‘ಸಿಂಗ್, ಡ್ಯಾನ್ಸ್ ಆ್ಯಂಡ್ ಪ್ರೇʼ- ಶ್ರೀಲ ಪ್ರಭುಪಾದರ ಕುರಿತ ಪುಸ್ತಕ ಬಿಡುಗಡೆ ಮಾಡಿದ ಸುಧಾಮೂರ್ತಿ

Public TV
3 Min Read
sing dance and pray

ಬೆಂಗಳೂರು: ಇಸ್ಕಾನ್‌ನ ಶ್ರೀಲ ಪ್ರಭುಪಾದರ 125 ನೇ ಜನ್ಮ ವಾರ್ಷಿಕೋತ್ಸವದ ಸ್ಮರಣಾರ್ಥ ಬೆಂಗಳೂರಿನ ಇಸ್ಕಾನ್‌ನಲ್ಲಿ ‘ಸಿಂಗ್, ಡ್ಯಾನ್ಸ್ ಆ್ಯಂಡ್ ಪ್ರೇ: ದಿ ಇನ್ಸ್ಪಿರೇಷನಲ್ ಸ್ಟೋರಿ ಆಫ್ ಶ್ರೀಲ ಪ್ರಭುಪಾದʼ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಡಾ. ಹಿಂಡೋಲ್ ಸೇನ್ ಗುಪ್ತಾ ಬರೆದಿರುವ ಪುಸ್ತಕವನ್ನು ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾ ಪ್ರಕಟಿಸಿದೆ.

ಪುಸ್ತಕ ಬಿಡುಗಡೆ ಸಮಾರಂಭದ ಗೌರವ ಅತಿಥಿಗಳಾಗಿ ಸಮಾಜ ಸೇವಕಿ, ಮೂರ್ತಿ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ, ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್, 2X ಗ್ರ್ಯಾಮಿ ಪ್ರಶಸ್ತಿ ವಿಜೇತ ಮತ್ತು ಲೇಖಕ ರಿಕಿ ಕೇಜ್, ಪ್ರಕಾಶಕ, ಪೆಂಗ್ವಿನ್ ರಾಂಡಮ್ ಹೌಸ್ ಇಂಡಿಯಾದ ಮಿಲೀ ಐಶ್ವರ್ಯಾ, ಲೇಖಕ ಡಾ. ಹಿಂಡೋಲ್ ಸೇನ್ ಗುಪ್ತಾ ಭಾಗವಹಿಸಿದ್ದರು. ಅಕ್ಷಯ ಪಾತ್ರ ಪ್ರತಿಷ್ಠಾನದ ಅಧ್ಯಕ್ಷ ಮಧು ಪಂಡಿತ್ ದಾಸ ಮತ್ತು ಅಕ್ಷಯ ಪಾತ್ರ ಪ್ರತಿಷ್ಠಾನದ ಉಪಾಧ್ಯಕ್ಷ ಚಂಚಲಪತಿ ದಾಸ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದನ್ನೂ ಓದಿ: ಬೆಂಗಳೂರಿಗೆ ಆಗಮಿಸಿದ ದ್ರೌಪದಿ ಮುರ್ಮು

sing dance and pray 1

ಸಮಕಾಲೀನ ಪ್ರೇಕ್ಷಕರ ಪಾಲಿಗೆ ಭಾರತದ ಆಧ್ಯಾತ್ಮಿಕ ಸಂಸ್ಕೃತಿ ಮತ್ತು ಪರಂಪರೆಯ ಶ್ರೇಷ್ಠ ರಾಯಭಾರಿ, ಇಸ್ಕಾನ್ ಸಂಸ್ಥಾಪಕ-ಆಚಾರ್ಯ ಶ್ರೀಲ ಪ್ರಭುಪಾದರ ಜೀವನದ ಬಗ್ಗೆ ʼಸಿಂಗ್, ಡ್ಯಾನ್ಸ್ ಆಂಡ್ ಪ್ರೇʼ ಒಂದು ಅನನ್ಯ ಒಳನೋಟವನ್ನು ಒದಗಿಸುತ್ತದೆ. ಅವರು ವಿಶ್ವಾದ್ಯಂತದ 100 ಕ್ಕೂ ಹೆಚ್ಚು ದೇವಾಲಯಗಳು, ಆಶ್ರಮಗಳು ಮತ್ತು ಸಾಂಸ್ಕೃತಿಕ ಕೇಂದ್ರಗಳ ಒಕ್ಕೂಟವನ್ನು ಸ್ಥಾಪಿಸಿದ್ದಾರೆ. ಪುಸ್ತಕ ಬಿಡುಗಡೆಯ ನಂತರ ಪ್ಯಾನೆಲ್ ಚರ್ಚೆ ನಡೆಯಿತು. ಅದರಲ್ಲಿ ಭಾಗವಹಿಸಿದ್ದ ಗಣ್ಯರು ಜೀವನ ಚರಿತ್ರೆಯ ಕುರಿತು ತಮ್ಮ ಆಲೋಚನೆಗಳನ್ನು ಹಂಚಿಕೊಂಡರು.

