ವಾಷಿಂಗ್ಟನ್: ನಸ್ಸೌ ಕೌಂಟಿ ದ್ವೀಪದ ತ್ಯಾಜ್ಯದ ನೀರಿನ ಮಾದರಿಗಳಲ್ಲಿ ವೈರಸ್ ಕಂಡುಬಂದ ನಂತರ ನ್ಯೂಯಾರ್ಕ್ (New York) ಪೋಲಿಯೊ ತುರ್ತು ಪರಿಸ್ಥಿತಿಯನ್ನು (Polio Emergency) ಘೋಷಿಸಿದೆ.
ನ್ಯೂಯಾರ್ಕ್‌ನ ಆರೋಗ್ಯ ಇಲಾಖೆಯಲ್ಲಿ (Health Department) ಪೋಲಿಯೊ ಲಸಿಕೆ ಸಾಮರ್ಥ್ಯ ಹೆಚ್ಚಿಸಲು ಕ್ರಮ ಕೈಗೊಂಡಿದ್ದು, ಲಸಿಕೆ ನಿರ್ವಾಹಕರ ವಿಭಾಗವನ್ನೂ ವಿಸ್ತರಿಸಲು ಯೋಜಿಸಿದೆ. ಅದಕ್ಕಾಗಿ ಆರೋಗ್ಯ ಕಾರ್ಯಕರ್ತರು, (medical workers) ಶುಶ್ರೂಷಕಿಯರು ಹಾಗೂ ಫಾರ್ಮಸಿಸ್ಟ್ (Pharmacists) ಸೇರಿಸಿಕೊಳ್ಳುವಂತೆ ಗವರ್ನರ್ ಕ್ಯಾಥಿ ಹೊಚುಲ್ ಆದೇಶಿಸಿದ್ದಾರೆ. ಇದನ್ನೂ ಓದಿ: ವಿಶ್ವವಿದ್ಯಾಲಯದ ಪರೀಕ್ಷೆ ಪ್ರವೇಶ ಪತ್ರದಲ್ಲಿ ಮೋದಿ, ಧೋನಿ ಫೋಟೋ – ತನಿಖೆಗೆ ಆದೇಶ
ಈ ಕುರಿತು ಮಾತನಾಡಿರುವ ಆರೋಗ್ಯ ಇಲಾಖೆ ಆಯುಕ್ತರಾದ ಮೇರಿ ಬ್ಯಾಸೆಟ್, ನಿಮ್ಮ ಮಕ್ಕಳಿಗೆ ಲಸಿಕೆ ಹಾಕಿಸದಿದ್ದರೆ ಅಥವಾ ಮಗುವಿನ ದೇಹವು ಲಸಿಕೆಯೊಂದಿಗೆ ನವೀಕೃತವಾಗದಿದ್ದರೆ ಪಾರ್ಶ್ವವಾಯು ಕಾಯಿಲೆಗೆ ತುತ್ತಾಗಬಹುದು. ಹಾಗಾಗಿ ನ್ಯೂಯಾರ್ಕ್‌ನ ಯಾವುದೇ ನಿವಾಸಿಗಳೂ ಇಂತಹ ಅಪಾಯಗಳನ್ನು ತಂದೊಡ್ಡಿಕೊಳ್ಳದಂತೆ ಮನವಿ ಮಾಡುತ್ತೇನೆ. ಈಗಾಗಲೇ ನ್ಯೂಯಾರ್ಕ್‌ನಲ್ಲಿ ಪೋಲಿಯೊ ಲಸಿಕೆ ಅಭಿಯಾನ (Polio Vaccine) ಪೂರ್ಣಗೊಳಿಸಲಾಗಿದೆ. ಆದರೂ ವೈರಸ್ (Virus) ಸೋಂಕಿಗೆ ಒಳಗಾಗಿರುವ ವ್ಯಕ್ತಿಯೊಂದಿಗೆ ನಿಕಟ ಸಂಪಕದಲ್ಲಿರುವುದು ಕಂಡುಬಂದಿರುವುದರಿಂದ ಜೀವಮಾನದ ಬೂಸ್ಟರ್ ಡೋಸ್ ಅನ್ನು ಪಡೆಯಬೇಕು ಎಂದು ಅವರು ಕೋರಿದ್ದಾರೆ. ಇದನ್ನೂ ಓದಿ: ಆರ್ಟಿಕಲ್ 370ಯನ್ನು ಮತ್ತೆ ತರುವ ಭರವಸೆ ನಾನು ನೀಡಲ್ಲ: ಆಜಾದ್
ನ್ಯೂಯಾರ್ಕ್ ನಗರದಲ್ಲಿನ ರಾಕ್‌ಲ್ಯಾಂಡ್ ಕೌಂಟಿ, ಆರೆಂಜ್ ಕೌಂಟಿ, ಸುಲ್ಲಿವಾನ್ ಕೌಂಟಿ, ನಸ್ಸೌ ಕೌಂಟಿ ಪ್ರದೇಶದ ನಿವಾಸಿಗಳಿಗೆ ಲಸಿಕೆ ನೀಡುವಂತೆ ಆರೋಗ್ಯ ಇಲಾಖೆಯು ಕಾರ್ಯಕರ್ತರಿಗೆ ಸೂಚಿಸಿದೆ.