ಶಿವಣ್ಣ ಹುಟ್ಟು ಹಬ್ಬಕ್ಕೆ ಕೊಟ್ರೇಶ್ ನಿರ್ದೇಶನದ ಹೊಸ ಸಿನಿಮಾ

Public TV
2 Min Read
shivaraj kumar 1 1

ರವತ್ತನೇ ವಯಸ್ಸಿನಲ್ಲೂ ಹದಿಹರೆಯದವರನ್ನು ನಾಚಿಸುವಂತಹ ಉತ್ಸಾಹವಿರುವ  ನಟ ಶಿವರಾಜಕುಮಾರ್. ಇತ್ತೀಚೆಗೆ ಬಿಡುಗಡೆಯಾದ ಶಿವಣ್ಣ ಅಭಿನಯದ “ಬೈರಾಗಿ” ಸಿನಿಮಾ ಕೂಡ ರಾಜ್ಯಾದ್ಯಂತ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಜುಲೈ 12 ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಅವರ ಹುಟ್ಟುಹಬ್ಬ. ಈ ಸಮಯದಲ್ಲಿ ಶಿವಣ್ಣ ನಾಯಕರಾಗಿ ನಟಿಸಲಿರುವ ನೂತನ ಚಿತ್ರದ ಘೋಷಣೆಯಾಗಿದೆ. ಕೊಟ್ರೇಶ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.

shivaraj kumar 3 1

ಶಿವಣ್ಣ ಅಭಿನಯದ “ವಜ್ರಕಾಯ”, ” ಬಂಗಾರ s\o ಬಂಗಾರದ ಮನುಷ್ಯ” ಮುಂತಾದ ಚಿತ್ರಗಳಿಗೆ ಅಸೋಸಿಯೇಟ್ ಡೈರೆಕ್ಟರ್ ಆಗಿದ್ದ ಕೊಟ್ರೇಶ್ ಈ ಚಿತ್ರದ ಮೂಲಕ ಸ್ವತಂತ್ರ ನಿರ್ದೇಶಕರಾಗುತ್ತಿದ್ದಾರೆ. ಮೊದಲು ನಾನು ಶಿವಣ್ಣ ಅವರಿಗೆ ಹುಟ್ಟುಹಬ್ಬದ ಶುಭಾಶಯ ತಿಳುಸುತ್ತೇನೆ. ಅವರು ನೂರುವರ್ಷ ಚೆನ್ನಾಗಿರಲಿ ಎಂದು ಹಾರೈಸುತ್ತೇನೆ. ಅವರ ಅಭಿನಯದ ಕೆಲವು ಚಿತ್ರಗಳಿಗೆ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ಈಗ ಅಂತಹ ಅದ್ಭುತ ನಟನ ಚಿತ್ರ ನಿರ್ದೇಶಿಸುತ್ತಿರುವುದು ನಿಜಕ್ಕೂ ನನ್ನ ಅದೃಷ್ಟ. ನನಗೆ ನಿರ್ದೇಶನ ಮಾಡಲು ಅವಕಾಶ ನೀಡಿರುವ ಶಿವಣ್ಣ ಹಾಗೂ ನಿರ್ಮಾಪಕರಿಗೆ ಧನ್ಯವಾದ ತಿಳಿಸುತ್ತೇನೆ. ಚಿತ್ರ ಉತ್ತಮವಾಗಿ ಮೂಡಿಬರಲು ಸಾಕಷ್ಟು ಶ್ರಮವಹಿಸುತ್ತೇನೆ. ಈಗ ಚಿತ್ರೀಕರಣ ನಡೆಸುವ ಸ್ಥಳಗಳ ಆಯ್ಕೆ ನಡೆಯುತ್ತಿದೆ. ಸದ್ಯದಲ್ಲೇ ಚಿತ್ರ ಆರಂಭವಾಗುತ್ತದೆ ಎಂದು ನಿರ್ದೇಶಕ ಕೊಟ್ರೇಶ್ ತಿಳಿಸಿದ್ದಾರೆ. ಇದನ್ನೂ ಓದಿ:ಟ್ವೀಟರ್‌ನಲ್ಲಿ ಯಶ್ ಹೆಸರು ಟ್ರೇಂಡಿಂಗ್: ಯಶ್ 19ನೇ ಚಿತ್ರದ ಅಪ್‌ಡೇಟ್ ಇಲ್ಲಿದೆ

shivaraj kumar 2 1

ನಾನು ಈ ಸಿನಿಮಾದಲ್ಲಿ ಅಭಿನಯಿಸಲು ಉತ್ಸುಕನಾಗಿದ್ದೇನೆ. ನಾನು ನಟಿಸಿರುವ ಮೂರು ಚಿತ್ರಗಳಲ್ಲಿ ಕೊಟ್ರೇಶ್ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದಾರೆ. ಈ ಸಿನಿಮಾ ಮೂಲಕ ನಿರ್ದೇಶಕರಾಗುತ್ತಿದ್ದಾರೆ. ಕೊಟ್ರೇಶ್ ಅವರಿಗೆ ಶುಭವಾಗಲಿ ಎಂದು ಶಿವಣ್ಣ ಹಾರೈಸಿದ್ದಾರೆ. ಎ ಆರ್ ಕೆ ಪ್ರೊಡಕ್ಷನ್ ಮತ್ತು ರುಬಿನ್ ರಾಜ್ ಪ್ರೊಡಕ್ಷನ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಜನಪ್ರಿಯ ಸಂಭಾಷಣೆಕಾರ ಮಾಸ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಮಾಸ್ತಿ, ಕೊಟ್ರೇಶ್ ಹಾಗೂ ಅಭಿ ಚಿತ್ರಕಥೆ ಬರೆದಿರುವ ಈ ನೂತನ ಚಿತ್ರಕ್ಕೆ ಚರಣ್ ರಾಜ್ ಸಂಗೀತ ನೀಡಲಿದ್ದಾರೆ. ಸೋಹಿತ್ ನೀಲಮ್ ಛಾಯಾಗ್ರಹಣ ಹಾಗೂ ದೀಪು ಎಸ್ ಕುಮಾರ್ ಅವರ ಸಂಕಲನ ಸಹ ಈ ಚಿತ್ರಕ್ಕಿರಲಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *