ಮಂಕಿಪಾಕ್ಸ್ ಭೀತಿ – ವಿಮಾನ ನಿಲ್ದಾಣಗಳಲ್ಲಿ ಹೈ ಅಲರ್ಟ್ ಘೋಷಣೆ

Public TV
1 Min Read
Airport

ನವದೆಹಲಿ: ದೇಶದಲ್ಲೂ ಆತಂಕ ಸೃಷ್ಟಿಸಿರುವ ಮಂಕಿಪಾಕ್ಸ್ ಸೋಂಕಿನ ಭೀತಿಯಿಂದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಎಲ್ಲ ವಿಮಾನ ನಿಲ್ದಾಣಗಳಲ್ಲೂ ಹೈ ಅಲರ್ಟ್ ಘೋಷಿಸಿದೆ. ವಿದೇಶಗಳಿಂದ ಬರುವವರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸುವಂತೆ ಸೂಚಿಸಿದೆ.

Airport 1

ಈ ಕುರಿತು ಆರೋಗ್ಯ ಸಚಿವಾಲಯ ತುರ್ತು ಅದೇಶ ಹೊರಡಿಸಿದ್ದು, ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾರ್ಗಸೂಚಿಗಳಂತೆ ಪ್ರತಿಯೊಬ್ಬರನ್ನೂ ಕಡ್ಡಾಯವಾಗಿ ತಪಾಸಣೆ ಮಾಡಬೇಕು. ಇದರಿಂದ ಮಂಕಿಪಾಕ್ಸ್ ಹರಡುವುದನ್ನು ತಡೆಗಟ್ಟಬಹುದು ಎಂದು ಹೇಳಿದೆ. ಇದನ್ನೂ ಓದಿ: ಕಾಂಗ್ರೆಸ್‍ನಲ್ಲಿ ಜೋರಾಯ್ತು ಕುರ್ಚಿ ಕದನ – ಸಿಎಂ ಪಟ್ಟಕ್ಕಾಗಿ ಸಮುದಾಯದ ಬೆಂಬಲ ಕೋರಿದ ಡಿಕೆ

ದುಬೈನಿಂದ ಬಂದಿದ್ದ ಕೇರಳದ ಕಣ್ಣೂರಿನ ವ್ಯಕ್ತಿಯೊಬ್ಬರಿಗೆ ನಿನ್ನೆಯಷ್ಟೇ `ಮಂಕಿಪಾಕ್ಸ್’ ತಗುಲಿರುವುದು ಪತ್ತೆಯಾಗಿತ್ತು. ಇದು ದೇಶದಲ್ಲಿ ಪತ್ತೆಯಾದ 2ನೇ ಪ್ರಕರಣವಾಗಿತ್ತು. ಇದಕ್ಕೂ ಮುನ್ನ ಕೇರಳದ ಕೊಲ್ಲಂ ಜಿಲ್ಲೆಯ ವ್ಯಕ್ತಿಯೊಬ್ಬರಲ್ಲಿ ಮಂಕಿಪಾಕ್ಸ್ ದೃಢಪಟ್ಟಿತ್ತು.

Airport 2

31 ವರ್ಷದ ವ್ಯಕ್ತಿಯೊಬ್ಬರು ಜುಲೈ 13ರಂದು ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದರು. ಅವರಲ್ಲಿ ಮಂಕಿಪಾಕ್ಸ್‌ನ ಲಕ್ಷಣಗಳು ಕಂಡುಬಂದಿದ್ದವು. ಹೀಗಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರಿಂದ ಸಂಗ್ರಹಿಸಲಾಗಿದ್ದ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಗೆ ರವಾನಿಸಲಾಗಿತ್ತು. ವ್ಯಕ್ತಿಗೆ ರೋಗ ತಗುಲಿರುವುದು ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಯೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ಸುಮ್ಮನೆ ವಾಹನ ತಡೆ ಹಿಡಿಯುತ್ತಿದ್ದ ಟ್ರಾಫಿಕ್ ಪೊಲೀಸ್ ಅಮಾನತು

ಈ ಬೆನ್ನಲ್ಲೇ ರಾಜ್ಯದ ಆರೋಗ್ಯ ಇಲಾಖೆಯೊಂದಿಗೆ ಕೇಂದ್ರದ ವಿಶೇಷ ತಂಡವು ಪರಿಸ್ಥಿತಿ ಅವಲೋಕಿಸಿತ್ತು. ಬಳಿಕ ಮಂಕಿಪಾಕ್ಸ್ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಪ್ರಕರಣ ಪತ್ತೆಯಾದಲ್ಲಿ, ಅದನ್ನು ತಡೆಯಲು ರಾಜ್ಯಗಳಿಗೆ ಎಲ್ಲ ರೀತಿಯ ಸಹಕಾರಗಳನ್ನು ನೀಡಲಾಗುತ್ತದೆ. ಮಂಕಿಪಾಕ್ಸ್ ಅಷ್ಟೇನೂ ಗಂಭೀರವಾದ ಕಾಯಿಲೆಯಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹೀಗಾಗಿ ಯಾರೂ ಆತಂಕಕ್ಕೆ ಒಳಗಾಗಬಾರದು ಧೈರ್ಯ ಹೇಳಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *