ಸ್ಯಾಂಡಲ್‌ವುಡ್‌ಗೆ `ಕಿರಿಕ್ ಪಾರ್ಟಿ’ ಚಿತ್ರದ ಮೂಲಕ ಕನ್ನಡ ಸಿನಿ ಪ್ರೇಕ್ಷಕರಿಗೆ ಪರಿಚಿತರಾದ ನಟಿ ಸಂಯುಕ್ತಾ ಹೆಗ್ಡೆಗೆ, ಸಿನಿಮಾ ಚಿತ್ರೀಕರಣದ ವೇಳೆ ಭಾರಿ ಪೆಟ್ಟಾಗಿದೆ. ಫೈಟಿಂಗ್ ಸೀಕ್ವೆನ್ಸ್ ಮಾಡುವ ಸಂದರ್ಭದಲ್ಲಿ ನಟಿ ಸಂಯುಕ್ತಾಗೆ ಈ ಅವಘಡ ನಡೆದಿದೆ.
ಕನ್ನಡ ಮತ್ತು ಸೌತ್ ಸಿನಿಮಾರಂಗದಲ್ಲಿ ಛಾಪೂ ಮೂಡಿಸುತ್ತಿರುವ ನಟಿ ಸಂಯುಕ್ತ ಹೆಗ್ಡೆಗೆ `ಕ್ರೀಮ್’ ಚಿತ್ರೀಕರಣದ ವೇಳೆ ಭಾರಿ ಪೆಟ್ಟಾಗಿದೆ. ಫೈಟಿಂಗ್ ಸೀಕ್ವೆನ್ಸ್ ಚಿತ್ರೀಕರಿಸುವಾಗ ಈ ಅವಘಡ ನಡೆದಿದೆ. ಡ್ಯೂಪ್ ಬಳಸಿ ಚಿತ್ರೀಕರಣ ಮಾಡೋಣ ಎಂದು ಚಿತ್ರತಂಡ ಒತ್ತಾಯಿಸಿದರೂ ಸಂಯುಕ್ತಾ ಒಪ್ಪದಿದ್ದ ಕಾರಣ ಚಿತ್ರೀಕರಣ ವೇಳೆ ನಟಿಗೆ ಪೆಟ್ಟಾಗಿದೆ. ಸಂಯುಕ್ತಾ ಕಾಲು ಟ್ವಿಸ್ಟ್ ಆಗಿದೆ. ಇದೀಗ ನಟಿಗೆ ಹೆಚ್ಚುವರಿ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ:ವಿಕ್ರಾಂತ್ ರೋಣ ಶೋ ಸಂಖ್ಯೆ ಹೆಚ್ಚಳ: ವಿಶ್ವದಾದ್ಯಂತ 9500 ಶೋ, 2500 ಸ್ಕ್ರೀನ್ ಗಳಲ್ಲಿ ಪ್ರದರ್ಶನ
ಅಭಿಷೇಕ್ ಬಸಂತ್ ನಿರ್ದೇಶನದ ʻಕ್ರೀಮ್ʼ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕ ಡಿ ಕೆ. ದೇವೇಂದ್ರ, ಫೈಟ್ ಮಾಸ್ಟರ್ ಪ್ರಭು ಹಾಗೂ ಛಾಯಾಗ್ರಾಹಕ ಸುನೋಜ್ ವೇಲಾಯುಧನ್ ರವರು ಡ್ಯೂಪ್ ಬಳಸಲು ಒತ್ತಾಯಿಸಿದರೂ ನಾಯಕಿ ಒಪ್ಪಲಿಲ್ಲ ಇದರ ಪರಿಣಾಮ ನಾಯಕಿ ಸಂಯುಕ್ತಾ ಕಾಲು ಟ್ವಿಸ್ಟ್ ಆಗಿದೆ. ಈ ಸಿನಿಮಾದ ಚಿತ್ರೀಕರಣವನ್ನು ಮುಂದೂಡಲಾಗಿದೆ.