ಬಾಲಿವುಡ್ ಬ್ಯೂಟಿ ಆಲಿಯಾ ಭಟ್ ತಾವು ತಾಯಿಯಾಗಿರುವ ಗುಡ್ ನ್ಯೂಸ್ ತಿಳಿಸಿದ ದಿನದಿಂದ ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇದ್ದಾರೆ. ಇನ್ನು ಆಲಿಯಾ ಗರ್ಭಿಣಿಯಾಗಿದ್ದಾರೆ ಅವರ ನಟಿಸುವ ಚಿತ್ರಗಳು ಪೂರ್ಣಗೊಳಿಸುವುದು ಕಷ್ಟ ಎಂಬ ವದಂತಿ ಹಬ್ಬಿದ ಬೆನ್ನಲ್ಲೇ ವಿದೇಶಕ್ಕೆ ಹಾರಿ ಹಾಲಿವುಡ್ ಸಿನಿಮಾವನ್ನ ಕಂಪ್ಲೀಟ್ ಮಾಡಿಕೊಟ್ಟಿದ್ದಾರೆ. ಈಗ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದ ಆಲಿಯಾ ಬೇಬಿ ಬಂಪ್ ಫೋಟೋ ಸಖತ್ ವೈರಲ್ ಆಗುತ್ತಿದೆ.

View this post on Instagram
ಆಲಿಯಾ ಭಟ್ ಮತ್ತು ರಣ್‌ವೀರ್ ಕಪೂರ್ ಇದೇ ಏಪ್ರಿಲ್ 14ಕ್ಕೆ ಹಸೆಮಣೆ ಏರಿದ್ದರು. ಮದುವೆಯಾದ ಎರಡೂವರೆ ತಿಂಗಳಿಗೆ ತಾವು ಅಮ್ಮನಾಗಿರುವ ವಿಚಾರವನ್ನ ಆಲಿಯಾ ಭಟ್ ರಿವೀಲ್ ಮಾಡಿದ್ದರು. ಬಳಿಕ ಆಲಿಯಾ ಕುರಿತು ಸಾಕಷ್ಟು ಸುದ್ದಿ, ಸದ್ದು ಮಾಡಿದ್ದವು. ಈ ಬೆನ್ನಲ್ಲೇ ಆಲಿಯಾ ಈ ಹಿಂದೆ ತಾವು ಒಪ್ಪಿಕೊಂಡಿರುವ ಪ್ರಾಜೆಕ್ಟ್‌ಗಳನ್ನ ಕಂಪ್ಲಿಟ್ ಮಾಡಿ ಕೊಟ್ಟಿದ್ದಾರೆ. ಸದ್ಯ ಬೇಬಿ ಬಂಪ್ ಫೋಟೋಸ್ ಸೌಂಡ್ ಮಾಡ್ತಿದ್ದಾರೆ.

