DistrictsKarnatakaLatestMain Post

ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸಾಕಷ್ಟು ಕಷ್ಟ ಅನುಭವಿಸಿದ್ದೆ: ಜಗ್ಗೇಶ್

- ತುಮಕೂರಿನಲ್ಲಿ ಹೊಡೆದು ನನ್ನ ಬಟ್ಟೆ ಹರಿದು ಹಾಕಿದ್ರು

Advertisements

ಬೆಂಗಳೂರು/ನೆಲಮಂಗಲ: ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸಾಕಷ್ಟು ನೋವು ಅನುಭವಿಸಿದ್ದೇನೆ ಎಂದು ನಟ ಮತ್ತು ನೂತನ ರಾಜ್ಯಸಭಾ ಸದಸ್ಯ ಜಗ್ಗೇಶ್ ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷದ ವಿರುದ್ಧ ಬೆಂಗಳೂರು ಹೊರವಲಯ ನೆಲಮಂಗಲದ ಮಾದನಾಯಕನಹಳ್ಳಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಗ್ಗೇಶ್ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಧ್ಯಾಹ್ನದ ಊಟ ಇಲ್ಲ, ಶಿಕ್ಷಕರಿಗೆ ಮಸಾಜ್ ಬೇಕಂತೆ – ವಿದ್ಯಾರ್ಥಿಗಳಿಂದಲೇ ಶಾಲೆಯ ಆಸ್ತಿ ಧ್ವಂಸ

Nelamangala

ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಸಾಕಷ್ಟು ನೋವು ಅನುಭವಿಸಿದ್ದೇನೆ. ನಾನು ಮೊದಲ ಬಾರಿಗೆ ಶಾಸಕನಾಗಿ ಗೆದ್ದಾಗ ಕೆಲವರು ಬೈದರು ಹೀಯಾಳಿಸಿದರು. ಸಾಕಷ್ಟು ನೋವು ಅನುಭಸಿದ್ದೇನೆ. ಆಗ ತುಮಕೂರಿನಲ್ಲಿ ಹೊಡೆದರು ಬಟ್ಟೆ ಹರಿದು ನಟ ಎನ್ನುವುದನ್ನು ನೋಡದೇ ಅಪಮಾನ ಮಾಡಿದ್ದನ್ನು ಮರೆಯಲು ಆಗುವುದಿಲ್ಲ. ತುರುವೇಕೆರೆ ಕ್ಷೇತ್ರದಲ್ಲಿ ನನಗೆ ಟಿಕೆಟ್ ತಪ್ಪಿಸಿದರು. ಬೇರೆಯವರಿಗೆ ಟಿಕೆಟ್ ನೀಡಿ ಸೋತರು ಎಂಪಿ ಮಾಡುವೆ ಅಂದರು ನನಗೆ ಸ್ಥಾನಮಾನ ಇಲ್ಲದಂತೆ ಮಾಡಿ ಕಾಂಗ್ರೆಸ್‍ನ ಪ್ರಭಾವಿಗಳು ಎಂದು ಲೇವಡಿ ಮಾಡಿ ಕಹಿಘಟನೆಯನ್ನು ನೆನಪು ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಶಿವ, ಪಾರ್ವತಿ ವೇಷ ಧರಿಸಿ ಹಣದುಬ್ಬರದ ಬಗ್ಗೆ ನಾಟಕ- ಶಿವ ವೇಷಧಾರಿಯ ಬಂಧನ

ಈ ವೇಳೆ ನೊಂದು ಬೆಂದು ಬಿಜೆಪಿ ಪಕ್ಷ ಸೇರಿದೆ ಸ್ಥಾನ ಮಾನ ಸಿಕ್ಕಿದೆ. ನಾನು ಊಹಿಸದಿದ್ದರೂ ರಾಜ್ಯಸಭಾ ಸದಸ್ಯರಾಗಿ ಪಕ್ಷ ಆಯ್ಕೆಮಾಡಿದೆ. ನಾನು ಬಿಜೆಪಿ ಪಕ್ಷದ ಕಟ್ಟಾಳು ಬಿಜೆಪಿ ಪಕ್ಷಕ್ಕೆ ಬರುವವರಿಗೆ ಸ್ವಾಗತ, ಯಲಹಂಕ ಕ್ಷೇತ್ರದಲ್ಲಿ ಶಾಸಕ ವಿಶ್ವನಾಥ್ ನೇತೃತ್ವದಲ್ಲಿ ಸಾಕಷ್ಟು ಮುಖಂಡರು ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರಿದ್ದೀರಿ ಒಟ್ಟಾಗಿ ಕೆಲಸಮಾಡಿ ಪಕ್ಷ ಎಲ್ಲವನ್ನೂ ನೀಡುತ್ತದೆ ಎಂದು ಜಗ್ಗೇಶ್ ಕಾರ್ಯಕರ್ತರಿಗೆ ಕಿವಿ ಮಾತನ್ನು ಹೇಳಿದ್ದಾರೆ.

Live Tv

Leave a Reply

Your email address will not be published.

Back to top button