ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಗೇಮ್ಸ್-2022 ಕ್ರೀಡಾಕೂಟದಲ್ಲಿ ಕರ್ನಾಟಕ ಮೂಲದ ಕ್ರೀಡಾಪಟು ಕಂಚಿನ ಪದಕ ಗೆದ್ದಿದ್ದು, ಭಾರತಕ್ಕೆ 2ನೇ ಪದಕ ಲಭಿಸಿದೆ.
Team India wins its second Medal. Congratulations Gururaja Poojary on winning the ???? in weightlifting ????️♀️ in the 61 KG category. #Ekindiateamindia #B2022 pic.twitter.com/SIWhkyINyQ
— Team India (@WeAreTeamIndia) July 30, 2022
ಕರ್ನಾಟಕದ ಗುರುರಾಜ್ ಪೂಜಾರಿ ವೇಟ್‌ಲಿಫ್ಟಿಂಗ್ 61 ಕೆಜಿ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದ್ದಾರೆ. ಇದನ್ನೂಓದಿ: ಭಾರತದ ಪದಕ ಬೇಟೆ ಆರಂಭ – ಸಂಕೇತ್‌ಗೆ ವೇಟ್‌ಲಿಫ್ಟಿಂಗ್‌ನಲ್ಲಿ ಬೆಳ್ಳಿ
ಗುರುರಾಜ್ ಒಟ್ಟು 269 ಕೆಜಿ ತೂಕ ಎತ್ತುವ ಮೂಲಕ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಸ್ನ್ಯಾಚ್ ಸುತ್ತಿನ ಮುಕ್ತಾಯದ ನಂತರ ಅವರು ನಾಲ್ಕನೇ ಸ್ಥಾನದಲ್ಲಿದ್ದರು. ಇದಕ್ಕೂ ಮುನ್ನ ಮೊದಲ ಎರಡು ಪ್ರಯತ್ನದಲ್ಲಿ ಕ್ರಮವಾಗಿ 118, 115 ಕೆ.ಜಿ ಎತ್ತಿದ್ದರು. ಈ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟಗಳಲ್ಲಿ ಗುರುರಾಜ್ 2ನೇ ಪದಕ ವಿಜೇತರಾದ ಸಾಧನೆ ಮಾಡಿದ್ದಾರೆ. ಈ ಹಿಂದೆ 2018ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲೂ ಬೆಳ್ಳಿ ಗೆದ್ದಿದ್ದರು.