ರಶ್ಮಿಕಾ ಮಂದಣ್ಣ ಈಗ ಪಂಚಭಾಷಾ ನಟಿಯಾಗಿ ಮಿಂಚ್ತಿದ್ದಾರೆ. ಕನ್ನಡದ `ಕಿರಿಕ್ ಪಾರ್ಟಿ’ ಚಿತ್ರದಿಂದ ವೃತ್ತಿ ಜೀವನ ಪ್ರಾರಂಭಿಸಿದ ರಶ್ಮಿಕಾ ಸದ್ಯ ಪಂಚಭಾಷಾ ನಟಿಯಾಗಿ ಗುರುತಿಸಿಕೊಳ್ತಿದ್ದಾರೆ. ಇದೀಗ ಈದ್ ಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ರಶ್ಮಿಕಾ ಗಿಫ್ಟ್ ನೀಡಿದ್ದಾರೆ. ಈದ್ ಹಬ್ಬಕ್ಕೆ ಶುಭಕೋರುವ ಮೂಲಕ ತಮ್ಮ ಮುಂದಿನ ಚಿತ್ರ `ಸೀತಾ ರಾಮಂ’ ಲುಕ್ ರಿವೀಲ್ ಮಾಡಿದ್ದಾರೆ.
ಕನ್ನಡ, ಸೌತ್ ಸಿನಿಮಾ, ಬಾಲಿವುಡ್‌ನಲ್ಲಿ ನಟಿಸಿದ ಮೇಲೆ ಮಲಯಾಳಂನತ್ತ ರಶ್ಮಿಕಾ ಮುಖ ಮಾಡಿದ್ದಾರೆ. ದುಲ್ಕರ್ ಸಲ್ಮಾನ್‌ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ಸದ್ಯ ಈದ್ ಹಬ್ಬದ ಪ್ರಯುಕ್ತ ಫ್ಯಾನ್ಸ್‌ಗೆ ಗಿಫ್ಟ್ ನೀಡಿದ್ದಾರೆ. ರೆಡ್ ಕಲರ್ ಹಿಜಬ್ ಧರಿಸಿ ಸಲಾಮ್ ಮಾಡಿರುವ ಪೋಸ್ಟರ್ ಶೇರ್ ಮಾಡುವ ಮೂಲಕ ಫ್ಯಾನ್ಸ್‌ಗೆ ರಶ್ಮಿಕಾ ವಿಶ್ ಮಾಡಿದ್ದಾರೆ. ಇದನ್ನೂ ಓದಿ:ಟ್ವೀಟರ್‌ನಲ್ಲಿ ಯಶ್ ಹೆಸರು ಟ್ರೇಂಡಿಂಗ್: ಯಶ್ 19ನೇ ಚಿತ್ರದ ಅಪ್‌ಡೇಟ್ ಇಲ್ಲಿದೆ
#EidAdhaMubarak from our Rebellious #Afreen, to you and your family…#SitaRamamFromAug5 @dqsalmaan @hanurpudi @mrunalthakur #PSVinod @vyjayanthimovies @sonymusic_south pic.twitter.com/6ddtjI8OsL
— Rashmika Mandanna (@iamRashmika) July 10, 2022
`ಸೀತಾ ರಾಮಂ’ ರಾಘವ ಪುಡಿ ನಿರ್ದೇಶನದಲ್ಲಿ ಮೂಡಿ ಬರುತ್ತಿದ್ದು, ದುಲ್ಕರ್ ಸಲ್ಮಾನ್‌ಗೆ ರಶ್ಮಿಕಾ ಮತ್ತು ಮೃಣಾಲ್ ಠಾಕೂರ್ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂನಲ್ಲಿ ಸಿನಿಮಾ ಆಗಸ್ಟ್ 5ಕ್ಕೆ ತೆರೆಗೆ ಅಪ್ಪಳಿಸಲಿದೆ.