ಅಜಾದಿ ಕಾ ಅಮೃತ ಮಹೋತ್ಸವದ ಹಿಂದೆ ಮೂರು ಮುಖ್ಯ ಕಾರಣವಿದೆ: ಅಮಿತ್ ಶಾ

Public TV
2 Min Read
AmitShah

ಬೆಂಗಳೂರು: ಅಜಾದಿ ಕಾ ಅಮೃತ ಮಹೋತ್ಸವದ ಹಿಂದೆ ಮೂರು ಮುಖ್ಯ ಕಾರಣವಿದೆ ಎಂದು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ತಿಳಿಸಿದರು.

ಕೇಂದ್ರ ಸಂಸ್ಕೃತಿ ಇಲಾಖೆ ವತಿಯಿಂದ ಖಾಸಗಿ ಹೋಟೆಲ್‌ನಲ್ಲಿ ಸಂಕಲ್ಪ ಸಿದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಗಳ ಸಚಿವ ಕಿಶನ್ ರೆಡ್ಡಿ, ಸಿಎಂ ಬಸವರಾಜ ಬೊಮ್ಮಾಯಿ ಉಪಸ್ಥಿತಿಯಲ್ಲಿದ್ದರು. ಇದು ಸಂಕಲ್ಪ ಸಿದ್ಧಿಯ 3ನೇ ಆವೃತ್ತಿಯ ಕಾರ್ಯಕ್ರಮವಾಗಿದೆ. ಇದನ್ನೂ ಓದಿ: ರಾಷ್ಟ್ರಧ್ವಜದ ಮೇಲೆ ಕಾಂಗ್ರೆಸ್‍ನವರಿಗೆ ಇರುವುದು ಹುಸಿ ಪ್ರೇಮ: ಬಿಜೆಪಿ 

Image

ಈ ವೇಳೆ ಸಭೆಯನ್ನು ಉದ್ದೇಶಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಭಾರತ ಅಜಾದಿ ಕಾ ಅಮೃತ ಮಹೋತ್ಸವ ಆಚರಿಸುತ್ತಿದೆ. ಇದರ ಹಿಂದೆ ಮೂರು ಉದ್ದೇಶವಿದೆ. ಯುವ ಪೀಳಿಗೆಗೆ ಸ್ವಾತಂತ್ರ್ಯದ ಬಗ್ಗೆ ಅರಿವು ಮನವರಿಕೆ ಮಾಡುವುದು. ದೇಶದ ವಿಕಾಸದಲ್ಲಿ ಯುವ ಪೀಳಿಗೆ ಪಾತ್ರ ಅನಿವಾರ್ಯ. 75 ವರ್ಷದ ದೇಶದ ಸಾಧನೆಗಳನ್ನು ಜನತೆಗೆ ತಲುಪಿಸುವುದು ಎರಡನೇ ಉದ್ದೇಶ. ಈಗ ಸ್ವಾತಂತ್ರ್ಯದ ಅಮೃತಮಹೋತ್ಸವ ಮಾಡ್ತಿದ್ದೇವೆ. ಮುಂದೆ ಶತಮಾನೋತ್ಸವವನ್ನು ಕೂಡ ಆಚರಿಸುತ್ತೇವೆ ಎಂದು ತಮ್ಮ ಉದ್ದೇಶವನ್ನು ತಿಳಿಸಿದರು.

ಈ ಮುಂದಿನ ಅವಧಿಯಲ್ಲಿ ಎಲ್ಲ ಕ್ಷೇತ್ರಗಳಲ್ಲೂ ಭಾರತ ಮುಂಚೂಣಿಯಲ್ಲಿರಬೇಕು. ಜಗತ್ತನ್ನು ಮುನ್ನಡೆಸುವ ಸಾಲಿನಲ್ಲಿ ಭಾರತ ಮುಂಚೂಣಿಯಲ್ಲಿರಬೇಕು. ಇದನ್ನು ಸಾಕಾರಗೊಳಿಸಲು ಎಲ್ಲರೂ ಉಳಿದ 25 ವರ್ಷದಲ್ಲಿ ಶ್ರಮಿಸಬೇಕು. ವಿಕಾಸದಲ್ಲಿ ಭಾರತ ಎಲ್ಲ ದೇಶಗಳಿಗೆ ಮಾದರಿ. ಎಲ್ಲ ರಾಷ್ಟ್ರಗಳು ಭಾರತದತ್ತ ನೋಡುತ್ತಿವೆ. ಎಲ್ಲ ಕ್ಷೇತ್ರಗಳಲ್ಲಿಯೂ ಭಾರತ ಈಗಾಗಲೇ ತನ್ನ ಚಾಪು ಮೂಡಿಸಿದೆ ಎಂದು ಸಂತೋಷ ವ್ಯಕ್ತಪಡಿಸಿದರು.

ಈ ವಿಕಾಸದ ಹಾದಿಯಲ್ಲಿ ಜನವರ್ಗವನ್ನೂ ಒಳಗೊಳ್ಳುವಂತೆ ಮಾಡಿಕೊಳ್ಳಬೇಕು. ಹಿಂದಿನ ಸರ್ಕಾರಗಳು ಇದ್ದಾಗ ಹಲವು ಅಕ್ರಮಗಳು ಬಯಲಿಗೆ ಬಂದಿದ್ದವು. ನಿತ್ಯ ಪತ್ರಿಕೆಯ ಮುಖಪುಟದಲ್ಲಿ ಭ್ರಷ್ಟಾಚಾರದ ಹೆಡ್‍ಲೈನ್‍ಗಳೆ ರಾರಾಜಿಸುತ್ತಿತ್ತು. ಎಲ್ಲ ದೇಶಗಳು ಭಾರತವನ್ನು ಬೇರೆ ದೃಷ್ಟಿಯಲ್ಲಿ ನೋಡ್ತಿತ್ತು. ಬಹಳ ಕಾಲದ ನಂತರ ಪೂರ್ಣಬಹುಮತದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಿತು. ಜನರೇ ಆಯ್ಕೆ ಮಾಡಿರುವ ಪೂರ್ಣಬಹುಮತದ ಸರ್ಕಾರಕ್ಕೆ ಈಗ ಎಂಟು ವರ್ಷ ತುಂಬಿದೆ ಎಂದು ಹರ್ಷಗೊಂಡರು. ಇದನ್ನೂ ಓದಿ: ಭಾರತದ ಮೂರನೇ ಅತಿ ದೊಡ್ಡ ಕಲ್ಲಿದ್ದಲು ಪೂರೈಕೆದಾರ ರಷ್ಯಾ 

NARENDRA MODI 3

ಈಗ ತಿರುಗಿ ಹಿಂದೆ ನೋಡಿದಾಗ ಜಗತ್ತಿನಲ್ಲಿ ವೇಗವಾಗಿ ಬೆಳೆಯುತ್ತಿರುವ ಅರ್ಥವ್ಯವಸ್ಥೆಯನ್ನು ದೇಶದಲ್ಲಿ ನಾವು ನಿರ್ಮಾಣ ಮಾಡಿದ್ದೇವೆ. ಜಿಎಸ್‍ಟಿಯ ಜಾರಿ ಸಫಲತೆ ಕಂಡಿದೆ. ದುರ್ಬಲಗೊಂಡಿದ್ದ ದೇಶದ ಅರ್ಥವ್ಯವಸ್ಥೆಯನ್ನು ಬಲಪಡಿಸುವ ಕಾರ್ಯದಲ್ಲಿ ಪ್ರಧಾನಿ ಮೋದಿ ಅವರ ಕಾರ್ಯ ಹೆಚ್ಚಾಗಿದೆ. ಆತ್ಮ ನಿರ್ಭರತೆ ಮತ್ತು ಮೇಕ್ ಇನ್ ಇಂಡಿಯಾ ಜೊತೆಗೆ ಭಾರತದ ಅರ್ಥ ವ್ಯವಸ್ಥೆಗೆ ಒಂದು ಅಭಿವೃದ್ಧಿಯ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದ್ದೇವೆ ಎಂದು ತಿಳಿಸಿದರು.

Amit Shah India Economy 2

ಭಾರತದ ಅರ್ಥವ್ಯವಸ್ಥೆಯನ್ನು ಲಘುವಾಗಿ ನೋಡುತ್ತಿದ್ದವರು ಈಗ ಆ ಧೈರ್ಯ ಮಾಡಲಾರರು. ಪ್ರಧಾನಿ ಮೋದಿ ಕಾಲದ ಸರ್ಕಾರ ಕೋವಿಡ್ ನಿರ್ವಹಣೆ ಮಾಡಿದ್ದು, ಜಗತ್ತಿಗೆ ಮಾದರಿ. ಕೋವಿಡ್, ಲಾಕ್‍ಡೌನ್‍ನಿಂದ ಬೇರೆ ದೇಶಗಳು ಆರ್ಥಿಕವಾಗಿ ಕಂಗೆಟ್ಟಿದ್ದವು. ಆದ್ರೆ ಭಾರತ ಹೊಸ ಮಾದರಿಯಲ್ಲಿ ಪರಿಹಾರ ಕಂಡಕೊಂಡು ಕೋವಿಡ್ ಮೆಟ್ಟಿನಿಂತು ಆರ್ಥಿಕತೆ ಸುಧಾರಣೆಯನ್ನು ಕೂಡ ಮಾಡಿಲ್ಲ ಎಂದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *