Bengaluru CityBollywoodCinemaKarnatakaLatestMain PostSandalwood

ಟ್ವಿಟ್ಟರ್‌ನಲ್ಲಿ ಯಶ್ ಹೆಸರು ಟ್ರೆಂಡಿಂಗ್: ಯಶ್ 19ನೇ ಚಿತ್ರದ ಅಪ್‌ಡೇಟ್ ಇಲ್ಲಿದೆ

Advertisements

ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವ ಯಶ್ ಮುಂದಿನ ನಡೆ ಬಗ್ಗೆ ಎಲ್ಲರಿಗೂ ಕುತೂಹಲವಿದೆ. ಅದರಲ್ಲೂ `ಕೆಜಿಎಫ್ 2′ ಸಿನಿಮಾ 1‌,500 ಕೋಟಿ ಬಾಚಿದ ಮೇಲಂತೂ ಯಶ್ ಮುಂದಿನ ಹೆಜ್ಜೆ ಹುಷಾರಾಗಿ ಇಡಬೇಕಿದೆ. ರಾಕಿಭಾಯ್ ಮುಂದಿನ 19ನೇ ಸಿನಿಮಾ ಬಗ್ಗೆ ಸಾಕಷ್ಟು ಕುತೂಹಲ ಅಭಿಮಾನಿಗಳಿಗೆ ಹುಟ್ಟು ಹಾಕಿದೆ.

ಯಶ್ ತಮ್ಮ ಕೆರಿಯರ್‌ನ ಶುರುವಿನಲ್ಲೇ ಸಾಕಷ್ಟು ಕಠಿಣ ದಾರಿಯನ್ನ ದಾಟಿಯೇ ಇಲ್ಲಿವರೆಗೆ ಬಂದಿದ್ದಾರೆ. ಯಶಸ್ಸು ಅಷ್ಟು ಸುಲಭಕ್ಕೆ ಸಿಗುವುದಿಲ್ಲ ಎಂಬುದನ್ನ ಅರಿತಿದ್ದಾರೆ. ಹಾಗಾಗಿ ಯಶ್ ಮುಂದಿನ ಸಿನಿಮಾ ಸೆಲೆಕ್ಷನ್‌ನಲ್ಲಿ ಸಖತ್ ಚ್ಯೂಸಿಯಾಗಿದ್ದಾರೆ. ಆದರೆ ಯಶ್ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಭರ್ಜರಿ ವರ್ಕೌಟ್, ಡಯೆಟ್ ಮಾಡುತ್ತಾ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ನಿತ್ಯಾನಂದನನ್ನ ಮದುವೆ ಆಗೋಕೆ ರೆಡಿ ಎಂದ ನಟಿ: ಸುದ್ದಿಯ ಕುರಿತು ಸ್ಪಷ್ಟನೆ ನೀಡಿದ ಪ್ರಿಯಾ ಆನಂದ್

ದಿನ ಕಳೆಯುತ್ತಿದ್ದ ಹಾಗೆ ಯಶ್ ಮುಂದಿನ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿದೆ. ಯಶ್ ಅಭಿಮಾನಿಗಳು ತಾವೇ ಸಿನಿಮಾ ಪೋಸ್ಟರ್ ಮತ್ತು ಟೈಟಲ್ ಲಾಂಚ್ ಬಗ್ಗೆ ಪೋಸ್ಟ್‌ಗಳನ್ನ ಹಾಕುತ್ತಿದ್ದಾರೆ. ಈ ಹಿಂದೆ ಜೂನ್‌ನಲ್ಲಿಯೇ ಯಶ್ 19ನೇ ಚಿತ್ರ ಸೆಟ್ಟೇರಲಿದೆ ಎನ್ನಲಾಗಿತ್ತು. ಆದರೆ ಅದು ಸಾಧ್ಯವಾಗಿಲ್ಲ. ಹಾಗಾಗಿ ಚಿತ್ರದ ಟೈಟಲ್ ಬಗ್ಗೆ, ಲಾಂಚ್ ದಿನಾಂಕದ ಬಗ್ಗೆ ಅಭಿಮಾನಿ ಬಳಗದಲ್ಲಿ ಚರ್ಚೆ ಶುರುವಾಗಿದೆ. ಈ ಬೆನ್ನಲ್ಲೇ ಟ್ವಿಟ್ಟರ್‌ನಲ್ಲಿ ನಟ ಯಶ್ ಹೆಸರು ಟ್ರೆಂಡಿಂಗ್ ಲಿಸ್ಟ್ ಸೇರಿದೆ.

ಇನ್ನು ಯಶ್ ಮುಂದಿನ ಸಿನಿಮಾ, ನಿರ್ದೇಶಕ ನರ್ತನ್ ಜತೆ ಎಂದು ಹೇಳಲಾಗುತ್ತಿದ್ದು, ಖ್ಯಾತ ನಿರ್ಮಾಣ ಕೆವಿಎನ್ ಸಂಸ್ಥೆ ಬಂಡವಾಳ ಹೂಡಲಿದೆ ಎನ್ನಲಾಗುತ್ತಿದೆ. ಎಲ್ಲದಕ್ಕೂ ಅಧಿಕೃತ ಮಾಹಿತಿಗಾಗಿ ಕಾದು ನೋಡಬೇಕಿದೆ.

Live Tv

Leave a Reply

Your email address will not be published.

Back to top button