ಆಪ್ತನ ನೆನೆದು ಕಣ್ಣೀರಿಟ್ಟ ಬೊಮ್ಮಾಯಿ – ತಲೆ ಸವರಿ ಭಾವುಕರಾದ ಸಿಎಂ

Public TV
1 Min Read
BASAVARAJ BOMMAI UMESH KATTI 2

ಬೆಂಗಳೂರು: ಸಚಿವ ಉಮೇಶ್ ಕತ್ತಿ ನಿಧನಕ್ಕೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ (Basavaraj Bommai) ಭಾವುಕರಾಗಿದ್ದಾರೆ.

ಮಳೆ ಹಾನಿ ವೀಕ್ಷಣೆ ಮೊಟಕುಗೊಳಿಸಿ ಸಿಎಂ ರಾಮಯ್ಯ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಉಮೇಶ್ ಕತ್ತಿ ತಲೆ ಸವರಿ ಭಾವುಕರಾದರು. ಅಲ್ಲದೆ ಕತ್ತಿ ಜೊತೆಗಿನ ಒಡನಾಟ ನೆನೆದು ಸಿಎಂ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: 6 ಪಕ್ಷ, 8 ಬಾರಿ ಶಾಸಕ – ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಸಿಎಂ ಕನಸು ಕಂಡಿದ್ದ ಕತ್ತಿ

BASAVARAJ BOMMAI UMESH KATTI 1

ಬಳಿಕ ಮಾತನಾಡಿದ ಅವರು, ಬೆಳಗಾವಿ ಜಿಲ್ಲೆ ಹಿರಿಯ ಧುರೀಣನನ್ನು ಕಳೆದುಕೊಂಡಿದೆ. ಉತ್ತರ ಕರ್ನಾಟಕದ ಧ್ವನಿ ನಿಂತು ಹೋಗಿದೆ. ವೈಯಕ್ತಿಕವಾಗಿ ನನಗೆ ತುಂಬಲಾರದ ನಷ್ಟವಾಗಿದೆ. ಆತ್ಮೀಯ ಸಹೋದರನ್ನು ಕಳೆದುಕೊಂಡಿದ್ದೇನೆ ಎಂದು ಸಿಎಂ ಬೇಸರ ವ್ಯಕ್ತಪಡಿಸಿದರು.

ಉಮೇಶ್ ಕತ್ತಿ(Umesh Katti) ವಿಧಿವಶರಾದ ಹಿನ್ನೆಲೆ ಹುಟ್ಟೂರು ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ನಿಧನರಾದ ವಿಷಯ ತಿಳಿದು ಮಧ್ಯರಾತ್ರಿಯೇ ಕತ್ತಿ ನಿವಾಸದತ್ತ ಜನರು ಬರುತ್ತಿದ್ದಾರೆ. ಹುಟ್ಟೂರು ಬೆಲ್ಲದ ಬಾಗೇವಾಡಿಯಲ್ಲೇ ಒಂದಷ್ಟು ಕುಟುಂಬ ಸದಸ್ಯರಿದ್ದಾರೆ. ಗಣೇಶ ಚರ್ತುರ್ಥಿ ಹಿನ್ನೆಲೆ ಗ್ರಾಮದಲ್ಲಿ ಹಾಕಿರುವ ವಿದ್ಯುತ್ ದೀಪಾಲಂಕಾರಗಳನ್ನು ತೆರವು ಮಾಡಲಾಗಿದೆ. ಗ್ರಾಮದಲ್ಲಿರುವ ಗಣೇಶ ಮೂರ್ತಿಗಳ ವಿಸರ್ಜನೆಗೆ ಗ್ರಾಮಸ್ಥರು ಚರ್ಚೆ ನಡೆಸಿದ್ದಾರೆ.

BASAVARAJ BOMMAI UMESH KATTI 3

ಬೆಂಗಳೂರು ಎಚ್‍ಎಎಲ್‍ (HAL Airport) ನಿಂದ ವಿಶೇಷ ಹೆಲಿಕಾಪ್ಟರ್‍ನಲ್ಲಿ ಪಾರ್ಥಿವ ಶರೀರವನ್ನು ತರಲಾಗುತ್ತಿದೆ. ಬೆಳಗ್ಗೆ 9 ಗಂಟೆಗೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಪಾರ್ಥಿವ ಶರೀರ ಆಗಮಿಸಲಿದ್ದು 10:30ಕ್ಕೆ ಸಂಕೇಶ್ವರದ ಹಿರಣ್ಯಕೇಶಿ ಸಹಕಾರ ಸಕ್ಕರೆ ಕಾರ್ಖಾನೆಯಲ್ಲಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಇದನ್ನೂ ಓದಿ: ಉಮೇಶ್ ಕತ್ತಿ ಇನ್ನಿಲ್ಲ – ನಿನ್ನೆ ರಾತ್ರಿ ಡಾಲರ್ಸ್ ಕಾಲೋನಿ ನಿವಾಸದಲ್ಲಿ ಏನಾಯ್ತು?

ಕತ್ತಿ ಹುಟ್ಟೂರು 12ಗಂಟೆಗೆ ಹುಕ್ಕೇರಿ ತಾಲೂಕಿನ ಬೆಲ್ಲದ ಬಾಗೇವಾಡಿಯಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಸಂಜೆ 5ಗಂಟೆಗೆ ಬೆಲ್ಲದ ಬಾಗೇವಾಡಿ ತೋಟದಲ್ಲಿ ಅಂತ್ಯಕ್ರಿಯೆ ನೇರವೇರಲಿದೆ ಎಂದು ಮಾಜಿ ವಿಧಾನಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ ಮಾಹಿತಿ ನೀಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *