ಸೋಷಿಯಲ್ ಮೀಡಿಯಾದ ಸೆನ್ಸೇಷನಲ್ ಸೋನು ಶ್ರೀನಿವಾಸ್ ಗೌಡ ಇದೀಗ ಬಿಗ್ ಬಾಸ್ ಮನೆಯ ಹೈಲೈಟ್ ಆಗಿದ್ದಾರೆ. ಪ್ರತಿದಿನ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಲೇ ಇರುತ್ತಾರೆ. ಇದೀಗ ತಮ್ಮ ಮದುವೆಯ ವಿಚಾರವಾಗಿ ಸೋನು ಬಿಗ್ ಬಾಸ್ ಮನೆಯಲ್ಲಿ ಸದ್ದು ಮಾಡ್ತಿದ್ದಾರೆ.

ಇದೀಗ ನಿನಗೆ ರಾಕೇಶ್ ಮೇಲೆ ಪ್ರೀತಿ ಇದೆಯಾ ಎಂದು ಸೋನುಗೆ ಸ್ಫೂರ್ತಿ ಪ್ರಶ್ನೆ ಮಾಡಿದರು. ಇದಕ್ಕೆ ಸೋನು ನೇರವಾಗಿ ಉತ್ತರಿಸಿದರು. ರಾಕೇಶ್ ಒಳ್ಳೆಯ ಗೆಳೆಯ. ಹಾಗಂತ ನಾನು ಅವನ ಜತೆ ಟೈಮ್ ಪಾಸ್ ಮಾಡುತ್ತಿಲ್ಲ. ನನಗೆ ಒಬ್ಬ ಫ್ರೆಂಡ್ ಇದ್ದಾನೆ. ಅವನ ರೀತಿಯೇ ರಾಕೇಶ್ ಕಾಣುತ್ತಿದ್ದಾನೆ. ಹೀಗಾಗಿ ಅವನ ಜತೆ ಕ್ಲೋಸ್ ಆಗಿದ್ದೀನಿ. ನಾನು ಇಷ್ಟು ಬೇಗ ಮದುವೆ ಆಗಲ್ಲ. ಇನ್ನೂ ಏಳು ವರ್ಷ ವಿವಾಹ ಆಗಲ್ಲ. ನಾನು ಚಿತ್ರರಂಗದಲ್ಲಿ ಬೆಳೆಯಬೇಕು ಎಂದು ಸೋನು ಹೇಳಿಕೊಂಡಿದ್ದಾರೆ.
ಸೋನುಗೆ ಹೀರೋಯಿನ್ ಆಗಬೇಕು ಎಂಬ ಕನಸಿದೆ. ಈ ಮೊದಲು ಶಾರ್ಟ್ ಮೂವಿಗಳಲ್ಲಿ ಮತ್ತು ಆಲ್ಬಂ ಸಾಂಗ್‌ಗಳಲ್ಲಿ ನಟಿಸಿದ್ದರು. ಬಿಗ್ ಬಾಸ್ ವೇದಿಕೆ ಏರಿದಾಗಲೂ ನಾನು ಚಿತ್ರರಂಗದಲ್ಲಿ ಗುರುತಿಸಿಕೊಳ್ಳಬೇಕು ಎಂಬುದನ್ನು ಅವರು ಒತ್ತಿ ಹೇಳಿದ್ದರು. ಬಿಗ್ ಬಾಸ್‌ನಿಂದ ಒಂದಷ್ಟು ಜನಪ್ರಿಯತೆ ಗಿಟ್ಟಿಸಿಕೊಂಡರೆ ಮುಂದೆ ಚಿತ್ರರಂಗದಲ್ಲಿ ಒಂದೊಳ್ಳೆ ಅವಕಾಶವನ್ನ ಗಿಟ್ಟಿಸಿಕೊಳ್ಳಬಹುದು ಎಂಬುದು ಸೋನು ಲೆಕ್ಕಾಚಾರ.



