ಡಿಕೆಶಿ ಭೇಟಿಗೆ ಬಂದ ಮಧ್ಯಪ್ರದೇಶದ ಮಹಿಳೆ ಕಣ್ಣೀರು

Public TV
1 Min Read
KPCC 2

ಬೆಂಗಳೂರು: ಮಧ್ಯಪ್ರದೇಶದ ಮಹಿಳೆಯೊಬ್ಬರು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರನ್ನು ಭೇಟಿಯಾಗಲು ಬಂದು ಕಣ್ಣೀರು ಹಾಕಿದ ಪ್ರಸಂಗ ನಡೆದಿದೆ.

KPCC 1

ಅಷ್ಟು ದೂರದಿಂದರೂ ಬಂದರೂ ಮಹಿಳೆಕೆ ಡಿಕೆಶಿ ಭೆಟಿಯಾಗಲು ಅವಕಾಶ ಸಿಗಲಿಲ್ಲ. ಇದರಿಂದ ಬೆಸರಗೊಂಡ ಆಕೆ ಬಾಗಿಲಲ್ಲೇ ನಿಂತು ಕಣ್ಣೀರು ಸುರಿಸಿದ್ದಾರೆ. ಅಲ್ಲಿಂದ ಬಂದರೂ ಅಧ್ಯಕ್ಷರ ಭೇಟಿ ಆಗಲಿಲ್ಲ ಎಂದು ಮಹಿಳೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ವೇಳೆ ಕಾಂಗ್ರೆಸ್ ನಾಯಕರು ಆಕೆಗೆ ಸಾಂತ್ವನ ಹೇಳಿದ್ದಾರೆ. ಸಾಂತ್ವನ ಹೇಳಿದರೂ ಮಹಿಳೆ ನನಗೆ ಅಧ್ಯಕ್ಷರನ್ನು ಭೇಟಿಯಾಗಲೇ ಬೇಕು ಎಂದು ಪಟ್ಟು ಹಿಡಿದು ಬೇಸರ ವ್ಯಕ್ತಪಡಿಸಿದ್ದಾರೆ.

KPCC

ಇತ್ತ ಸಿದ್ದರಾಮಯ್ಯ ಹಾಗೂ ಡಿಕೆಶಿ ಇಂದು ಆಗಸ್ಟ್ 15 ರ ಫ್ರೀಡಂ ಮಾರ್ಚ್ ನಲ್ಲಿ ಧರಿಸಲಿರುವ ಟೀ ಶರ್ಟ್ ಹಾಗೂ ಹ್ಯಾಟ್ ಬಿಡುಗಡೆ ಮಾಡಿದರು. ಬಿಡುಗಡೆ ನಂತರ ಯಾರಿಗೆ ಹಾಕೋದು ಅಂತ ಸಿದ್ದರಾಮಯ್ಯ ಕೈಗೆ ಡಿಕೆಶಿ ಟೋಪಿ ಕೊಟ್ಟರು. ಈ ವೇಳೆ ಸಿದ್ದರಾಮಯ್ಯ ಅವರು, ಪಕ್ಕದಲ್ಲಿ ಕುಳಿತಿದ್ದ ಸಲೀಂ ಅಹಮ್ಮದ್ ಬಿಟ್ಟು ಅವರ ಪಕ್ಕದಲ್ಲಿ ಕುಳಿತಿದ್ದ ಕೆ.ಜೆ.ಜಾರ್ಜ್ ಗೆ ಟೋಪಿ ಹಾಕಿದರು. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಗಟ್ಟಿಯಾಯ್ತು ಡಿಕೆ, ಸಿದ್ದು ಜೋಡಿ- ಪರಸ್ಪರ ಟೋಪಿ ಹಾಕಿಕೊಂಡ ನಾಯಕರು

SIDDARAMAIAH DK SHIVAKUMAR 2

ಇದೇ ವೇಳೆ ಸಿದ್ದರಾಮಯ್ಯಗೆ ಡಿಕೆಶಿ ಟೋಪಿ ಹಾಕಿದರು. ಡಿಕೆಶಿ ಟೋಪಿ ಹಾಕುತ್ತಿದ್ದಂತೆ ತಾವು ಒಂದು ಟೋಪಿ ತೆಗೆದುಕೊಂಡು ಅದನ್ನು ಡಿಕೆಶಿಗೆ ಹಾಕಿದರು. ಈ ಮೂಲಕ ಸಿದ್ದರಾಮಯ್ಯ ಹಾಗೂ ಡಿಕೆಶಿ ನಮ್ಮ ಲ್ಲಿ ಯಾವುದೇ ಮುನಿಸಿಲ್ಲ ಎಂಬುದನ್ನು ಸಾರಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *