ಪಂಜಾಬ್‌ನಲ್ಲಿ ಇನ್ಮುಂದೆ ಒಬ್ಬ ಶಾಸಕನಿಗೆ ಒಂದೇ ಬಾರಿ ಪಿಂಚಣಿ – 100 ಕೋಟಿ ಉಳಿತಾಯಕ್ಕೆ ಸಿಎಂ ಪ್ಲ್ಯಾನ್‌

Public TV
2 Min Read
Bhagwant Mann

ಚಂಡೀಗಢ: ಸಿಎಂ ಭಗವಂತ್ ಮಾನ್ ನೇತೃತ್ವದ ಪಂಜಾಬ್ ಸರ್ಕಾರ `ಒಬ್ಬ ಶಾಸಕ-ಒಂದು ಪಿಂಚಣಿ’ ಯೋಜನೆಗೆ ಅಧಿಸೂಚನೆ ಹೊರಡಿಸಿದ್ದು, 5 ವರ್ಷಗಳಲ್ಲಿ 100 ಕೋಟಿ ಉಳಿತಾಯಕ್ಕೆ ಸರ್ಕಾರ ಪ್ಲ್ಯಾನ್‌ ಮಾಡಿದೆ.

ಮಾಜಿ ಶಾಸಕರಿಗೆ (ಎಂಎಲ್‌ಎ) ಬಹು ಪಿಂಚಣಿಗಳನ್ನು ಸೀಮಿತಗೊಳಿಸುವ ಮಸೂದೆಗೆ ಪಂಜಾಬ್ ರಾಜ್ಯಪಾಲರು ತಮ್ಮ ಒಪ್ಪಿಗೆ ನೀಡಿದ ನಂತರ ಎಎಪಿ ಸರ್ಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿದ್ದು, 5 ವರ್ಷಗಳಲ್ಲಿ 100 ಕೋಟಿ ಉಳಿತಾಯವಾಗಲಿದೆ. ಜೊತೆಗೆ `ಒಂದು ಶಾಸಕ-ಒಂದು ಪಿಂಚಣಿ’ ಯೋಜನೆಯು ದೇಶದ ರಾಜಕೀಯ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಿದೆ ಎಂದು ಭಗವಂತ್ ಮಾನ್ ಹೇಳಿದರು. ಇದನ್ನೂ ಓದಿ: ಕಳೆಗಟ್ಟಿದ ಸಾಂಸ್ಕೃತಿಕ ನಗರಿ ಮೈಸೂರು- ಇಂದಿನಿಂದ ದಸರಾ ಆನೆಗಳಿಗೆ ತಾಲೀಮು

bhagwant mann 5

ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಅಭಿನಂದನೆ ಸಲ್ಲಿಸಲು ಹಾಗೂ ಅವರ ಕನಸುಗಳನ್ನು ನನಸಾಗಿಲು ಎಎಪಿ ಸರ್ಕಾರವು ಕೈಗೊಂಡ ಉಪಕ್ರಮವಾಗಿದೆ. ಪಂಜಾಬ್ ವಿಧಾನಸಭೆಯ ಸದಸ್ಯರ `ಪಿಂಚಣಿ ಮತ್ತು ವೈದ್ಯಕೀಯ ಸೌಲಭ್ಯಗಳ ನಿಯಂತ್ರಣ ಮಸೂದೆ (ತಿದ್ದುಪಡಿ)-2022 ಅನ್ನು ಅಂಗೀಕರಿಸಿದೆ. ಇದು ರಾಜ್ಯ ವಿಧಾನಸಭೆಯ ಸದಸ್ಯರಿಗೆ ಒಂದೇ ಅವಧಿಗೆ ಪ್ರತಿ 60,000 ರೂಪಾಯಿಗಳ ಹೊಸ ದರದಲ್ಲಿ ಮಾತ್ರ ಪಿಂಚಣಿ ನೀಡುವ ಗುರಿಯನ್ನು ಹೊಂದಿದೆ. ಇದಕ್ಕೆ ಪಂಜಾಬ್ ರಾಜ್ಯಪಾಲರೂ ಒಪ್ಪಿಗೆ ಸೂಚಿಸಿದ್ದಾರೆ.

ಈ ಮೂಲಕ ರಾಜ್ಯ ಸರ್ಕಾರಕ್ಕೆ ವಾರ್ಷಿಕ 19.53 ಕೋಟಿ ರೂ. ಉಳಿತಾಯವಾಗಲಿದೆ. ಒಟ್ಟಾರೆ 5 ವರ್ಷಗಳಲ್ಲಿ ಸುಮಾರು 100 ಕೋಟಿ ರೂ. ಉಳಿತಾಯವಾಗಲಿದೆ ಎಂದು ಅವರು ಹೇಳಿದ್ದಾರೆ.

Bhagwant Mann

ಪಂಜಾಬ್ ಮಾಜಿ ಶಾಸಕರು 2 ಬಾರಿ, 5 ಬಾರಿ ಅಥವಾ ಹತ್ತು ಬಾರಿ ಗೆದ್ದಿದ್ದರೂ ಅವರು ಇನ್ನು ಮುಂದೆ ಒಂದು ಅವಧಿಗೆ ಮಾತ್ರ ಪಿಂಚಣಿ ಪಡೆಯಲು ಅರ್ಹರಾಗಿರುತ್ತಾರೆ. ಅವರು ಸಲ್ಲಿಸಿದ್ದ ಸೇವೆಗೆ ಪ್ರತಿ ಅವಧಿಗೂ ಪಿಂಚಣಿ ಪಡೆಯುವ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಲಾಗುವುದು. ಅವರ ಪಿಂಚಣಿಯನ್ನು ಒಂದು ಅವಧಿಗೆ ಮಾತ್ರ ಸೀಮಿತಗೊಳಿಸಲಾಗುತ್ತದೆ ಎಂದು ಭಗವಂತ್ ಮಾನ್ ಸಿಎಂ ಆದ ಕೆಲ ದಿನಗಳಲ್ಲೇ ಹೇಳಿದ್ದರು. ಇದನ್ನೂ ಓದಿ: ಸಾವಿರಾರು ಕೋಟಿ ಆಸ್ತಿ ಒಡೆಯ, ಬಿಗ್‌ಬುಲ್‌ ರಾಕೇಶ್‌ ಜುಂಜುನ್‌ವಾಲ ನಿಧನ

ನಮ್ಮ ರಾಜಕೀಯ ನಾಯಕ ಸಾರ್ವಜನಿಕರ ಸೇವೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಕೈಮುಗಿದು ಮತ ಪಡೆದು ಗೆಲ್ಲುತ್ತಾರೆ. ಆದರೆ 3-4 ಬಾರಿ ಗೆದ್ದ ನಂತರವೂ ಹಲವು ಹಲವು ಶಾಸಕರು ಮುಂದಿನ ಚುನಾವಣೆಯಲ್ಲಿ ಸೋತರು ಅಥವಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಗದಿದ್ದರೂ ತಿಂಗಳಿಗೆ ಲಕ್ಷಾಂತರ ರೂಪಾಯಿ ಪಿಂಚಣಿ ಪಡೆಯುತ್ತಾರೆ. ಇದು ರಾಜ್ಯದ ಬೊಕ್ಕಸಕ್ಕೆ ದೊಡ್ಡ ಹೊಡೆತ ನೀಡುತ್ತಿದೆ ಭಗವಂತ್ ಮಾನ್ ತಿಳಿಸಿದ್ದರು.

ಚುನಾವಣೆಯಲ್ಲಿ ಸೋತರೂ ಕೆಲವರು 3.50 ರಿಂದ 5 ಲಕ್ಷ ರೂ. ವರೆಗೂ ಪಿಂಚಣಿ ಪಡೆಯುತ್ತಿದ್ದಾರೆ. ಲಾಲ್‌ಸಿಂಗ್, ಸರ್ವಾನ್‌ಸಿಂಗ್ ಫಿಲೌ ಹಾಗೂ ರಾಜಿಂದರ್ ಕೌರ್ ಭಟ್ಟಾಲ್ ತಿಂಗಳಿಗೆ 3.55 ಲಕ್ಷ ಪಿಂಚಣಿ ಪಡೆಯುತ್ತಿದ್ದಾರೆ. ರವಿಂದರ್ ಸಿಂಗ್, ಬೈಲ್ವಿಂದರ್ ಸಿಂಗ್ 2.75 ಲಕ್ಷ ಹಾಗೂ ಅಕಾಲಿ ದಳದ ಮುಖ್ಯಸ್ಥ ಪ್ರಕಾಶ್ ಸಿಂಗ್ ಬಾದಲ್ 5 ಲಕ್ಷ ಪಿಂಚಣಿ ಪಡೆಯುತ್ತಿದ್ದಾರೆ. ಇದರಿಂದ ಬೊಕ್ಕಸಕ್ಕೆ ಕೋಟ್ಯಂತರ ರೂ. ಆರ್ಥಿಕ ಹೊರೆಯಾಗುತ್ತಿದೆ ಎಂದು ಆತಂಕಪಟ್ಟಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *