ಮುಸ್ಲಿಮರ ಪ್ರತಿಯೊಬ್ಬರ ಮನೆಯಲ್ಲಿ ಮಾರಕಾಸ್ತ್ರಗಳಿವೆ ಯಾಕೇ ಸೀಜ್ ಮಾಡ್ತಿಲ್ಲ: ಮುತಾಲಿಕ್ ಕಿಡಿ

Public TV
2 Min Read
Pramod Muthalik 3

ಶಿವಮೊಗ್ಗ: ಮುಸ್ಲಿಮರ ಪ್ರತಿಯೊಬ್ಬರ ಮನೆಯಲ್ಲಿ ಮಾರಕಾಸ್ತ್ರಗಳಿವೆ ಯಾಕೇ ಸೀಜ್ ಮಾಡ್ತಿಲ್ಲ ಎಂದು ಶ್ರೀರಾಮಸೇನೆ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಕಿಡಿಕಾರಿದರು.

ಶಿವಮೊಗ್ಗದಲ್ಲಿ ಹಿಂದೂ ಕಾರ್ಯಕರ್ತರ ಮೇಲೆ ಹಲ್ಲೆ ಪ್ರಕರಣ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಘಟನೆ ಸರ್ಕಾರ ಮತ್ತು ಪೊಲೀಸ್ ಇಲಾಖೆಯ ಸೋಲಿಗೆ ಸಾಕ್ಷಿಯಾಗಿದೆ. ಮಾಜಿ ಸಿಎಂ ಹಾಗೂ ಮಂತ್ರಿಗಳು ಇರುವ ಜಿಲ್ಲೆಯಲ್ಲಿ ಮೇಲಿಂದ ಮೇಲೆ ಈ ರೀತಿ ಆಗ್ತಿದೆ ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಯುವತಿಯರನ್ನು ಏಕೆ ಚುಡಾಯಿಸುತ್ತೀರಾ ಎಂದ ಯುವಕನಿಗೆ ಅನ್ಯ ಕೋಮಿನ ಯುವಕರಿಂದ ಹಲ್ಲೆ

shivamogga youth harsha

ಮುಸ್ಲಿಂ ಸಮಾಜ ಸೊಕ್ಕಿಗೆ ಬಂದಿದೆ. ಅವರು ಅತ್ಯಂತ ಸೊಕ್ಕಿನಿಂದ ವರ್ತಿಸ್ತಾಯಿದ್ದಾರೆ. ಇದರಿಂದ ಭಯವಿಲ್ಲ. ಅವರಿಗೆ ಎಲ್ಲಿಯವರೆಗೆ ಸರ್ಕಾರ ಕ್ರಮಕೈಗೊಳ್ಳದೆ, ಹದ್ದು ಬಸ್ತಿನಲ್ಲಿ ಇಟ್ಟುಕೊಳ್ಳುವುದಿಲ್ಲವೋ ಅಲ್ಲಿವರೆಗೂ ಇದೇ ನಡೆಯತ್ತೆ. ಶಿವಮೊಗ್ಗದ ಹರ್ಷನ ಕೊಲೆಗಾರರು ಎಷ್ಟು ಆನಂದವಾಗಿ ಜೈಲಿನಲ್ಲಿದ್ದಾರೆ. ಬಾಗಲಕೋಟೆಯ ಕೆರೂರನಲ್ಲಿ ಆದಂತಹ ಘಟನೆ ಎಲ್ಲವನ್ನು ನೋಡಿದ್ರೆ ಎಲ್ಲಿಯವರೆಗೆ ಬಂದಿದೆ ಎಂದು ಟೀಕಿಸಿದರು.

ಇದೇ ರೀತಿ ಪ್ರಕರಣಗಳು ಮೇಲಿಂದ ಮೇಲೆ ಆಗ್ತಿದೆ. ಇದನ್ನು ನೋಡಿ ಸರ್ಕಾರ ಎಚ್ಚೆತ್ತುಕೊಳದಿದ್ರೆ, ಹಿಂದೂ ಕಾರ್ಯಕರ್ತರೇ ಇದಕ್ಕೆ ಉತ್ತರ ಕೊಡುವ ಪರಿಸ್ಥಿತಿ ನಿರ್ಮಾಣವಾಗತ್ತೆ. ಮುಸ್ಲಿಮರ ಪ್ರತಿಯೊಬ್ಬರ ಮನೆಯಲ್ಲಿ ಮಾರಕಾಸ್ತ್ರಗಳಿವೆ. ಯಾಕೇ ಸೀಜ್ ಮಾಡ್ತಿಲ್ಲ. ಕಾಲೇಜು ವಿದ್ಯಾರ್ಥಿಗಳ ಕಿಸೆಯಲ್ಲಿ ಚಾಕುಗಳಿವೆಯಾ? ಅವೆಲ್ಲವನ್ನು ಸೀಜ್ ಮಾಡ್ತಿಲ್ಲ ಯಾಕೆ? ಸೀಜ್ ಮಾಡಿ ಎಲ್ಲವನ್ನ ಸಂಘ ಪರಿವಾರದ ಭದ್ರಕೋಟೆ ಶಿವಮೊಗ್ಗದಲ್ಲಿಯೇ ಈ ರೀತಿ ಆಗಬೇಕಾದ್ರೆ ಬೇರೆ ಕಡೆ ಏನಾಗಬಹುದು, ಯಾವ ರೀತಿ ಮಾಡಬಹುದು ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಎರಡು ತಿಂಗಳಲ್ಲಿ 27 ಸಾವಿರ ಟ್ರಾನ್ಸ್‌ ಫಾರ್ಮರ್ ನಿರ್ವಹಣೆ ಮಾಡಿದ ಬೆಸ್ಕಾಂ 

BJP Flag Final 6

ಇದಕ್ಕೆಲ್ಲ ಸರ್ಕಾರದ ದೌರ್ಬಲ್ಯವೇ ಕಾರಣ, ಸರ್ಕಾರ ಯಾವುದೇ ಕ್ರಮವನ್ನು ತೆಗೆದುಕೊಳ್ಳುತ್ತಿಲ್ಲ. ಹಲ್ಲೆ ಆದಾಗ ನಾಯಕರು ಬಂದು ದೊಡ್ಡ ಪ್ರಮಾಣದಲ್ಲಿ ಮಾತಾಡಿ ಹೋದ್ರೆ ಮುಗಿದು ಹೋಗಲ್ಲ. ಅದನ್ನ ಫಾಲೊ ಮಾಡಬೇಕು. ಶಿವಮೊಗ್ಗದಲ್ಲಿ ಏನೆಲ್ಲ ಆದ್ರು ಇಷ್ಟು ಧೈರ್ಯ ತೋರಸ್ತಾರಂದ್ರೆ, ಸರ್ಕಾರದ ಹೇಡಿತನ, ದೌರ್ಬಲ್ಯವೇ ಕಾರಣ ಎಂದು ವ್ಯಂಗ್ಯವಾಡಿದರು.

ಯೋಗಿ ಮಾದರಿಯಲ್ಲಿ ಗಟ್ಸ್ ತೋರಿಸಿ, ಕ್ರಮಗಳನ್ನು ತಗೆದುಕೊಳ್ಳಿ. ಆಗ ಮಾತ್ರ ಸೊಕ್ಕಿದವರು ಹದ್ದುಬಸ್ತಿನಲ್ಲಿಡಬಹುದು. ನೀವೇ ಮಾಡ್ತಿರೋ ಇಲ್ಲವೆ ಹಿಂದೂ ಸಮಾಜ ಸಿದ್ಧವಾಗಬೇಕೋ ಹೇಳಿ ಬಿಡಿ. ನಿಮ್ಮ ಕಡೆಯಿಂದ ಆಗದೆಯಿದ್ರೆ ನಾವು ನೋಡಿಕೊಳ್ತಿವಿ ಎಂದು ಸವಾಲು ಹಾಕಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *