5 ಸಾವಿರ ಕಾರು ಕದ್ದ ಕಳ್ಳ ಕೊನೆಗೂ ಸಿಕ್ಕಿಬಿದ್ದ

Public TV
1 Min Read
Kingpin of auto theft gang who stole over 5000 cars across country arrested in Delhi Police

ನವದೆಹಲಿ: ದೇಶಾದ್ಯಂತ 5 ಸಾವಿರ ಕಾರುಗಳನ್ನು ಕದ್ದ ಆರೋಪ ಹೊತ್ತಿರುವ “ಭಾರತದ ಅತಿದೊಡ್ಡ ಕಾರು ಕಳ್ಳ”ನೆಂಬ ಕುಖ್ಯಾತಿ ಪಡೆದ ವ್ಯಕ್ತಿಯೊಬ್ಬನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಅನಿಲ್ ಚೌಹಾಣ್ (52) ಬಂಧಿತ ಆರೋಪಿ. ಈತನ ವಿರುದ್ಧ 180 ಪ್ರಕರಣಗಳು ದಾಖಲಾಗಿವೆ. ಪೊಲೀಸರು ಆರು ದೇಶೀಯ ನಿರ್ಮಿತ ಪಿಸ್ತೂಲ್‌ಗಳು ಮತ್ತು ಏಳು ಜೀವಂತ ಮದ್ದುಗುಂಡು, ಒಂದು ಕದ್ದ ಬೈಕನ್ನು ಪೊಲೀಸರು ಆರೋಪಿಯಿಂದ ವಶ ಪಡಿಸಿಕೊಂಡಿದ್ದಾರೆ.

car parking

ಅನಿಲ್ ಚೌಹಾಣ್ ಯಾರು?
ಅಸ್ಸಾಂನ ತೇಜ್‌ಪುರ ಮೂಲದ ಖಾನ್‌ಪುರ ಎಕ್ಸ್‌ಟೆನ್ಶನ್‌ನ ನಿವಾಸಿ ಅನಿಲ್ ಚೌಹಾಣ್‌ 12 ನೇ ತರಗತಿಯವರೆಗೆ ಓದಿದ್ದಾನೆ. 1998 ರಲ್ಲಿ ವಾಹನಗಳನ್ನು ಕದಿಯಲು ಪ್ರಾರಂಭಿಸಿದ ಈತ ಇಲ್ಲಿಯವರೆಗೆ 5000 ಕ್ಕೂ ಹೆಚ್ಚು ವಾಹನಗಳನ್ನು ಕದ್ದಿದ್ದಾನೆ.

ಅನಿಲ್‌ನನ್ನು ಈ ಹಿಂದೆಯೂ ಹಲವು ಬಾರಿ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ನಿಜಾಮುದ್ದೀನ್ ಪೊಲೀಸ್ ಠಾಣೆಯ ಕ್ರಿಮಿನಲ್ ಕೇಸ್‌ನಲ್ಲಿ ಐದು ವರ್ಷಗಳ ಕಾಲ ಶಿಕ್ಷೆಗೊಳಗಾಗಿದ್ದ. ಈತನ ಮೇಲೆ 180 ಕ್ರಿಮಿನಲ್ ಕೇಸ್‌ ದಾಖಲಾಗಿದೆ. ಇದನ್ನೂ ಓದಿ: 2024ರಲ್ಲಿ ಬಿಜೆಪಿಯೇತರ ಸರ್ಕಾರ ಬಂದ್ರೆ ರೈತರಿಗೆ ಉಚಿತ ವಿದ್ಯುತ್ – ಕೆಸಿಆರ್ ಭರವಸೆ

jail

ಅಸ್ಸಾಂ ಸರ್ಕಾರದಲ್ಲಿ ವರ್ಗ-1 ಗುತ್ತಿಗೆದಾರರಾಗಿದ್ದ ಈತನ ಮೇಲೆ ಜಾರಿ ನಿರ್ದೇಶನಾಲಯ ಜಾರಿ ಮಾಡಿತ್ತು. ಈತನ ಅಕ್ರಮ ಆಸ್ತಿಯನ್ನು ವಶಪಡಿಸಿಕೊಂಡ ಬಳಿಕ ಬ್ಯಾಂಕ್‌ ಹರಾಜು ಹಾಕಿತ್ತು. ಇದಾದ ಬಳಿಕ ಅನಿಲ್‌ ವಾಹನ ಕಳ್ಳತನಕ್ಕೆ ಇಳಿದಿದ್ದ. ಆರೋಪಿಯು ಈಶಾನ್ಯ ರಾಜ್ಯದಲ್ಲಿ ಘೇಂಡಾಮೃಗದ ಕೊಂಬಿನ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾನೆ. ಈತನಿಗೆ ಮೂವರು ಪತ್ನಿಯರು ಮತ್ತು ಏಳು ಮಂದಿ ಮಕ್ಕಳಿದ್ದಾರೆ.

ಬಂಧನ ಹೇಗಾಯ್ತು?
ದೆಹಲಿಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಪೂರೈಕೆ ಚಟುವಟಿಕೆಗಳು ಇತ್ತೀಚೆಗೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಪತ್ತೆ ಹಚ್ಚಲು ಪೊಲೀಸರ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ವೇಳೆ ಅನಿಲ್ ಚೌಹಾಣ್ ಬಗ್ಗೆ ಮಾಹಿತಿ ಸಿಕ್ಕಿತ್ತು. ಖಚಿತ ಮಾಹಿತಿ ಆಧಾರಿಸಿ ಡಿಬಿಜಿ ರೋಡ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿದ್ದ ಅನಿಲ್‌ ಚೌಹಾಣ್‌ನನ್ನು ಆಗಸ್ಟ್‌ 23 ರಂದು ಬಂಧಿಸಲಾಗಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *