ಅಕ್ರಮ ಆಸ್ತಿ ಪ್ರಕರಣ – ಸರ್ಕಾರಿ ನೌಕರನ ಮನೆಯಲ್ಲಿ ತನಿಖೆ, ಹೆದರಿ ವಿಷ ಸೇವನೆ

Public TV
1 Min Read
Madhya Pradesh Clerk

ಭೋಪಾಲ್: ಅಕ್ರಮ ಆಸ್ತಿ ಪ್ರಕರಣದ ಮೇಲೆ ಮಧ್ಯಪ್ರದೇಶದ ಪೊಲೀಸ್ ಆರ್ಥಿಕ ಅಪರಾಧಗಳ ವಿಭಾಗ(ಇಒಡಬ್ಲ್ಯು) ರಾಜ್ಯ ಸರ್ಕಾರದ ಗುಮಾಸ್ತರೊಬ್ಬರ ಮನೆಯಲ್ಲಿ ಹುಡುಕಾಟ ನಡೆಸಿ, 85 ಲಕ್ಷ ರೂ.ಗೂ ಹೆಚ್ಚು ನಗದು ವಶಪಡಿಸಿಕೊಂಡಿದೆ. ಆದರೆ ಈ ವೇಳೆ ಗುಮಾಸ್ತ ವಿಷ ಕುಡಿದಿರುವುದಾಗಿ ವರದಿಯಾಗಿದೆ.

ತಿಂಗಳಿಗೆ ಸುಮಾರು 50,000 ರೂ. ವೇತನ ಪಡೆಯುತ್ತಿರುವ ಮೇಲ್ ವಿಭಾಗದ ಗುಮಾಸ್ತ ಹೀರೋ ಕೇಸ್ವಾನಿ ಅವರ ನಿವಾಸದಲ್ಲಿ ನಡೆಸಿದ ಶೋಧದ ವೇಳೆ, ಇಒಡಬ್ಲ್ಯು ತಂಡ ಕೋಟ್ಯಂತರ ರೂ. ಮೌಲ್ಯದ ಹಲವಾರು ಆಸ್ತಿಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಶಪಡಿಸಿಕೊಂಡಿದೆ ಎಂದು ತಿಳಿಸಿದೆ. ಇದನ್ನೂ ಓದಿ: ‘ಹರ್ ಘರ್ ತಿರಂಗಾ’ ಆಂದೋಲನಕ್ಕೆ ಯಶ್, ಸುದೀಪ್ ಸೇರಿದಂತೆ ಹಲವು ಗಣ್ಯರು ಸಾಥ್

Economic Offences Wing EOW

ಬೈರಾಗರ್ ಪ್ರದೇಶದಲ್ಲಿನ ಕೇಸ್ವಾನಿ ಅವರ ಮನೆಯಲ್ಲಿ ಬುಧವಾರ ತಡರಾತ್ರಿಯವರೆಗೂ ಶೋಧ ಕಾರ್ಯಾಚರಣೆ ಮುಂದುವರಿದಿದ್ದು, ಪತ್ತೆಯಾದ ಹಣದ ರಾಶಿಯನ್ನು ನಿಖರವಾಗಿ ಲೆಕ್ಕ ಹಾಕಲು ಅಧಿಕಾರಿಗಳು ನೋಟು ಎಣಿಕೆಯ ಯಂತ್ರವನ್ನು ತರಿಸಿದ್ದರು.

ತನಿಖೆಯ ವೇಳೆ ಕೇಸ್ವಾನಿ ಬಾತ್ರೂಮ್ ಕ್ಲೀನರ್(ಫಿನಾಯಿಲ್) ಕುಡಿದಿರುವುದಾಗಿ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಹಾಗೂ ತಮ್ಮ ಮನೆಯಲ್ಲಿ ಹುಡುಕಾಟ ನಡೆಸದಂತೆ ತಡೆಯಲು ಪ್ರಯತ್ನಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಮಿಶ್ರಾ ತಿಳಿಸಿದ್ದಾರೆ. ಇದನ್ನೂ ಓದಿ: ಭಾರತದ ಮೂರನೇ ಅತಿ ದೊಡ್ಡ ಕಲ್ಲಿದ್ದಲು ಪೂರೈಕೆದಾರ ರಷ್ಯಾ

ತಕ್ಷಣ ಅವರನ್ನು ರಾಜ್ಯ ಹಮೀಡಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಅವರ ಸ್ಥಿತಿ ಸದ್ಯ ಸ್ಥಿರವಾಗಿದೆ. ಅವರಿಗೆ ರಕ್ತದೊತ್ತಡದ ಸಂಬಂಧಿತ ಸಮಸ್ಯೆಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *