ಪ್ಲೀಸ್ ಹುಡುಗಿ ಕೊಡಿ – ಮದುವೆಯಾಗಲು ವಧು ಬೇಕೆಂದು ಊರೆಲ್ಲಾ ಪೋಸ್ಟರ್ ಹಾಕಿದ ಯುವಕ

Public TV
2 Min Read
tamilnadu

ಚೆನ್ನೈ: ಪ್ರತಿಯೊಬ್ಬರ ಜೀವನದಲ್ಲಿಯೂ ಮದುವೆ ಎಂಬುವುದು ಹೊಸ ಅಧ್ಯಾಯವಾಗಿರುತ್ತದೆ. ಸಾಮಾನ್ಯವಾಗಿ ಮದುವೆ ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎಂದು ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ. ಹೀಗಾಗಿ ಹಲವಾರು ಮಂದಿ ತಮಗೆ ಹೊಂದಿಕೊಳ್ಳುವAತಹ ಜೀವನ ಸಂಗಾತಿಯನ್ನು ಹುಡುಕಲು ಪ್ರಯತ್ನಿಸುತ್ತಾರೆ. ಇದಕ್ಕಾಗಿ ಬ್ರೋಕರ್, ಮ್ಯಾಟ್ರಿಮೋನಿಗಳಲ್ಲಿ ತಮ್ಮ ಪ್ರೋಫೈಲ್ ಅನ್ನು ಪೋಸ್ಟ್ ಮಾಡುವುದನ್ನು ನಾವು ನೋಡಿರುತ್ತೇವೆ. ಆದರೆ ವ್ಯಕ್ತಿಯೋರ್ವ ಹುಡುಗಿಗಾಗಿ ಊರು ತುಂಬಾ ತನ್ನ ಪ್ರೊಪೈಲ್‌ನನ್ನು ಪೋಸ್ಟರ್‌ನನ್ನು ಲಗತ್ತಿಸಿದ್ದಾನೆ.

MARRIAGE GARLAND

ಹೌದು, ತಮಿಳುನಾಡಿನ ಎಂ.ಎಸ್ ಜಗನ್ ಎಂಬವರು ಮದುವೆಯಾಗಲು ಹುಡುಗಿ ಬೇಕೆಂದು ಪೋಸ್ಟರ್ ಹಾಕಿದ್ದಾರೆ. ಸದ್ಯ ಈ ಪೋಸ್ಟರ್ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇಂಜಿನಿಯರ್ ಆಗಿರುವ 27 ವರ್ಷದ ಎಂ.ಎಸ್ ಜಗನ್ ಹಲವಾರು ವರ್ಷಗಳಿಂದ ಹುಡುಗಿಯನ್ನು ಹುಡುಕುತ್ತಿದ್ದಾರೆ. ಹುಡುಗಿಗಾಗಿ ಬ್ರೋಕರ್‌ಗಳನ್ನು ಸಂಪರ್ಕಿಸಿ ತಮ್ಮ ಪ್ರೊಫೈಲ್‌ನ್ನು ನೀಡಿದ್ದರು. ಅಲ್ಲದೇ ಮ್ಯಾಟ್ರಿಮೋನಿ ಸೈಟ್‌ನಲ್ಲೂ ಪ್ರೊಫೈಲ್ ಅಟ್ಯಾಚ್ ಮಾಡಿದ್ದರು. ಆದರೆ ಯಾವ ರೀತಿಯಲ್ಲಿ ಹುಡುಕಿದರೂ ಸೂಕ್ತ ಸಂಗಾತಿ ಸಿಕ್ಕಿರಲ್ಲಿಲ್ಲ. ಹೀಗಾಗಿ ಮಧುರೈನ ವಿಲ್ಲುಪುರಂನ ಎಂಎಸ್ ಜಗನ್ ತಮ್ಮ ವೈಯಕ್ತಿಕ ವಿವರಗಳನ್ನು ಹೊಂದಿರುವ ದೊಡ್ಡ ಪೋಸ್ಟರ್‌ಗಳನ್ನು ತಮ್ಮ ಊರಿನ ಸುತ್ತಲೂ ಹಾಕಿದ್ದಾರೆ.

 

ಪೋಸ್ಟರ್‌ನಲ್ಲಿ ಜಗನ್ ಅವರ ಫೋಟೋ ಮತ್ತು ಅವರ ಹೆಸರು, ಜಾತಿ, ಸಂಬಳ, ವೃತ್ತಿ, ವಿಳಾಸ ಮತ್ತು ಅವರು ತುಂಡು ಭೂಮಿ ಹೊಂದಿರುವ ಎಂಬ ವಿವರಗಳನ್ನು ನೀಡಿರುವುದನನು ಕಾಣಬಹುದಾಗಿದೆ. ಇದನ್ನೂ ಓದಿ:  ಭಾರತೀಯ ಉಕ್ಕು ಪ್ರಾಧಿಕಾರದ ಮಾಜಿ ಅಧ್ಯಕ್ಷ ವಿ. ಕೃಷ್ಣಮೂರ್ತಿ ವಿಧಿವಶ

MARRIAGE

ಈ ಬಗ್ಗೆ ಪ್ರತಿಕ್ರಿಯಿಸಿದ ಜಗನ್ ಅವರು, ನಾನು ಕಳೆದ ಐದು ವರ್ಷಗಳಿಂದ ವಧುವನ್ನು ಹುಡುಕುತ್ತಿದ್ದೇನೆ, ಆದರೆ ಸೂಕ್ತವಧು ಸಿಕ್ಕಿಲ್ಲ. ಹೀಗಾಗಿ ನಾನು ಅನೇಕ ಪೋಸ್ಟರ್‌ಗಳನ್ನು ವಿನ್ಯಾಸಗೊಳಿಸಿದ್ದೇನೆ. ಆದರೆ ಈ ಪ್ಲ್ಯಾನ್ ಯಾಕೋ ವರ್ಕೌಟ್ ಆಗುತ್ತಿಲ್ಲ. 27 ವರ್ಷದೊಳಗಿನ ವಧು ಕುಟುಂಬಗಳಿಂದ ಕರೆಬರಬಹುದು ಎಂಬ ನಿರೀಕ್ಷೆಯನ್ನು ಹೊಂದಿದ್ದೆ. ಆದರೆ ಬದಲಿಗೆ ಬ್ರೋಕರ್‌ಗಳಿಂದ ಕರೆ ಬರುತ್ತಿದೆ. ಮತ್ತೆ ಕೆಲವರು ಪೋಸ್ಟರ್ ನೋಡಿ ಅಪಹಾಸ್ಯ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ನಾನು ಇದ್ಯಾವುದಕ್ಕೂ ಹೆದರುವುದಿಲ್ಲ. ಅವರು ನನ್ನ ಪೋಸ್ಟರ್‌ನಿಂದ ಮೀಮ್‌ಗಳನ್ನು ಮಾಡುತ್ತಿದ್ದಾರೆ, ಆದರೆ ನಾನು ಅದರಿಂದ ಪ್ರಭಾವಿತನಾಗುವುದಿಲ್ಲ. ಅವರ ಖರ್ಚಿನಿಂದ ನಾನು ವೈರಲ್ ಆಗುತ್ತಿದ್ದೇನೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನೂ ಓದಿ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಸೀರೆ, ಚಪ್ಪಲಿ ಹರಾಜು?

Live Tv

Share This Article
Leave a Comment

Leave a Reply

Your email address will not be published. Required fields are marked *