LatestMain PostSports

ನೀರಜ್ ಚೋಪ್ರಾಗೆ ಗಾಯದ ಸಮಸ್ಯೆ – ಕಾಮನ್‍ವೆಲ್ತ್ ಗೇಮ್ಸ್‌ಗೂ ಮುನ್ನವೇ ಭಾರತಕ್ಕೆ ಹಿನ್ನಡೆ

Advertisements

ನವದೆಹಲಿ: ಬರ್ಮಿಂಗ್‍ಹ್ಯಾಮ್‍ನಲ್ಲಿ ನಡೆಯಲಿರುವ ಕಾಮನ್‍ವೆಲ್ತ್ ಗೇಮ್ಸ್‌ಗೂ ಮುನ್ನವೇ ಭಾರತಕ್ಕೆ ಹಿನ್ನಡೆಯಾಗಿದ್ದು, ಪದಕದ ಭರವಸೆಯಾಗಿದ್ದ ನೀರಜ್ ಚೋಪ್ರಾ ಅವರು ಗಾಯದ ಸಮಸ್ಯೆಯಿಂದಾಗಿ ಕಾಮನ್‍ವೆಲ್ತ್ ಗೇಮ್ಸ್‌ನಿಂದ ಈ ಬಾರಿ ಹೊರಗುಳಿದಿದ್ದಾರೆ.

ಈ ಬಗ್ಗೆ ಇಂಡಿಯನ್ ಒಲಿಂಪಿಕ್ ಅಸೋಸಿಯೇಷನ್‍ನ ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಮಾಹಿತಿ ನೀಡಿದ್ದು, ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ ಶಿಪ್‍ನ ಸಂದರ್ಭದಲ್ಲಿ ನೀರಜ್‍ಗೆ ಗಾಯವಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ನೀರಜ್ ಚೋಪ್ರಾ ಅವರಿಗೆ ವಿಶ್ರಾಂತಿಯ ಅಗತ್ಯವಿದೆ. ಆದ್ದರಿಂದ ಅವರು ಕಾಮನ್‍ವೆಲ್ತ್‌ನಲ್ಲಿ ಭಾಗಿಯಾಗಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: World Athletics Championship 2022 – ಬೆಳ್ಳಿ ಪದಕ ಗೆದ್ದ ನೀರಜ್ ಚೋಪ್ರಾ

ಇತ್ತೀಚೆಗೆ ಅಮೆರಿಕದಲ್ಲಿ ನಡೆದ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ ಶಿಪ್‍ನ ಪುರುಷರ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಬೆಳ್ಳಿ ಪದಕ ಗೆದ್ದು ಭಾರತಕ್ಕೆ ಮೊದಲ ಪದಕ ತಂದು ಕೊಟ್ಟಿದ್ದರು. ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ 88.13 ಮೀಟರ್ ಎಸೆಯುವ ಮೂಲಕ ಬೆಳ್ಳಿ ಗೆದ್ದಿದ್ದರು. ಇದನ್ನೂ ಓದಿ: ಮುಂದಿನ ಗುರಿ 90 ಮೀ. ಎಸೆತ – ಪದಕದ ಬಣ್ಣ ಬದಲಾಯಿಸಲು ಪ್ರಯತ್ನಿಸುತ್ತೇನೆ: ನೀರಜ್ ಚೋಪ್ರಾ

Live Tv

Leave a Reply

Your email address will not be published.

Back to top button