ಮಕ್ಕಳ ಗುಪ್ತಾಂಗ ಮುಟ್ಟಿ ವಿಕೃತಿ – 40 ಮಹಿಳೆಯರೊಂದಿಗೆ ಶಿಕ್ಷಕ ರಾಸಲೀಲೆ

Public TV
1 Min Read
koppala

ಕೊಪ್ಪಳ: ಶಿಕ್ಷಕನೋರ್ವ ಮಹಿಳೆಯರೊಂದಿಗೆ ರಾಸಲೀಲೆ ನಡೆಸಿ, ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿದ ವೀಡಿಯೋ ವೈರಲ್‌ ಆದ ಹಿನ್ನೆಲೆ ಸಾರ್ವಜನಿಕರು ಶಿಕ್ಷಕನಿಗೆ ಧರ್ಮದೇಟು ನೀಡಿದ್ದಾರೆ.

ಕೊಪ್ಪಳ ಜಿಲ್ಲೆ ಕಾರಟಗಿ ಪಟ್ಟಣದಲ್ಲಿ ವಾಸವಾಗಿದ್ದ ಸರ್ಕಾರಿ ಶಾಲೆ ಶಿಕ್ಷಕ ಅಜರುದ್ಧೀನ್‍ಗೆ ಸಾರ್ವಜನಿಕರು ಧರ್ಮದೇಟು ನೀಡಿದ್ದು, ಸದ್ಯ ಶಿಕ್ಷಕ ಊರು ತೊರೆದಿದ್ದಾನೆ. ವಿಕೃತ ಮೆರೆದಿರುವ ಶಿಕ್ಷಕ ನೆರೆಯ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಸಿಂಗಾಪೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದನು.

mobile

ಆಟ – ಪಾಠದ ನೆಪದಲ್ಲಿ ತನ್ನ ಕಾರಟಗಿ ಮನೆಗೆ ಮಕ್ಕಳನ್ನು ಕರೆಯಿಸಿಕೊಂಡು ಮಕ್ಕಳ ಬಟ್ಟೆ ಬಿಚ್ಚಿಸಿ, ಮಕ್ಕಳ ಗುಪ್ತಾಂಗ ಮುಟ್ಟಿ ವಿಕೃತಿ ಮೆರೆದಿದ್ದಾನೆ. ಶಿಕ್ಷಕನ ಮನೋ ವಿಕೃತಿಯ ವೀಡಿಯೋ ಮೊಬೈಲ್‍ನಲ್ಲಿ ಸೆರೆಯಾಗಿದ್ದು ವೈರಲ್ ಆಗಿವೆ. ಅಲ್ಲದೇ ನೆರೆ ಮನೆಯ ಮಹಿಳೆಯರನ್ನು ಪುಸಲಾಯಿಸಿ ಲೈಂಗಿಕವಾಗಿ ಬಳಸಿ ಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ದಕ್ಷಿಣ ಇರಾನ್‍ನಲ್ಲಿ ಭೂಕಂಪನ- ಮೂವರು ಸಾವು, 16 ಮಂದಿಗೆ ಗಂಭೀರ ಗಾಯ

POLICE JEEP

ಇಬ್ಬರು ಮಹಿಳೆಯರ ಜೊತೆಗಿನ ತನ್ನ ರಾಸಲೀಲೆಯನ್ನು ಸ್ವತಃ ತಾನೇ ತನ್ನ ಮೊಬೈಲ್‍ನಲ್ಲಿ ವೀಡಿಯೋ ಮಾಡಿಕೊಂಡಿದ್ದು, ಎಲ್ಲಾ ವೀಡಿಯೋ ಇದೀಗ ವೈರಲ್ ಆಗಿವೆ. ಇಷ್ಟೇ ಅಲ್ಲದೇ ಇವೆಲ್ಲ ವೀಡಿಯೋ ತೋರಿಸಿ ಮಹಿಳೆಯರನ್ನು ಬೆದರಿಸಿರುವ ಕಾಮುಕ, ತಮ್ಮ ಕಾಮ ತೃಷಿಗೆ ಸಹಕರಿಸಿದ ಮಹಿಳೆಯರಿಂದ ತನಗೆ ಬೇಕಾದ ಇನ್ನಷ್ಟು ಮಹಿಳೆಯರನ್ನು ಕರೆಸಿಕೊಂಡು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ. ಇಲ್ಲಿಯವರೆಗೂ ಸುಮಾರು 40 ಮಹಿಳೆಯರಿಗೆ ಇದೇ ರೀತಿ ಮಾಡಿರುವ ಆರೋಪ ಕೇಳಿ ಬಂದಿದೆ.

ಸದ್ಯ ಸಾರ್ವಜನಿಕರು ಶಿಕ್ಷಕನೊಂದಿಗೆ ಕಾದಾಟ ನಡೆಸಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಶಿಕ್ಷಕ ಅಜರುದ್ಧೀನ್‍ನನ್ನು ಅಮಾನತುಗೊಳಿಸುವಂತೆ ಸಿಂಧನೂರು ಬಿಇಒ ಶರಣಪ್ಪ ವಟಗಲ್ ಆದೇಶಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ ಜುಲೈ 5ರವರೆಗೆ ಭಾರೀ ಮಳೆ – ಕರಾವಳಿಯಲ್ಲಿ ಆರೆಂಜ್, ಬೆಂಗ್ಳೂರಲ್ಲಿ ಯೆಲ್ಲೋ ಅಲರ್ಟ್

ಸದ್ಯ ಸಾರ್ವಜನಿಕರು ಶಿಕ್ಷಕನೊಂದಿಗೆ ಕಾದಾಟ ನಡೆಸಿರುವ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಶಿಕ್ಷಕ ಅಜರುದ್ಧೀನ್‍ನನ್ನು ಅಮಾನತುಗೊಳಿಸುವಂತೆ ಸಿಂಧನೂರು ಬಿಇಒ ಶರಣಪ್ಪ ವಟಗಲ್ ಆದೇಶಿಸಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *