ಟಾಲಿವುಡ್ ಸೂಪರ್ ಸ್ಟಾರ್ ಚಿರಂಜೀವಿ ಮಗಳು ಶ್ರೀಜಾ ಮದುವೆಯದ್ದೇ ಸುದ್ದಿ. ಕಲ್ಯಾಣ್ ದೇವ್ ಜತೆ ಶ್ರೀಜಾ ಡಿವೋರ್ಸ್ ವದಂತಿಯ ಬೆನ್ನಲ್ಲೇ ಶಾಕಿಂಗ್ ವಿಚಾರವೊಂದು ಟಿಟೌನ್‌ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ. ಚಿರಂಜೀವಿ ಪುತ್ರಿ ಶ್ರೀಜಾ ಮೂರಲ್ಲ, ನಾಲ್ಕು ಮದುವೆ ಆಗುತ್ತಾರೆ ಅಂತಾ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಮೆಗಾಸ್ಟಾರ್ ಚಿರಂಜೀವಿ ಪುತ್ರಿ ಶ್ರೀಜಾ ಈಗಾಗಲೇ ಎರಡು ಮದುವೆ ಆಗಿದೆ. ಮೊದಲು ಸಿರೀಶ್ ಜತೆ ಮದುವೆಯಾಗಿದ್ದರು. ಕಾರಣಾಂತರಗಳಿಂದ ಈ ಮದುವೆ ಮುರಿದು ಬಿತ್ತು. ಬಳಿಕ ಮನೆಯಲ್ಲಿ ನಿಶ್ಚಿಯಿಸಿದ ವರ ಕಲ್ಯಾಣ್ ದೇವ್ ಅವರನ್ನ ಶ್ರೀಜಾ ಮದುವೆಯಾಗಿದ್ದರು. ಇದೀಗ ಈ ಸಂಬಂಧವೂ ಕೂಡ ಡಿವೋರ್ಸ್ ಆಗಿದೆ ಎಂಬ ವದಂತಿಯ ಬೆನ್ನಲ್ಲೇ ಖ್ಯಾತ ಜ್ಯೋತಿಷಿ ವೇಣು ಸ್ವಾಮಿ ಶ್ರೀಜಾ ಕುರಿತು ಹೊಸ ಬಾಂಬ್ ಸಿಡಿಸಿದ್ದಾರೆ. ಇದನ್ನೂ ಓದಿ:ಸ್ಟಾರ್ ನಟನ ಜೊತೆ ಮದುವೆಯಾಗಲಿದ್ದಾರಾ ‘ಮೈನಾ’ ಹುಡುಗಿ ನಿತ್ಯಾ ಮೆನನ್?
ಕಲ್ಯಾಣ್ ದೇವ್‌ಗೆ ಡಿವೋರ್ಸ್ ನೀಡಿದ್ದಾರೆ ಎಂಬ ವದಂತಿಯಿದೆ. ಮೂರನೇ ಮದುವೆಗೆ ರೆಡಿಯಾಗಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಮೂರಲ್ಲ, ಶ್ರೀಜಾಗೆ ನಾಲ್ಕು ಮದುವೆಯಾಗುತ್ತದೆ ಎಂದು ಜ್ಯೋತಿಷಿ ಹೇಳಿದ್ದಾರೆ. ಶ್ರೀಜಾ ಜಾತಕದ ಪ್ರಕಾರ ಈಕೆಗೆ ನಾಲ್ಕು ಮದುವೆಯಾಗುತ್ತದೆ ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಪವನ್ ಕಲ್ಯಾಣ್‌ಗೂ ನಾಲ್ಕು ಮದುವೆಯಾಗುತ್ತದೆ ಎಂದು ವೇಣು ಸ್ವಾಮಿ ಹೇಳಿಕೆ ನೀಡಿದ್ದರು. ಅಷ್ಟಕ್ಕೂ ಈ ಸುದ್ದಿ ನಿಜವಾಗುತ್ತ ಅಂತಾ ಮುಂದಿನ ದಿನಗಳವರೆಗೂ ಕಾದುನೋಡಬೇಕಿದೆ.
Live Tv
[brid partner=56869869 player=32851 video=960834 autoplay=true]