ಮನೀಶ್ ಸಿಸೋಡಿಯಾ ಭಾರತ ರತ್ನಕ್ಕೆ ಅರ್ಹರು: ಅರವಿಂದ್ ಕೇಜ್ರಿವಾಲ್

Public TV
1 Min Read
Arvind Kejriwal

ನವದೆಹಲಿ: ಮನೀಶ್ ಸಿಸೋಡಿಯಾ ಅವರು ದೆಹಲಿಯ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಮಾಡಿದ ಎಲ್ಲ ಕೆಲಸಗಳಿಂದ ಅವರು ಭಾರತ ರತ್ನಕ್ಕೆ ಅರ್ಹರಾಗಿದ್ದಾರೆ ಎಂದು ಸಿಎಂ ಅರವಿಂದ್ ಕೇಜ್ರಿವಾಲ್ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಸೋಡಿಯಾ ಗುಣಮಟ್ಟದ ಸರ್ಕಾರಿ ಶಾಲೆಗಳನ್ನು ರೂಪಿಸಿ ಪವಾಡ ಮೆರೆದಿದ್ದಾರೆ. ಅಂತಹ ವ್ಯಕ್ತಿಗೆ ಭಾರತ ರತ್ನ ಸಿಗಬೇಕು. ಇಡೀ ದೇಶದ ಶಿಕ್ಷಣ ವ್ಯವಸ್ಥೆಯನ್ನೇ ಅವರ ಕೈಗೆ ಕೊಡಬೇಕು. ಬದಲಿಗೆ ಅವರ ವಿರುದ್ಧ ಸಿಬಿಐ ದಾಳಿ ನಡೆದಿದೆ. ಇದು ಬಿಜೆಪಿ ಅವರಿಗೇ ನಾಚಿಕೆ ಆಗಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಅಬಕಾರಿ ನೀತಿ ಹಗರಣ: ಮನೀಶ್ ಸಿಸೋಡಿಯಾ ಸೇರಿ 8 ಆರೋಪಿಗಳ ವಿರುದ್ಧ ಸಿಬಿಐ ಲುಕ್‌ಔಟ್ ನೋಟಿಸ್

MANISH SISODIA

ಅಬಕಾರಿ ತನಿಖೆಯಲ್ಲಿ ಮನೀಶ್ ಸಿಸೋಡಿಯಾ ಅರೆಸ್ಟ್ ಆಗಬಹುದು. ಯಾರಿಗೆ ಗೊತ್ತು ನಾನು ಸಹ ಅರೆಸ್ಟ್ ಆಗಬಹುದು. ಇದೆಲ್ಲವೂ ಗುಜರಾತಿನ ಚುನಾವಣೆ ಗೆಲ್ಲಲು ಬಿಜೆಪಿ ಮಾಡುತ್ತಿರುವ ತಂತ್ರಗಳು ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ: 3-4 ದಿನಗಳಲ್ಲಿ ಸಿಬಿಐ-ಇಡಿ ನನ್ನ ಬಂಧಿಸಬಹುದು, ಯಾವುದಕ್ಕೂ ಹೆದರಲ್ಲ: ಮನೀಶ್ ಸಿಸೋಡಿಯಾ

ಬಳಿಕ ಮಾತಮಾಡಿದ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ಕೇಜ್ರಿವಾಲ್ ನನ್ನ ಗುರು ಹಾಗೂ ಮಾರ್ಗದರ್ಶಕರು. ನಾನು ಸಿಎಂ ಆಗಲು ರಾಜಕೀಯಕ್ಕೆ ಬಂದಿಲ್ಲ. ಸಾರ್ವಜನಿಕರಿಗೆ ಒಳ್ಳೆಯದು ಮಾಡಲು ಬಂದಿದ್ದೇನೆ. ದೆಹಲಿಯಲ್ಲಿ ಕೇಜ್ರಿವಾಲ್ ಅವರು ಮಾಡುವ ಕೆಲಸಗಳನ್ನು ತಡೆಯುವುದಕ್ಕಾಗಿ ಅಬಕಾರಿ ನೀತಿ ತನಿಖೆಯನ್ನು ಮುನ್ನೆಲೆಗೆ ತರಲಾಗಿದೆ ಎಂದು ಕಿಡಿಕಾರಿದ್ದಾರೆ.

MANISH SISODIA

ಹೊಸ ಮದ್ಯನೀತಿಗೆ ಸಂಬಂಧಿಸಿದಂತೆ ಮನೀಶ್ ಸಿಸೋಡಿಯಾ ನಿವಾಸ ಮತ್ತು ಕಚೇರಿಗಳ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದರು. ದಾಳಿ ಬೆನ್ನಲ್ಲೇ ಆಮ್ ಅದ್ಮಿ ನಾಯಕರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *