳನ ಫಜೀತಿ – 10 ಕಿ.ಮೀ ಕಿಟಕಿಯಲ್ಲಿ ಜೋತಾಡ್ಕೊಂಡು ಬಂದ
ವೀಡಿಯೋ (Video) ದಲ್ಲಿ ಅರ್ಚನಾಳ ತಂದೆ, ಸಹೋದರರರು ಹಾಗೂ ಸಂಬಂಧಿಕರು ನಮ್ಮ ತಂದೆ-ತಾಯಿ ಮೇಲೆ ಹಲ್ಲೆ ಮಾಡಿದ್ದಾರೆ. ನಮ್ಮ ಕುಟುಂಬದವರನ್ನು ರಕ್ಷಣೆ (Protection) ಮಾಡಿ ಎಂದು ಅಮರ್ ಮನವಿ ಮಾಡಿದ್ದಾನೆ. ಇತ್ತ ಅರ್ಚನಾ ಕೂಡ ಮಾತನಾಡಿದ್ದು, ನಾನು ಪ್ರೀತಿಸಿದ ಹುಡುಗನ ಜೊತೆಗೆ ಬಂದಿದ್ದೇನೆ. ನಮ್ಮ ಕುಟುಂಬದವರನ್ನು ಕಾಪಾಡಿ ಎಂದು ಮನವಿ ಮಾಡಿಕೊಂಡಿದ್ದಾಳೆ.
ವಾರದ ಹಿಂದೆ ಪ್ರೇಮಿಗಳು ಮನೆ ಬಿಟ್ಟು ಓಡಿ ಹೋಗಿ ಮದುವೆ ಆಗಿದ್ದರು. ಇದಾದ ಬಳಿಕ ಅಂದರೆ ಸೆಪ್ಟೆಂಬರ್ 11 ರಂದು ವಿಜಯಪುರ ತಾಲೂಕಿನ ಜಾಲಗೇರಿಯಲ್ಲಿ ಅರ್ಚನಾ ಕುಟುಂಬಸ್ಥರು ಹಲ್ಲೆ ಮಾಡಿದ್ದಾರೆ. ಅಮರ್ ತಂದೆ ಗೋರಖನಾಥ್ ಚೌಹಾಣ್, ತಾಯಿ ಕವಿತಾ ಮೇಲೆ ಹಲ್ಲೆ ಮಾಡಲಾಗಿದೆ.