LatestLeading NewsMain PostSports

Commonwealth Games: ಪದಕಗೆಲ್ಲೋ ತವಕದಲ್ಲಿದ್ದ ಭಾರತದ ಮೀನಾಕ್ಷಿಗೆ ಅಪಘಾತ – ಆಂಗ್ಲರ ಪಾಲಾದ ಚಿನ್ನ

Advertisements

ಬರ್ಮಿಂಗ್‌ಹ್ಯಾಮ್: ಪದಕ ಗೆಲ್ಲುವ ತವಕದಲ್ಲಿದ್ದ ಭಾರತದ ಸೈಕ್ಲಿಸ್ಟ್ ಮೀನಾಕ್ಷಿ ಅಪಘಾತಕ್ಕೀಡಾದ್ದರಿಂದ ಗೆಲುವಿನ ಸನಿಹದಲ್ಲಿದ್ದ ಚಿನ್ನದ ಪದಕ ಆಂಗ್ಲರ ಪಾಲಾಯಿತು.

ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ 10 ಕಿಮೀ ಸ್ಕ್ರ್ಯಾಚ್‌ ರೇಸ್‌ನಲ್ಲಿ ಭಾರತೀಯ ಸೈಕ್ಲಿಸ್ಟ್ ಮೀನಾಕ್ಷಿ ಅಪಘಾತಕ್ಕೀಡಾಗಿದ್ದರಿಂದ ಅವರು ಸ್ಪರ್ಧೆಯಿಂದ ಕಾಲ್ಕಿತ್ತರು. ಇದೇ ರೇಸ್‌ನಲ್ಲಿ ಇಂಗ್ಲೆಂಡ್‌ನ ಪ್ರತಿಸ್ಪರ್ಧಿ ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇದನ್ನೂ ಓದಿ: Commonwealth Games: ಟಾಪ್-10 ಪಟ್ಟಿಯಲ್ಲಿ ಭಾರತಕ್ಕೆ ಸ್ಥಾನ

ಅಪಘಾತಕ್ಕೀಡಾದ್ದರಿಂದ ಬೈಸಿಕಲ್‌ನಿಂದ ಕೆಳಗೆ ಬಿದ್ದ ಮೀನಾಕ್ಷಿ ಬ್ಯಾಂಕಿಂಗ್ ಟ್ರ್ಯಾಕ್‌ಗೆ ಜಾರಿದರು. ಈ ವೇಳೆ ಮೀನಾಕ್ಷಿ ಅವರನ್ನ ಹಿಂದಿಕ್ಕಲು ಬರುತ್ತಿದ್ದ ನ್ಯೂಜಿಲೆಂಡ್‌ನ ಬ್ರಯೋನಿ ಬೋಥಾ ಸಹ ಅಪಘಾತಕ್ಕೀಡಾಗಿ ಮೀನಾಕ್ಷಿ ಅವರ ಮೇಲೆಯೇ ಸೈಕಲ್ ಹತ್ತಿಸಿ ಕೆಳಗೆಬಿದ್ದರು. ಮೀನಾಕ್ಷಿ ಅವರಿಗೆ ಪೆಟ್ಟಾಗಿದ್ದರಿಂದ ಸ್ಪರ್ಧೆಯಿಂದ ಹೊರಬರಬೇಕಾಯಿತು. ನ್ಯೂಜಿಲೆಂಡ್‌ನ ಬ್ರಯೋನಿ ಬೋಥಾ ಕೂಡ ಅಪಘಾತಕ್ಕೆ ಸಿಲುಕಿದರು. ಇದನ್ನೂ ಓದಿ: Commonwealth Games: ಹರ್ಜಿಂದರ್ ಹವಾ – ಭಾರತಕ್ಕೆ ಮತ್ತೊಂದು ಕಂಚು

ಅಪಘಾತದ ನಂತರ ವೈದ್ಯರು ಸ್ಥಳಕ್ಕೆ ಧಾವಿಸಿ ಇಬ್ಬರು ಸವಾರರನ್ನು ರೇಸ್‌ನಿಂದ ಹೊರಗೆ ಕರೆತಂದರು. ಮೀನಾಕ್ಷಿ ಅವರನ್ನ ಸ್ಟ್ರೆಚರ್‌ ಮೇಲೆ ಕರೆದುಕೊಂಡು ಹೋಗಲಾಯಿತು. ನಂತರ ಈ ಸ್ಪರ್ಧೆಯಲ್ಲಿ ಇಂಗ್ಲೆಂಡ್‌ನ ಲಾರಾ ಕೆನ್ನಿ ಚಿನ್ನ ಗೆದ್ದರು.

ಸದ್ಯ ಮೀನಾಕ್ಷಿ ಅಪಘಾತದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಇದಕ್ಕೆ ಕ್ರೀಡಾಪ್ರಿಯರು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ದಿನಗಳಲ್ಲಿ ಇದು ಲೀ ವ್ಯಾಲಿ ವೆಲೋ ಪಾರ್ಕ್‌ನಲ್ಲಿ ನಡೆದ 2ನೇ ಅಪಘಾತವಾಗಿದೆ.

Live Tv

Leave a Reply

Your email address will not be published.

Back to top button