28 ವರ್ಷ ಪಾಕ್ ಜೈಲಿನಲ್ಲಿದ್ದ ವ್ಯಕ್ತಿ ವಾಪಸ್ – ಭಾರತೀಯರ ಕರಾಳ ಸ್ಥಿತಿ ನೆನಪಿಸಿ ಕಣ್ಣೀರು

Public TV
2 Min Read
Kuldeep Yadav Pak Jail

ಗಾಂಧೀನಗರ: ಗುಢಾಚರ್ಯೆ ಆರೋಪದ ಮೇಲೆ ಪಾಕಿಸ್ತಾನದ ಜೈಲಿನಲ್ಲಿ 28 ವರ್ಷಗಳಿಗೂ ಹೆಚ್ಚು ಕಾಲವಿದ್ದ ಗುಜರಾತ್‍ನ ವ್ಯಕ್ತಿಯೊಬ್ಬರು ಮರಳಿ ದೇಶಕ್ಕೆ ಬಂದಿದ್ದಾರೆ.

ಕುಲದೀಪ್ ಯಾದವ್(59) ಅವರನ್ನು 1994 ಮಾರ್ಚ್‍ನಲ್ಲಿ ಪಾಕಿಸ್ತಾನವು ಬೇಹುಗಾರಿಕೆ ಆರೋಪದ ಮೇಲೆ ಬಂಧಿಸಿತ್ತು. ಇದಾದ ನಂತರ 28 ವರ್ಷಗಳ ಕಾಲ ಬಂಧಿಯಾಗಿದ್ದ ಯಾದವ್ ಅವರನ್ನು ಅಗಸ್ಟ್ 22ರಂದು ಪಾಕ್ ಬಿಡುಗಡೆ ಮಾಡಿತ್ತು. ಹೀಗಾಗಿ ಪಂಜಾಬ್‍ನ ವಾಘಾ-ಅಟ್ಟಾರಿ ಗಡಿಯ ಮೂಲಕ ಯಾದವ್ ಅವರು ಭಾರತವನ್ನು ಪ್ರವೇಶಿಸಿದರು. ಇದೀಗ ಗುಜರಾತ್‍ಗೆ ತಲುಪಿರುವ ಅವರು ಅಲ್ಲಿ ಆದ ಕೆಟ್ಟ ಅನುಭವ ಹಾಗೂ ಅಲ್ಲಿರುವ ಭಾರತೀಯರ ದುಃಸ್ಥಿತಿಯನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

Wagah Attari border

ಯಾದವ್ ಅವರೇ ಹೇಳಿದಂತೆ ಪಾಕಿಸ್ತಾನದ ಜೈಲಿನಲ್ಲಿರುವ ಭಾರತೀಯರು ತಮ್ಮ ಮಾನಸಿಕ ಸಮತೋಲನವನ್ನು ಕಳೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಪಾಕ್ ಅಧಿಕಾರಿಗಳಿಂದ ತೀವ್ರವಾದ ಚಿತ್ರಹಿಂಸೆಯನ್ನು ಅನುಭವಿಸುತ್ತಿದ್ದಾರೆ. ಈ ಚಿತ್ರಹಿಂಸೆ ಯಾವ ಮಟ್ಟದಲ್ಲಿದೇ ಎಂದರೆ ಭಾರತೀಯ ಖೈದಿಗಳಿಗೆ ತಮ್ಮ ಹೆಸರನ್ನೇ ನೆನಪಿಸಿಕೊಳ್ಳಲು ಆಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಕೆಲವು ಭಾರತೀಯರು ಶಿಕ್ಷೆ ಮುಗಿದರೂ ಪಾಕಿಸ್ತಾನದ ಜೈಲಿನಲ್ಲೇ ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಅಲ್ಲಿ ಚಿತ್ರಹಿಂಸೆಯನ್ನು ಅನುಭವಿಸುತ್ತಿರುವ ಭಾರತೀಯರನ್ನು ಮರಳಿ ದೇಶಕ್ಕೆ ಕರೆತನ್ನಿ. ಅಲ್ಲಿರುವ ಕೆಲವರು ದೇಶದ ಕೆಲಸಕ್ಕಾಗಿ ಹೋಗಿದ್ದರು. ಇದರಿಂದಾಗಿ ಅವರನ್ನು ಭಾರತಕ್ಕೆ ಮರಳಿ ಕರೆಸುವುದು ಸರ್ಕಾರದ ಕರ್ತವ್ಯವಾಗಿದೆ. ನನ್ನಂತೆಯೇ ಅನೇಕರು ಮತ್ತೇ ಮರಳಿ ಕುಟುಂಬಸ್ಥರನ್ನು ಭೇಟಿಗಾಗಿ ಕಾಯುತ್ತಿದ್ದಾರೆ ಎಂದರು.

jail

ಇದೇ ವೇಳೆ ಭಾರತ ಸರ್ಕಾರಕ್ಕೆ ಇನ್ನೊಂದು ಮನವಿ ಮಾಡಿರುವ ಅವರು, ತಮ್ಮ ಬಳಿ ಒಂದೇ ಒಂದು ಬಟ್ಟೆಯೂ ಇಲ್ಲ. ನಾನು ಈಗ ಧರಿಸಿರುವ ಶರ್ಟ್ ಕೂಡ ಪಾಕಿಸ್ತಾನದ್ದಾಗಿದೆ. ಈಗ ನಾನು ಸಹೋದರರೊಂದಿಗಿದ್ದೇನೆ. ಆದರೆ ಅವರ ಮನೆಯಲ್ಲೂ ತುಂಬಾ ದಿನ ಇರಲು ಆಗುವುದಿಲ್ಲ. ನಾನು ಮಾಡಿರುವ ದೇಶ ಸೇವೆಯನ್ನು ಪರಿಗಣಿಸಿ, ಪುನರ್ವಸತಿಯನ್ನು ಒದಗಿಸಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ದಿನಕ್ಕೆ 86 ರೇಪ್, ಗಂಟೆಗೆ 49 ಮಹಿಳಾ ದೌರ್ಜನ್ಯ ಕೇಸ್ ದಾಖಲು – ಹೊರಬಿತ್ತು ಆತಂಕಕಾರಿ ವರದಿ

ಈ ಬಗ್ಗೆ ಯಾದವ್ ಸಹೋದರಿ ಮಾತನಾಡಿ, ಯಾದವ್ ಅವರು ತಮ್ಮ ಸಹೋದರಿಗೆ ಪಾಕಿಸ್ತಾನದಲ್ಲಿದ್ದಾಗ ಆಗಾಗ ಪತ್ರವನ್ನು ಬರೆಯುತ್ತಿದ್ದರು. ಆದರೆ ಕೆಲ ವರ್ಷಗಳ ನಂತರ ಪತ್ರ ಬರುವುದು ನಿಂತು ಹೋಗಿತ್ತು. ಅದಾದ ನಂತರ 2007ರಂದು ಫೆಬ್ರವರಿ 1ರಂದು ಇಸ್ಲಾಮಾಬಾದ್‍ನಲ್ಲಿರುವ ಭಾರತೀಯ ಹೈಕಮಿಷನ್ ಯಾದವ್ ಕುಟುಂಬಕ್ಕೆ ಒಂದು ಪತ್ರವನ್ನು ಕಳುಹಿಸಿತ್ತು. 1994ರ ಮಾರ್ಚ್ 23ರಲ್ಲಿ ಯಾದವ್ ಅವರು ಪಾಕಿಸ್ತಾನದ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಮೂರು ವರ್ಷಗಳ ಕಾಲ ಬಂಧನದಲ್ಲಿದ್ದರು. ಅದಾದ ನಂತರ ಮಿಲಿಟರಿ ನ್ಯಾಯಾಲಯವು ಬೇಹುಗಾರಿಕೆ ಆರೋಪದ ಮೇಲೆ 25 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. 1996ರಲ್ಲಿ ಅವರನ್ನು ಕೋಟ್ ಲಖ್ಪತ್ ಜೈಲಿಗೆ ಸ್ಥಳಾಂತರಿಸಿದ್ದಾರೆ ಎಂದು ತಿಳಿಸಿತ್ತು ಎಂದರು.

jail 1

ಯಾದವ್ ಅವರು, 1989ರಲ್ಲಿ ಉದ್ಯೋಗಕ್ಕಾಗಿ ದೆಹಲಿಗೆ ಹೋಗಿದ್ದರು. ಆದರೆ ತಮ್ಮ ಕುಟುಂಬಸ್ಥರಿಗೆ ಯಾವ ಉದ್ಯೋಗ ಎಂದು ತಿಳಿಸಿರಲಿಲ್ಲ. ಆದರೆ ಕೆಲ ವರ್ಷಗಳಲ್ಲೇ ಗುಜರಾತ್ ವಿವಿಯಿಂದ ಕಾನೂನು ಪದವಿಯನ್ನು ಪಡೆದುಕೊಂಡಿದ್ದ ಯಾದವ್ ಅವರ ಸಂಪರ್ಕವನ್ನು ಕುಟುಂಬಸ್ಥರು ಕಳೆದುಕೊಂಡಿದ್ದರು. ಇದನ್ನೂ ಓದಿ: 400 ಚಿನೂಕ್‌ ಹೆಲಿಕಾಪ್ಟರ್‌ಗಳ ಸೇವೆ ದಿಢೀರ್‌ ಬಂದ್‌ – ಅಮೆರಿಕದ ಶಾಕಿಂಗ್‌ ನಿರ್ಧಾರ, ಆತಂಕದಲ್ಲಿ ಭಾರತ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *