ಬಹುಭಾಷಾ ನಟಿ ಅಮೃತಾ ಅಯ್ಯರ್ ದಕ್ಷಿಣದ ಸಿನಿಮಾಗಳ ಮೂಲಕ ಮೋಡಿ ಮಾಡಿದ್ದಾರೆ. ಇದೀಗ `ಗ್ರಾಮಾಯಣ’ ಚಿತ್ರದ ಮೂಲಕ ಈಗಾಗಲೇ ಕನ್ನಡ ಚಿತ್ರದಲ್ಲಿ ನಟಿಸಿದ್ದಾರೆ. ಇನ್ನು ಸದಾ ಸಿನಿಮಾ ವಿಷ್ಯವಾಗಿ ಸುದ್ದಿಯಲ್ಲಿರುತ್ತಿದ್ದ ನಟಿ ಈಗ ಸದ್ದಿಲ್ಲದೆ ಹಸೆಮಣೆ ಏರಿದ್ರಾ ಎಂಬ ಪ್ರಶ್ನೆ ಅಭಿಮಾನಿಗಳನ್ನ ಕಾಡುತ್ತಿದೆ.
View this post on Instagram
ಬೆಂಗಳೂರು ಮೂಲದ ನಟಿ ಅಮೃತಾ ಅಯ್ಯರ್ ಕಾಲಿವುಡ್ ಮತ್ತು ಟಾಲಿವುಡ್ ಸಿನಿಮಾಗಳ ಮೂಲಕ ಸಂಚಲನ ಮೂಡಿಸಿದ್ದಾರೆ. ತಮಿಳಿನ `ಬಿಗಿಲ್’ ಮತ್ತು ಸೂಪರ್ ಸ್ಟಾರ್ ರಜನೀಕಾಂತ್ ಜತೆ ಲಿಂಗಾ ಚಿತ್ರದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನು ಕಳೆದರೆಡು ದಿನಗಳಿಂದ ನಟಿ ಅಮೃತಾಗೆ ಮದುವೆ ಆಗಿದೆ ಎಂದು ಅನ್ನುವ ಗುಸು ಗುಸು ಶುರುವಾಗಿದೆ. ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ವೆಡ್ಡಿಂಗ್ ಫೋಟೋ ಕೂಡ ವೈರಲ್ ಆಗಿದೆ. ಈ ಕುರಿತು ನಟಿ ಸ್ಪಷ್ಟನೆ ನೀಡಿದ್ದಾರೆ.
View this post on Instagram
ದಕ್ಷಿಣ ಭಾರತದ ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ಕನ್ನಡತಿಗೆ ಇದೀಗ ತಮ್ಮ ಮದುವೆ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ. ವಣಕಂ ಡಾ ಮಾಪಿಳೈ ಸಿನಿಮಾದ ಫೋಟೋಗಳು ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ನಟಿಯ ಪೋಸ್ಟ್‌ಗೆ ಫ್ಯಾನ್ಸ್ ಕೂಡ ರಿಯಾಕ್ಟ್ ಮಾಡಿದ್ದು, ಈಗಲೇ ಮದುವೆ ಬೇಡ, ನಟಿಸಿ ಎಂದು ಕಾಮೆಂಟ್ ಮಾಡಿದ್ದಾರೆ. ಇದನ್ನೂ ಓದಿ:ಬುದ್ದಿಮಾಂದ್ಯ ಮಗನ ನೆನೆದು ಕಣ್ಣೀರಿಟ್ಟ ಮಾಳವಿಕಾ ಅವಿನಾಶ್
View this post on Instagram
`ವಣಕಂ ಡಾ ಮಾಪಿಳೈ’ ಚಿತ್ರದಲ್ಲಿ ಅಮೃತಾ ಮದುವೆಯಾಗುವ ಸನ್ನಿವೇಶವೊಂದಿತ್ತು. ಆ ಫೋಟೊದಲ್ಲಿರುವ ವರನ ಫೋಟೋವನ್ನು ಕ್ರಾಪ್ ಮಾಡಿ ಬರೀ ಅಮೃತಾ ಫೊಟೊವನ್ನು ಯಾರೋ ಶೇರ್ ಮಾಡಿದ್ದಾರೆ. ಇದನ್ನು ನೋಡಿ ನಿಜವಾಗಿಯೂ ಅಮೃತಾಗೆ ಮದುವೆ ಆಗಿದೆ ಎಂದು ಫ್ಯಾನ್ಸ್ ಅಂದುಕೊಂಡಿದ್ದರು. ಹಾಗಾಗಿ ಈ ಫೋಟೊಗಳು ಸಖತ್ ವೈರಲ್ ಆಗಿತ್ತು. ಆಕೆಯ ಸ್ನೇಹಿತೆಯರು ಶುಭಾಶಯ ಕೋರಲು ಶುರು ಮಾಡಿದ ಮೇಲೆ ಎಚ್ಚೆತ್ತುಕೊಂಡು ನಟಿ ಮದುವೆ ವದಂತಿಗೆ ಸ್ಪಷ್ಟನೆ ನೀಡಿದ್ದಾರೆ.
ಇನ್ನು ವಿನಯ್ ರಾಜ್‌ಕುಮಾರ್‌ಗೆ ನಾಯಕಿಯಾಗಿ, `ಗ್ರಾಮಾಯಣ’ ಚಿತ್ರದಲ್ಲಿ ನಟಿ ಅಮೃತಾ ಅಯ್ಯರ್ ನಟಿಸಿದ್ದಾರೆ.