ಬಾಲಿವುಡ್‌ನ ಮುದ್ದಾದ ಜೋಡಿಗಳಲ್ಲಿ ಒಂದಾಗಿರುವ ಸೈಫ್ ಮತ್ತು ಕರೀನಾ ಕಪೂರ್ ದಂಪತಿ ಈಗ ವಿದೇಶಕ್ಕೆ ಹಾರಿದ್ದಾರೆ. ಇನ್ನು ಕರೀನಾಗೆ ಪತಿ ಚುಂಬಿಸಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ.
ಬಿಟೌನ್ ಬ್ಯೂಟಿ ಕರೀನಾ ಕಪೂರ್ ಮದುವೆ ಆದ ಮೇಲೆ ಚಾರ್ಮ್ ಉಳಿಸಿಕೊಂಡಿದ್ದಾರೆ. ಎರಡು ಮಕ್ಕಳ ತಾಯಿಯಾಗಿರುವ ಕರೀನಾಗೆ ಈಗಲೂ ಅವಕಾಶಗಳು ಹರಿದು ಬರುತ್ತಿದೆ. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಾಗೆಯೇ ಪತಿ ಸೈಫ್ ಕೂಡ ಚಿತ್ರರಂಗದಲ್ಲಿ ಆಕ್ಟೀವ್ ಆಗಿದ್ದಾರೆ. ಸದ್ಯ ಇಬ್ಬರು ಶೂಟಿಂಗ್‌ಗೆ ಬ್ರೇಕ್ ಹಾಕಿ, ಇಂಗ್ಲೆಂಡ್‌ಗೆ ಹಾರಿದ್ದಾರೆ.ಇದನ್ನೂ ಓದಿ:ಬೆತ್ತಲೆಯಾದ ವಿಜಯ್ ದೇವರಕೊಂಡಗೆ ಬಟ್ಟೆ ತೊಡಿಸಿ ಟ್ರೋಲ್ : ಮುಂದುವರೆದ ಚೇಷ್ಟೆ
View this post on Instagram
ಇಂಗ್ಲೆಂಡ್‌ನ ಸುಂದರ ಪ್ರದೇಶಗಳಿಗೆ ಈ ಜೋಡಿ ಭೇಟಿ ಕೊಟ್ಟಿದ್ದಾರೆ. ರಜಾ ದಿನವನ್ನ ಕುಟುಂಬ ಜತೆ ಸೇರಿ ಕರೀನಾ ಮತ್ತು ಸೈಫ್ ಏಂಜಾಯ್ ಮಾಡುತ್ತಿದ್ದಾರೆ. ಇಂಗ್ಲೆಂಡ್‌ನ ಬೀಚ್‌ನಲ್ಲಿ ಪತ್ನಿ ಕರೀನಾ ಸೈಫ್ ಕೆನ್ನೆಗೆ ಮುತ್ತಿಟ್ಟಿದ್ದಾರೆ. ಈ ಫೋಟೋ ನೋಡಿ ಫ್ಯಾನ್ಸ್ ಕೂಡ ಫಿದಾ ಆಗಿದ್ದಾರೆ. ಈ ಫೋಟೋ ನೆಟ್ಟಿಗರ ಗಮನ ಸೆಳೆಯುತ್ತಿದೆ.