ಬಿಗ್ ಬಾಸ್ ರಿಯಾಲಿಟಿ ಶೋನಿಂದ ಗಮನ ಸೆಳೆದು ಅಪಾರ ಅಭಿಮಾನಿಗಳ ಮನಗೆದ್ದಿರುವ ನಿವೇದಿತಾ ಗೌಡ ಸದ್ಯ ವೈಯಕ್ತಿಕ ಜೀವನ, ನಟನೆ ಅಂತಾ ಫುಲ್ ಬ್ಯುಸಿಯಾಗಿದ್ದಾರೆ. ಈಗ ತಮ್ಮ ಅಭಿಮಾನಿಗಳಿಗೆ ನಿವೇದಿತಾ, ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಕನ್ನಡ ಕಿರುತೆರೆಯ ದೊಡ್ಮನೆ ಶೋ ಮೂಲಕ ಸಿಕ್ಕಾಪಟ್ಟೆ ನೇಮು ಫೇಮು ಗಿಟ್ಟಿಸಿಕೊಂಡಿರುವ ನಿವಿ, ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್‌ಗಟ್ಟಲೇ ಫಾಲೋವರ್ಸ್ ಇದ್ರೂ, ಇದುವರೆಗೂ ಯಾವುದೇ ಸಿನಿಮಾದಲ್ಲಿ ನಿವೇದಿತಾ ಕಾಣಿಸಿಕೊಂಡಿರಲಿಲ್ಲ. ಈಗ ಬೆಳ್ಳಿಪರದೆಯಲ್ಲಿ ಮಿಂಚಲು ಚಂದನದ ಗೊಂಬೆ ನಿವಿ ಸಜ್ಜಾಗಿದ್ದಾರೆ. ಇದನ್ನೂ ಓದಿ:ನೇಪಾಳದಲ್ಲೂ ರಿಲೀಸ್ ಆಗಲಿದೆ ವಿಕ್ರಾಂತ್ ರೋಣ: 27 ದೇಶಗಳಲ್ಲಿ ಪ್ರಿವ್ಯೂ ಶೋ
ಇತ್ತೀಚೆಗಷ್ಟೇ ನಿವೇದಿತಾ ಮಿಸೆಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ನಂತರ ಸಾಲು ಸಾಲು ಸಿನಿಮಾ ಅವಕಾಶಗಳು ಹರಿದು ಬರುತ್ತಿದೆ. ಕನ್ನಡ ಸೇರಿದಂತೆ ತೆಲುಗು ಮತ್ತು ತಮಿಳಿನಲ್ಲಿ ಸಿನಿಮಾ ಆಫರ್ಸ್ ಅರಿಸಿ ಬಂದಿದೆ. ಈಗಾಗಲೇ ಕಥೆ ಕೇಳಿ, ಥ್ರಿಲ್ ಆಗಿರುವ ನಿವೇದಿತಾ ಕಂಟೆಂಟ್ ಕೇಳಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

Live Tv
[brid partner=56869869 player=32851 video=960834 autoplay=true]



