ಡೆಹ್ರಾಡೂನ್: ಸಾಧಿಸುವ ಛಲವೊಂದಿದ್ದರೆ ಸಾಕು ಅದಕ್ಕೆ ವಯಸ್ಸಿನ ಅಂತರ ಅಡ್ಡಿ ಬರುವುದಿಲ್ಲ. ಎನ್ನುವುದಕ್ಕೆ ಅನೇಕ ನಿದರ್ಶನಗಳು ಸಾಕ್ಷಿಯಾಗಿವೆ. ಹಾಗೆಯೇ ಉತ್ತರಾಖಂಡದ ಹರಿದ್ವಾರದಲ್ಲಿ 75 ವರ್ಷದ ವೃದ್ಧೆಯೊಬ್ಬರು ಸೇತುವೆಯ ಮೇಲಿನಿಂದ ಗಂಗಾನದಿಗೆ ಧುಮುಕಿ ಈಜುವ ಮೂಲಕ ಜನರನ್ನು ನಿಬ್ಬೆರಗಾಗಿಸಿದ್ದಾರೆ.
अम्मा की छलांग .. 😳😳
हरकी पैड़ी के पुल से गंगा नदी में छलांग लगाने वाली बुजुर्ग महिला बुजर्ग महिला पुल से गंगा में छलांग लगाकर आराम से तैरकर किनारे जाती हुई विडियो में दिख रही है। बुजुर्ग महिला की उम्र 70 साल के करीब की बताई जा रही है। 😳😳#haridwar pic.twitter.com/IY9bDp7DAb
— Ashok Basoya 🇮🇳 (@ashokbasoya) June 28, 2022
ಹಿಂದೂಗಳ ಪವಿತ್ರ ಹಾಗೂ ಧಾರ್ಮಿಕ ಕ್ಷೇತ್ರವಾದ ಹರಿದ್ವಾರದ ಹರ್ ಕಿಪುರಿ ಘಾಟ್‌ನ ಸೇತುವೆಯಲ್ಲಿ ಈ ಘಟನೆ ನಡೆದಿದೆ. ಮೂಲತಃ ಹರಿಯಾಣದ ಸೋನಿಪತ್ ಬಂದೇಪುರ ಗ್ರಾಮದ 75 ವರ್ಷದ ವೃದ್ಧೆ ಈ ಸಾಹಸ ಮಾಡಿದ್ದಾರೆ. ಇದನ್ನೂ ಓದಿ: 16 ವರ್ಷಗಳಿಂದ ಅಳಿಯನನ್ನೇ ಪ್ರೀತಿಸ್ತಿದ್ದ ಅತ್ತೆ- ಒಟ್ಟಿಗೆ ಇರಲು ಸಾಧ್ಯವಾಗದೇ ಇಬ್ಬರೂ ಆತ್ಮಹತ್ಯೆ
ಹರಿದ್ವಾರದಲ್ಲಿ ಗಂಗಾನದಿಗೆ ಅಡ್ಡಲಾಗಿ ನಿರ್ಮಿಸಿರುವ ಸೇತುವೆ ಮೇಲಿನಿಂದ ವೃದ್ಧೆಯೊಬ್ಬರು ತುಂಬಿ ಹರಿಯುತ್ತಿರುವ ಆಳವಾದ ಗಂಗಾನದಿಗೆ ಹಾರಿ ಈಜಿದ್ದಾರೆ. ತಾನು ಸೇತುವೆಗೆ ಧುಮುಕಲು ಹೊರಟಾಗ ಯಾರೂ ತನ್ನನ್ನು ಹಿಂಬಾಲಿಸದಂತೆ ನೋಡಿಕೊಂದ್ದಾರೆ. ಆದರೂ ಸೇತುವೆ ಮೇಲಿದ್ದವರೆ ಯಾರೋ ಈ ಘಟನೆಯನ್ನು ಸೆರೆ ಹಿಡಿದು, ವೀಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದು ವೀಡಿಯೋ ವೈರಲ್ ಆಗಿದೆ.