ಶ್ರೀಲ ಪ್ರಭುಪಾದರ ಜೀವನ ಚರಿತ್ರೆಯನ್ನು ಹೊಗಳಿದ ಸುಧಾಮೂರ್ತಿ, ಸನ್ಯಾಸಿಯೊಬ್ಬರು, ಅವರ ಕಷ್ಟಗಳು ಮತ್ತು ಅವರು ಏಕೆ ಯಶಸ್ವಿಯಾದರು ಎಂಬುದರ ಕುರಿತು ಸ್ಪಷ್ಟವಾಗಿ ಬರೆದಿದ್ದಕ್ಕಾಗಿ ನಾನು ಹಿಂಡೋಲ್ ಅವರನ್ನು ಅಭಿನಂದಿಸಲು ಬಯಸುತ್ತೇನೆ. ನಾನು ಪುಸ್ತಕವನ್ನು ಓದಿದಾಗ, ಒಬ್ಬ ವ್ಯಕ್ತಿಯಾಗಿ ಶ್ರೀಲ ಪ್ರಭುಪಾದರು ಯಾರು ಎಂಬುದು ಸ್ಪಷ್ಟವಾಯಿತು. ಹೀಗಾಗಿ ನಾನು ಈ ಪುಸ್ತಕವನ್ನು ಇಷ್ಟಪಡುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸಾಕಷ್ಟು ಕಷ್ಟ ಅನುಭವಿಸಿದ್ದೆ: ಜಗ್ಗೇಶ್

ಎಸ್.ಸೋಮನಾಥ್ ಅವರೂ ಚರ್ಚೆಯಲ್ಲಿ ಭಾಗವಹಿಸಿ ಜೀವನ ಚರಿತ್ರೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ರಿಕಿ ಕೇಜ್ ಮಾತನಾಡಿ, ʻಸಿಂಗ್, ಡ್ಯಾನ್ಸ್ ಆಂಡ್ ಪ್ರೇʼ ಯು ಜೀವನವನ್ನು ಎಲ್ಲಾ ಕೋನಗಳಿಂದ ಚಿತ್ರಿಸುತ್ತದೆ. ಸ್ವಾಮಿ ಪ್ರಭುಪಾದರ ಜೀವನವು ಸಂಪೂರ್ಣವಾಗಿ ಸಾಂಸ್ಕೃತಿಕ ಅಡೆತಡೆಗಳನ್ನು ಮುರಿಯುವುದರ ಕುರಿತಾಗಿತ್ತು. ಅವರು ಭಾರತದ ಶ್ರೇಷ್ಠ ಸಾಂಸ್ಕೃತಿಕ ಮತ್ತು ಸಾಂಪ್ರದಾಯಿಕ ರಾಯಭಾರಿಯಾಗಿದ್ದರು. ಸಾಂಸ್ಕೃತಿಕ ಪ್ರವರ್ತಕರಾಗಿ ಅವರು ಭಾರತೀಯ ಸಂಸ್ಕೃತಿಯನ್ನು ಮುಖ್ಯವಾಹಿನಿಗೆ ತಂದು ವಿಶ್ವಾದ್ಯಂತ ಅದರ ಕುರಿತು ಮಾಹಿತಿ ನೀಡಿದರು ಎಂದರು.

sing dance and pray 2

ಡಾ.ಹಿಂಡೋಲ್ ಸೇನ್ ಗುಪ್ತಾ ಅವರು ತಮ್ಮ 10ನೇ ಪುಸ್ತಕ ಬಿಡುಗಡೆಯ ಕುರಿತು ಸಂತಸ ವ್ಯಕ್ತಪಡಿಸಿ, ಈ ಪುಸ್ತಕವು ನಿಜವಾಗಿಯೂ ವಿಶೇಷವಾಗಿದೆ ಮತ್ತು ಇದು ದೈವಕೃಪೆಯಿಂದ ಸಾಧ್ಯವಾಗಿದೆ. ಶ್ರೀಲ ಪ್ರಭುಪಾದರ ಒಂದು ಶ್ರೇಷ್ಠ ಗುಣವೆಂದರೆ ಅವರ ಸಂದೇಶವನ್ನು ಸಾರುವ ಮತ್ತು ಇತಿಹಾಸ ಮೀರುವ ಸಾಮರ್ಥ್ಯ. ಅವರ ಶಾಶ್ವತ ಸಂದೇಶ ನಿರ್ದಿಷ್ಟ ಸಮಯ, ಸ್ಥಳ ಅಥವಾ ಭೌಗೋಳಿಕತೆಗೆ ಸೀಮಿತವಾಗಿಲ್ಲ. ಇದು ಶ್ರೀಲ ಪ್ರಭುಪಾದರ ಆಸಕ್ತಿದಾಯಕ ಲಕ್ಷಣ ಎಂದು ನಾನು ಭಾವಿಸುತ್ತೇನೆ ಎಂದು ವಿವರಿಸಿದರು. ಇದನ್ನೂ ಓದಿ: ಚಂದ್ರದ್ರೋಣ ಪರ್ವತ ಸಾಲಿನಲ್ಲಿ ಗುಡ್ಡ ಕುಸಿತ – 1,200 ಕೆಜಿ ಮೇಲ್ಪಟ್ಟ ವಾಹನಗಳಿಗೆ ನಿಷೇಧ

ಮಧು ಪಂಡಿತ್ ದಾಸರು ಮಾತನಾಡಿ, ಶ್ರೀಲ ಪ್ರಭುಪಾದರ ಆದರ್ಶಪ್ರಾಯ ವ್ಯಕ್ತಿತ್ವವನ್ನು ಹೊರತಂದಿರುವ ಡಾ.ಹಿಂಡೋಲ್ ಸೇನ್ ಗುಪ್ತಾ ಅವರ ಅದ್ಭುತ ಕಾರ್ಯಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಶ್ರೀಲ ಪ್ರಭುಪಾದರು ಭಾರತದ ಒಳಸತ್ವವನ್ನು ಪಾಶ್ಚಾತ್ಯ ಸಂಸ್ಕೃತಿಗೆ ಜೋಡಿಸಿದ್ದಾರೆ. ಅದನ್ನು ಈ ಪುಸ್ತಕದಲ್ಲಿ ಚೆನ್ನಾಗಿ ವಿವರಿಸಲಾಗಿದೆ. ಶ್ರೀಲ ಪ್ರಭುಪಾದರ ಆಂದೋಲನವು ವೈಜ್ಞಾನಿಕವಾದುದು, ಅದು ಗಡಿಗಳಿಲ್ಲದ ವಿಜ್ಞಾನವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಈ ಪುಸ್ತಕವು ಡಾ. ಜಾನ್ ಸ್ಟ್ರಾಟನ್ ಹಾಲೆ (ಕ್ಲೇರ್ ಟೋವ್ ಪ್ರೊಫೆಸರ್ ಆಫ್ ರಿಲಿಜನ್, ಕೊಲಂಬಿಯಾ ಯೂನಿವರ್ಸಿಟಿ) ಮತ್ತು ಫ್ರಾನ್ಸಿಸ್ ಎಕ್ಸ್ ಕ್ಲೂನಿ (ಪಾರ್ಕ್ಮ್ಯಾನ್ ಪ್ರೊಫೆಸರ್ ಆಫ್ ಡಿವಿನಿಟಿ, ಹಾರ್ವರ್ಡ್ ವಿಶ್ವವಿದ್ಯಾನಿಲಯ) ರಂತಹ ಪ್ರಬುದ್ಧ ಅಂತಾರಾಷ್ಟ್ರೀಯ ವಿದ್ವಾಂಸರಿಂದ ಹಿಡಿದು ಶಶಿ ತರೂರ್ (ಸಂಸದ ಮತ್ತು ಲೇಖಕ), ಸ್ವಪನ್ ದಾಸ್ ಗುಪ್ತಾ (ಪತ್ರಕರ್ತ ಮತ್ತು ಚಿಂತಕ) ಮತ್ತು ಕರಣ್ ಸಿಂಗ್ (ರಾಜಕಾರಣಿ ಮತ್ತು ತತ್ವಜ್ಞಾನಿ) ಮೊದಲಾದವರಿಂದಲೂ ಸರ್ವಾನುಮತದ ಪ್ರಶಂಸೆ ಪಡೆದಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *