ನವದೆಹಲಿ: ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯ ಮೊದಲ ಪಂದ್ಯದಲ್ಲಿಯೇ ಭಾರತ ತನ್ನ ಎದುರಾಳಿ ಪಾಕಿಸ್ತಾನ ವಿರುದ್ಧ ಅದ್ಭುತ ಪ್ರದರ್ಶನ ನೀಡಿದೆ. ಈ ಹಿನ್ನೆಲೆ ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭಾರತೀಯ ಆಟಗಾರರಿಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಆಲ್‍ರೌಂಡರ್ ರವೀಂದ್ರ ಜಡೇಜಾ ಜವಾಬ್ದಾರಿಯುತ ಬ್ಯಾಟಿಂಗ್ ಹಾಗೂ ಪಾಂಡ್ಯ ಆಲ್ ರೌಂಡರ್ ಆಟದಿಂದ ಟೀಂ ಇಂಡಿಯಾ ಪಾಕಿಸ್ತಾನದ ವಿರುದ್ಧ ಐದು ವಿಕೆಟ್‍ಗಳ ರೋಚಕ ಗೆಲುವು ಸಾಧಿಸಿದೆ. ಇದನ್ನೂ ಓದಿ: ಮುರುಘಾ ಶ್ರೀಗಳ ವಿರುದ್ಧ ಆರೋಪ- ಇಂದು ಜಡ್ಜ್ ಮುಂದೆ ಸಂತ್ರಸ್ತೆಯರ ಹೇಳಿಕೆ ದಾಖಲು
What a thriller of a match! Well played, #TeamIndia ????????
The beauty of sports is how it inspires and unites the country – with a feeling of great joy & pride. #AsiaCup2022
— Rahul Gandhi (@RahulGandhi) August 28, 2022
ಈ ಕುರಿತಂತೆ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು, ಎಂತಹ ರೋಚಕ ಪಂದ್ಯ! ಟೀಂ ಇಂಡಿಯಾ ಅದ್ಭುತವಾಗಿ ಆಡಿದೆ. ದೇಶವನ್ನು ಹೇಗೆ ಪ್ರೇರೇಪಿಸುತ್ತದೆ ಮತ್ತು ಒಗ್ಗೂಡಿಸುತ್ತದೆ ಎಂಬುವುದೇ ಕ್ರೀಡೆಯ ಸೌಂದರ್ಯ. ನನಗೆ ಹೆಮ್ಮೆಯ ಜೊತೆಗೆ ಬಹಳ ಸಂತೋಷವಾಗುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: AsiaCup: ಜಡೇಜಾ ಜಾದು, ಪಾಂಡ್ಯ ಪರಾಕ್ರಮ – ಪಾಕಿಸ್ತಾನದ ವಿರುದ್ಧ ಭಾರತಕ್ಕೆ 5 ವಿಕೆಟ್‌ಗಳ ರೋಚಕ ಜಯ
Hurrah! हम जीत गए।
Congratulations to team India for a glorious performance and win. Well played, men in blue!
जय हिंद! #INDvsPAK #AsiaCup2022
— Priyanka Gandhi Vadra (@priyankagandhi) August 28, 2022
ಮತ್ತೊಂದೆಡೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿಅವರು, “ಹುರ್ರೇ! ನಾವು ಗೆದ್ದಿದ್ದೇವೆ. ಅದ್ಭುತವಾದಂತಹ ಪ್ರದರ್ಶನ ನೀಡಿ ಜಯಗಳಿಸಿದ ಟೀಂ ಇಂಡಿಯಾಗೆ ಅಭಿನಂದನೆಗಳು. ಚೆನ್ನಾಗಿ ಆಡಿದ್ದೀರಾ ಬ್ಲೂ ಬಾಯ್ಸ್. ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ.