ದಕ್ಷಿಣ ಆಫ್ರಿಕಾ ಟಿ20 ಕ್ರಿಕೆಟ್ ಲೀಗ್‍ನಲ್ಲಿ ಫ್ರಾಂಚೈಸಿ ಖರೀದಿಸಿದ ರಿಲಯನ್ಸ್ ಇಂಡಸ್ಟ್ರೀಸ್

Public TV
2 Min Read
RELIANCE GROUP 3

ಮುಂಬೈ: ಮುಂಬೈ ಇಂಡಿಯನ್ಸ್ ಬ್ರ್ಯಾಂಡ್ ಅನ್ನು ಇನ್ನಷ್ಟು ವಿಸ್ತರಿಸುವ ನಿಟ್ಟಿನಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಇಟ್ಟಿದೆ. ದಕ್ಷಿಣ ಆಫ್ರಿಕಾದ ಟಿ20 ಲೀಗ್‍ನಲ್ಲಿ ಒಂದು ಫ್ರಾಂಚೈಸಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಖರೀದಿ ಮಾಡಿದೆ.

mumbai indians rohit sharma

ಭಾರತದಲ್ಲಿ ಕ್ರಿಕೆಟ್ ಫ್ರಾಂಚೈಸಿಗಳನ್ನು ಖರೀದಿ ಮಾಡುವುದು, ಫುಟ್‍ಬಾಲ್ ಲೀಗ್ ನಡೆಸುವುದು, ಕ್ರೀಡೆಯ ಪ್ರಾಯೋಜಕತ್ವ, ಕನ್ಸಲ್ಟನ್ಸಿ ಹಾಗೂ ಅಥ್ಲೀಟ್ ಪ್ರತಿಭಾ ನಿರ್ವಹಣೆ ಮತ್ತು ಉದ್ಯಮದ ಉತ್ತಮ ಅಭ್ಯಾಸಗಳನ್ನು ಅಳವಡಿಸುವುದು ಸೇರಿದಂತೆ ಕ್ರೀಡಾ ವಲಯದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮಹತ್ವದ ಪಾತ್ರ ವಹಿಸುತ್ತಿದೆ. ರಿಲಯನ್ಸ್ ಫೌಂಡೇಶನ್ ಸ್ಪೋರ್ಟ್ಸ್ ಎಂಬ ಆರ್‌ಐಎಲ್‌, ಸಿಎಸ್‍ಆರ್ ವಿಭಾಗವು ಭಾರತದ ಒಲಿಂಪಿಕ್ಸ್ ಚಳವಳಿಯನ್ನು ಮುನ್ನಡೆಸುತ್ತಿದೆ. ದೇಶದ ವಿವಿಧೆಡೆಯ ಅಥ್ಲೀಟ್‍ಗಳು ವಿವಿಧ ಕ್ರೀಡೆಗಳಲ್ಲಿ ಚಾಂಪಿಯನ್ ಆಗಲು ಇದು ಅವಕಾಶ ಒದಗಿಸುತ್ತಿದೆ ಮತ್ತು ಜಾಗತಿಕ ಕ್ರೀಡಾ ಕಾರ್ಯಕ್ರಮಗಳನ್ನು ನಡೆಸುವುದರಲ್ಲಿ ಭಾರತಕ್ಕೆ ಹೆಚ್ಚಿನ ಅವಕಾಶವನ್ನು ಒದಗಿಸಲು ಪ್ರಯತ್ನಿಸುತ್ತಿದೆ. ಈ ವರ್ಷದ ಆರಂಭದಲ್ಲಿ, 40 ವರ್ಷಗಳ ನಂತರದಲ್ಲಿ 2023ರಲ್ಲಿ ಮುಂಬೈನಲ್ಲಿ ಇಂಟರ್‌ನ್ಯಾಷನಲ್‌ ಒಲಿಂಪಿಕ್ಸ್ ಕಮಿಟಿ ಸೆಷನ್ ನಡೆಸಲು ಯಶಸ್ವಿಯಾಗಿ ಪ್ರಯತ್ನ ನಡೆಸಿದೆ. ಇದೀಗ ದಕ್ಷಿಣ ಆಫ್ರಿಕಾದ ಟಿ20 ಲೀಗ್‍ನಲ್ಲಿ ಒಂದು ಫ್ರಾಂಚೈಸಿಯನ್ನು ರಿಲಯನ್ಸ್ ಇಂಡಸ್ಟ್ರೀಸ್ ಖರೀದಿ ಮಾಡಿ ಕ್ರೀಡೆಗೆ ಇನ್ನಷ್ಟು ಸಹಕಾರಿಯಾಗಲು ಮುಂದಾಗಿದೆ. ಇದಲ್ಲದೆ ಯುಎಇ ಮೂಲದ ಅಂತಾರಾಷ್ಟ್ರೀಯ ಲೀಗ್ ಟಿ-20 ತಂಡವನ್ನು ಖರೀದಿಸಲು ಪ್ಲಾನ್ ಮಾಡುತ್ತಿದೆ. ಇದನ್ನೂ ಓದಿ: ದಕ್ಷಿಣ ಆಫ್ರಿಕಾ ಟಿ 20 ಲೀಗ್‌ – ಎಲ್ಲಾ 6 ತಂಡಗಳು ಐಪಿಎಲ್‌ ಫ್ರಾಂಚೈಸಿ ಪಾಲು

Nitha Ambani

ಈ ಬಗ್ಗೆ ರಿಲಯನ್ಸ್ ಇಂಡಸ್ಟ್ರೀಸ್‍ನ ನಿರ್ದೇಶಕಿ ನೀತಾ ಅಂಬಾನಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ರಿಲಯನ್ಸ್ ಕುಟುಂಬಕ್ಕೆ ಹೊಸ ಟಿ20 ತಂಡವನ್ನು ಸ್ವಾಗತಿಸಲು ನಾನು ಉತ್ಸುಕನಾಗಿದ್ದೇನೆ. ಮುಂಬೈ ಇಂಡಿಯನ್ಸ್ ಬ್ರ್ಯಾಂಡ್ ಅನ್ನು ದಕ್ಷಿಣ ಆಫ್ರಿಕಾಗೆ ತೆಗೆದುಕೊಂಡು ಹೋಗಲು ನಾವು ಬಯಸಿದ್ದೇವೆ. ಭಾರತದಷ್ಟೇ ದಕ್ಷಿಣ ಆಪ್ರಿಕಾ ಕೂಡ ಕ್ರಿಕೆಟ್‍ನ್ನು ಪ್ರೀತಿಸುತ್ತದೆ. ದಕ್ಷಿಣ ಆಫ್ರಿಕಾದಲ್ಲಿ ಉತ್ತಮ ಕ್ರೀಡಾ ಪರಿಸರವಿದೆ. ಈ ಸಹಭಾಗಿತ್ವ ಶಕ್ತಿ ಮತ್ತು ಸಹಭಾಗಿತ್ವವನ್ನು ನಾವು ಬಳಸಿಕೊಳ್ಳಲು ಎದುರು ನೋಡುತ್ತಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಕರಾವಳಿಯ ಉಸೇನ್ ಬೋಲ್ಟ್ ಖ್ಯಾತಿಯ ಕಂಬಳ ಓಟಗಾರ ಶ್ರೀನಿವಾಸ್ ಗೌಡ ವಿರುದ್ಧ ಪ್ರಕರಣ ದಾಖಲು

ರಿಲಾಯನ್ಸ್ ಜಿಯೋದ ಚೇರ್ಮನ್ ಆಕಾಶ್ ಅಂಬಾನಿ ಮಾತನಾಡಿ, ನಮ್ಮ ದಕ್ಷಿಣ ಆಫ್ರಿಕಾ ಫ್ರಾಂಚೈಸಿಯಿಂದಾಗಿ ಮೂರು ದೇಶಗಳಲ್ಲಿ ಮೂರು ಟಿ20 ಟೀಮ್‍ಗಳಿವೆ. ಕ್ರಿಕೆಟ್‍ನಲ್ಲಿ ನಮ್ಮ ಪರಿಣಿತಿ ಮತ್ತು ಆಳವಾದ ಜ್ಞಾನವನ್ನು ಬಳಸಿಕೊಳ್ಳಲು ಎದುರು ನೋಡುತ್ತಿದ್ದೇವೆ. ಇದು ತಂಡವನ್ನು ನಿರ್ಮಾಣ ಮಾಡಲು ಮತ್ತು ಅಭಿಮಾನಿಗಳಿಗೆ ಉತ್ತಮ ಕ್ರಿಕೆಟ್ ಅನುಭವವನ್ನು ಇದು ಒದಗಿಸಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕ್ರಿಕೆಟ್ ಸೌತ್ ಆಫ್ರಿಕಾ ಆರು ತಂಡಗಳನ್ನು ಒಳಗೊಂಡ ಟಿ20 ಟೂರ್ನಿ ಆಯೋಜನೆ ಮಾಡುವುದಾಗಿ ಘೋಷಿಸಿದೆ. ಮೊದಲ ಟೂರ್ನಮೆಂಟ್ 2023 ಜನವರಿಯಲ್ಲಿ ನಡೆಯಲಿದೆ. ಟೂರ್ನಮೆಂಟ್‍ನಲ್ಲಿ ಆರು ತಂಡಗಳು ಇರಲಿವೆ. ರೌಂಡ್ ರಾಬಿನ್ ಹಂತದಲ್ಲಿ ಪರಸ್ಪರ ಎರಡು ಬಾರಿ ಆಟ ಆಡಲಿವೆ. ನಂತರ ಅಗ್ರ ಮೂರು ತಂಡಗಳು ಪ್ಲೇಆಫ್‍ಗೆ ಹೋಗಲಿವೆ. ಮೂರರಿಂದ ನಾಲ್ಕು ವಾರಗಳಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿವೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *