ದಕ್ಷಿಣ ಭಾರತದ ನಟಿ ಕಾಜಲ್ ಅಗರ್‌ವಾಲ್ ಸದ್ಯ ತಾಯ್ತನದ ಖುಷಿಯಲ್ಲಿದ್ದಾರೆ. ಪುಟ್ಟ ಕಂದಮ್ಮ ನೀಲ್ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುವ ಕಾಜಲ್ ಇದೀಗ ಬಾಹುಬಲಿ ಚಿತ್ರದ ದೃಶ್ಯವೊಂದನ್ನ ರೀಕ್ರಿಯೆಟ್ ಮಾಡಿದ್ದಾರೆ.

ಚಿತ್ರದಲ್ಲಿ ಕಟ್ಟಪ್ಪನ ತಲೆಯ ಮೇಲೆ ಮಗು ಕಾಲು ಇಡುವ ದೃಶ್ಯ ಇದೆ. ಅದನ್ನು ಕಾಜಲ್ ಅಗರ್‌ವಾಲ್ ಅವರು ಮರು ಸೃಷ್ಟಿ ಮಾಡಿದ್ದಾರೆ. ಕಾಜಲ್ ಕೂಡ ತನ್ನ ತಲೆಯ ಮೇಲೆ ಮಗುವಿನ ಪಾದವಿಟ್ಟು ರಾಜಮೌಳಿಗೆ ನಮ್ಮಿಬ್ಬರಿಂದಲೂ ಸಮರ್ಪಣೆ ಎಂದು ಹೇಳಿದ್ದಾರೆ. ಈ ಮುದ್ದಾದ ಫೋಟೋ ನೋಡಿ ಫ್ಯಾನ್ಸ್ ದಿಲ್ ಖುಷ್ ಆಗಿದ್ದಾರೆ.


