Commonwealth Games: ಆಂಗ್ಲರ ವಿರುದ್ಧ ಗೆಲ್ಲುವ ಅವಕಾಶ ಕೈಚೆಲ್ಲಿದ ಭಾರತದ ಹಾಕಿ ತಂಡ

Public TV
1 Min Read
Hocky

ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್-2022ರಲ್ಲಿ ಭಾರತದ ಪುರುಷರ ಹಾಕಿ ತಂಡವು ಇಂಗ್ಲೆಂಡ್ ವಿರುದ್ಧ ನಡೆದ ತನ್ನ ಪೂಲ್ ಪಂದ್ಯದಲ್ಲಿ ಗೆಲ್ಲುವ ಅವಕಾಶ ಕಳೆದುಕೊಂಡು ನಿರಾಶೆಗೆ ಒಳಗಾಗಿದೆ. 4-4 ರಲ್ಲಿ ಪಂದ್ಯವನ್ನು ಡ್ರಾ ಮಾಡಿಕೊಂಡು, ಸುಲಭದಲ್ಲಿ ಗೆಲ್ಲುವ ಅವಕಾಶವನ್ನು ಕೈಚೆಲ್ಲಿದೆ.

ಪೂಲ್-ಬಿ ನಲ್ಲಿ ನಡೆದ ಈ ಪಂದ್ಯದಲ್ಲಿ, ಕೊನೆಯ ಕ್ವಾರ್ಟರ್‌ನಲ್ಲಿ ಭಾರತ ತಂಡವು ಒಂದರ ನಂತರ ಒಂದರಂತೆ ಹಲವು ಬಾರಿ ಎಡವಿತು. ಇದರಿಂದಾಗಿ ಟೀಂ ಇಂಡಿಯಾ ದೀರ್ಘಕಾಲ ಆಂಗ್ಲರ ವಿರುದ್ಧ ಸೆಣಸಬೇಕಾಯಿತು. ತಂಡದಲ್ಲಿದ್ದ ಗೊಂದಲಗಳಿಂದಾಗಿ ಇಂಗ್ಲೆಂಡ್ ಮೂರು ಗೋಲ್‌ಗಳ ಲಾಭ ಪಡೆಯಿತು. ಈ ಮೂಲಕ ಇಂಗ್ಲೆಂಡ್ ತಂಡ ಪಂದ್ಯವನ್ನು ಡ್ರಾ ಮಾಡುವುದರಲ್ಲಿ ಯಶಸ್ವಿಯಾಯಿತು. ಈ ಫಲಿತಾಂಶದ ನಂತರ, ಭಾರತ ತಂಡವು ಪೂಲ್‌ನ ಅಗ್ರಸ್ಥಾನಕ್ಕೆ ಹೋಗುವ ಅವಕಾಶವನ್ನೂ ಕಳೆದುಕೊಂಡಿತು. ಇದನ್ನೂ ಓದಿ: Commonwealth Games: ಪದಕಗೆಲ್ಲೋ ತವಕದಲ್ಲಿದ್ದ ಭಾರತದ ಮೀನಾಕ್ಷಿಗೆ ಅಪಘಾತ – ಆಂಗ್ಲರ ಪಾಲಾದ ಚಿನ್ನ

Hocky 1

ಪಂದ್ಯದಲ್ಲಿ, ಭಾರತ ತಂಡವು ಮೊದಲ ಕ್ವಾರ್ಟರ್‌ನಲ್ಲಿಯೇ 2-0 ಮುನ್ನಡೆ ಸಾಧಿಸಿತ್ತು. ಇದು 2ನೇ ಕ್ವಾರ್ಟರ್‌ನ ಅಂತ್ಯದಲ್ಲಿ 3-0 ಸಾಧಿಸುವ ಮೂಲಕ ಇಂಗ್ಲೆಂಡ್ ಅನ್ನು ಹಿಂದಕ್ಕೆ ತಳ್ಳಿತ್ತು. ಆದಾಗ್ಯೂ ಇಂಗ್ಲೆಂಡ್ 3ನೇ ಕ್ವಾರ್ಟರ್‌ನಲ್ಲಿ ಪುನರಾಗಮನದ ಕಡೆಗೆ ಮೊದಲ ಹೆಜ್ಜೆ ಇಡುತ್ತಾ, 3-1 ಅಂತರಕ್ಕೆ ಅಂಕ ಗಳಿಸಿತ್ತು. ನಂತರ 4ನೇ ಕ್ವಾರ್ಟರ್‌ನಲ್ಲಿ, ಭಾರತ ತಕ್ಷಣವೇ ಸ್ಕೋರ್ ಅನ್ನು 4-1 ಗೆ ಇಳಿಸಿತು. ಆದರೆ ಕೊನೆಯ 10 ನಿಮಿಷಗಳಲ್ಲಿ ಭಾರತೀಯ ಆಟಗಾರರು ಫೌಲ್ ಮಾಡುತ್ತಲೇ ಇದ್ದರು, ಇದರಿಂದಾಗಿ ಇಬ್ಬರು ಆಟಗಾರರು ಎಲ್ಲೋ ಕಾರ್ಡ್ ಪಡೆದು ಹೊರಹೋಗಬೇಕಾಯಿತು. ಕಡಿಮೆ ಆಟಗಾರರಿಂದಾಗಿ ಗೇಲನ್ನು ಸರಿಯಾಗಿ ರಕ್ಷಿಸಲು ಸಾಧ್ಯವಾಗದ ಭಾರತ ತಂಡ ಸಂಪೂರ್ಣ ಹಿನ್ನಡೆ ಅನುಭವಿಸಿತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *