ಪುದುಚೇರಿ: ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಾಹನದ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ದಾಳಿ ನಡೆಸಿರುವ ಘಟನೆ ಪಾಂಡಿಚೇರಿ ಕಾಂಗ್ರೆಸ್ ಪಕ್ಷದ ಕಚೇರಿ ಎದುರು ನಡೆದಿದೆ.
ಪುದುಚೇರಿ ಕಾಂಗ್ರೆಸ್ ಉಸ್ತುವಾರಿ ಆಗಿರುವ ದಿನೇಶ್ ಗುಂಡೂರಾವ್ ಅವರು, ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಕಾಂಗ್ರೆಸ್ ಸಭೆಗೆ ಹೋಗಿದ್ದರು. ಮಾಜಿ ಸಚಿವರೊಬ್ಬರನ್ನ ಬೆಂಬಲಿಸುವ ಬಣ ನಾಯಕತ್ವ ಬದಲಾವಣೆಗೆ ಆಗ್ರಹಿಸಿ ಧರಣಿ ನಡೆಸುತ್ತಿತ್ತು. ಈ ವೇಳೆ ಸಭೆ ಮುಗಿಸಿ ಹೊರಬರುತ್ತಿದ್ದಂತೆಯೇ ಕಾಂಗ್ರೆಸ್ ಕಾರ್ಯಕರ್ತರು ದಿನೇಶ್ ಗುಂಡೂರಾವ್ ಅವರನ್ನು ಸುತ್ತುವರಿದು ತಳ್ಳಾಡಿ ಗಲಾಟೆ ಮಾಡಿದ್ದಾರೆ. ಅಲ್ಲದೇ ಕಾರಿಗೆ ಹತ್ತದಂತೆ ತಡೆದು ದಿನೇಶ್ ಗುಂಡೂರಾವ್ ಕಾರಿಗೆ ಹಾನಿ ಮಾಡಿದ್ದಾರೆ. ನಾಯಕತ್ವ ಬದಲಾವಣೆ ಕುರಿತು ಉತ್ತರ ನೀಡುವಂತೆ ದಿನೇಶ್ ಗುಂಡೂರಾವ್‍ಗೆ ಕಾರ್ಯಕರ್ತರ ಒತ್ತಾಯಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಮತ್ತೆ ವರುಣನ ಆರ್ಭಟ – ಕರಾವಳಿ ಭಾಗಕ್ಕೆ ಈ ವಾರ ಯೆಲ್ಲೋ ಅಲರ್ಟ್
ಸ್ಥಳದಲ್ಲಿ ಮಾಜಿ ಸಿಎಂ ನಾರಾಯಣಸ್ವಾಮಿ ಬೆಂಬಲಿಗರು ಕೂಡ ಜಮಾಯಿಸಿದ್ದರು. ನಂತರ ಎರಡು ಗುಂಪುಗಳ ನಡುವೆ ವಾಗ್ವಾದ ನಡೆದಿದೆ. ಘಟನೆಯ ನಂತರ ಪುದುಚೇರಿ ಕಾಂಗ್ರೆಸ್ ಅಧ್ಯಕ್ಷ ಸುಬ್ರಮಣಿಯನ್ ಅವರು ಐವರು ಕೈ ಕಾರ್ಯಕರ್ತರು ಅಮಾನತುಗೊಳಿಸಲು ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಸಿಎಂ ನಿತೀಶ್ ಕುಮಾರ್ ಬೆಂಗಾವಲು ವಾಹನದ ಮೇಲೆ ಕಲ್ಲು ತೂರಾಟ – 13 ಮಂದಿ ಅರೆಸ್ಟ್