ಗಿಲ್, ಚಹಲ್ ಆಟಕ್ಕೆ ದಕ್ಕಿದ ಜಯ – ವೆಸ್ಟ್ ಇಂಡೀಸ್‍ನಲ್ಲಿ ಚೊಚ್ಚಲ ಬಾರಿಗೆ ಕ್ಲೀನ್ ಸ್ವೀಪ್ ಸಾಧಿಸಿದ ಭಾರತ

Public TV
2 Min Read
TEAM INDIA 1 5

ಟ್ರಿನಿನಾಡ್: ಬ್ಯಾಟಿಂಗ್‍ನಲ್ಲಿ ಶುಭಮನ್ ಗಿಲ್ ಮತ್ತು ಬೌಲಿಂಗ್‍ನಲ್ಲಿ ಯಜುವೇಂದ್ರ ಚಹಲ್ ಆಟಕ್ಕೆ ಥಂಡಾ ಹೊಡೆದ ವೆಸ್ಟ್ ಇಂಡೀಸ್ ಸೋತು ಮುಖಭಂಗ ಅನುಭವಿಸಿದೆ. ಭಾರತ 119 ರನ್‍ಗಳ ಜಯದೊಂದಿಗೆ ಸರಣಿ ಕ್ಲೀನ್ ಸ್ವೀಪ್ ಸಾಧಿಸಿ ಮೆರೆದಾಡಿದೆ.

TEAM INDIA 2 1

ಮಳೆಯ ನಡುವೆ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಶುಭಮನ್ ಗಿಲ್, ಶಿಖರ್ ಧವನ್, ಶ್ರೇಯಸ್ ಅಯ್ಯರ್ ಭರ್ಜರಿ ಬ್ಯಾಟ್ ಬೀಸಿ 36 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 225 ರನ್ ಒಟ್ಟುಗೂಡಿಸಿದರು. ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ 35 ಓವರ್‌ಗಳಲ್ಲಿ 226 ರನ್‍ಗಳ ಗುರಿಯೊಂದಿಗೆ ಕಣಕ್ಕಿಳಿದ ವಿಂಡೀಸ್, ಭಾರತದ ಬೌಲರ್‌ಗಳ ಬಿಗಿ ದಾಳಿಗೆ ನಲುಗಿ 26 ಓವರ್‌ಗಳಲ್ಲಿ ಕೇವಲ 147 ರನ್‍ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಭಾರತ 3-0 ಅಂತರದಲ್ಲಿ ಸರಣಿ ಗೆದ್ದು ವಿಂಡೀಸ್‍ಗೆ ತವರಿನಲ್ಲಿ ಶಾಕ್ ನೀಡಿತು. ಇದನ್ನೂ ಓದಿ: ಬಿಸಿಸಿಐ ಶೀರ್ಷಿಕೆ ಪ್ರಾಯೋಜಕ ಪಡೆದುಕೊಂಡ ಮಾಸ್ಟರ್ ಕಾರ್ಡ್ – ಪ್ರತಿ ಪಂದ್ಯಕ್ಕೆ ಸಿಗುತ್ತೆ ಕೋಟಿ ಕೋಟಿ

TEAM INDIA 3 1

226 ರನ್‍ಗಳ ಗುರಿಯನ್ನು ಬೆನ್ನಟ್ಟುವ ವಿಶ್ವಾಸದಲ್ಲಿ ಕಣಕ್ಕಿಳಿದ ವೆಸ್ಟ್ ಇಂಡೀಸ್ ಆರಂಭದಿಂದಲೇ ವಿಕೆಟ್ ಕಳೆದುಕೊಂಡು ಸಾಗಿತು. ಬ್ರೆಂಡನ್ ಕಿಂಗ್ 42 ರನ್ (37 ಎಸೆತ, 5 ಬೌಂಡರಿ, 1 ಸಿಕ್ಸ್) ಮತ್ತು ನಿಕೋಲಸ್ ಪೂರನ್ 42 ರನ್ (32 ಎಸೆತ, 5 ಬೌಂಡರಿ, 1 ಸಿಕ್ಸ್) ಸಿಡಿಸಿ ಹೋರಾಡಿದ್ದನ್ನು ಹೊರತು ಪಡಿಸಿ ಉಳಿದ ಬ್ಯಾಟ್ಸ್‌ಮ್ಯಾನ್‌ಗಳು ಬಂದಷ್ಟೇ ವೇಗವಾಗಿ ಪೆವಿಲಿಯನ್ ಪರೇಡ್ ನಡೆಸಿದರು. ಚಹಲ್ 4 ಓವರ್ ಎಸೆದು 17 ರನ್ ನೀಡಿ 4 ವಿಕೆಟ್ ಕಿತ್ತು ವಿಂಡೀಸ್‍ಗೆ ಕಡಿವಾಣ ಹಾಕಿದರು. ಇವರಿಗೆ ಉತ್ತಮ ಸಾಥ್ ನೀಡಿದ ಸಿರಾಜ್, ಠಾಕೂರ್ ತಲಾ 2 ವಿಕೆಟ್, ಅಕ್ಷರ್ ಪಟೇಲ್, ಪ್ರಸಿದ್ಧ್ ಕೃಷ್ಣ ತಲಾ 1 ವಿಕೆಟ್ ಕಿತ್ತು ಮಿಂಚಿದರು.

Yuzvendra Chahal

ಈ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ ಉತ್ತಮ ಆರಂಭ ಪಡೆಯಿತು. ಶಿಖರ್ ಧವನ್, ಗಿಲ್ ಜೋಡಿ ಮೊದಲ ವಿಕೆಟ್‍ಗೆ 113 ರನ್ (138 ಎಸೆತ) ಜೊತೆಯಾಟವಾಡಿ ಭದ್ರ ಬುನಾದಿ ಹಾಕಿಕೊಟ್ಟಿತು. ಧವನ್ 58 ರನ್ (74 ಎಸೆತ, 7 ಬೌಂಡರಿ) ಬಾರಿಸಿ ಔಟ್ ಆದರೆ ಇತ್ತ ಗಿಲ್ ನಿಧಾನಗತಿಯಲ್ಲಿ ಅಬ್ಬರಿಸಲು ಆರಂಭಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಶ್ರೇಯಸ್ ಅಯ್ಯರ್ 44 ರನ್ (34 ಎಸೆತ, 4 ಬೌಂಡರಿ, 1 ಸಿಕ್ಸ್) ಚಚ್ಚಿ ವಿಕೆಟ್ ಕಳೆದುಕೊಂಡರು. ಈ ಮೊದಲು ಗಿಲ್ ಜೊತೆ 2ನೇ ವಿಕೆಟ್‍ಗೆ 86 ರನ್ (58 ಎಸೆತ) ಜೊತೆಯಾಟವಾಡಿ ದೊಡ್ಡ ಮೊತ್ತಕ್ಕೆ ಕಾರಣರಾದರು. ಇದನ್ನೂ ಓದಿ: ನೀರಜ್ ಚೋಪ್ರಾಗೆ ಗಾಯದ ಸಮಸ್ಯೆ – ಕಾಮನ್‍ವೆಲ್ತ್ ಗೇಮ್ಸ್‌ಗೂ ಮುನ್ನವೇ ಭಾರತಕ್ಕೆ ಹಿನ್ನಡೆ

FYtnZ OacAAQymN

2 ರನ್‍ಗಳಿಂದ ಶತಕ ವಂಚಿತರಾದ ಗಿಲ್:
ಮಳೆಯಿಂದಾಗಿ 36 ಓವರ್‌ಗಳಿಗೆ ಇಳಿಕೆ ಕಂಡ ಪಂದ್ಯದಲ್ಲಿ ಗಿಲ್ ಅಜೇಯ 98 ರನ್ (98 ಎಸೆತ, 7 ಬೌಂಡರಿ, 2 ಸಿಕ್ಸ್) ಹೊಡೆದು 2 ರನ್‍ಗಳಿಂದ ಚೊಚ್ಚಲ ಶತಕವಂಚಿತರಾದರು. ಅಂತಿಮವಾಗಿ ಭಾರತ 36 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 225 ರನ್‍ಗಳ ಉತ್ತಮ ಮೊತ್ತ ಕಲೆ ಹಾಕಿತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *