ತುಮಕೂರಿನಲ್ಲಿ ದಲಿತ ಮುಖಂಡನ ಹತ್ಯೆ ಪ್ರಕರಣ – 13 ಆರೋಪಿಗಳ ಬಂಧನ

Public TV
1 Min Read
dss kuri murthy

ತುಮಕೂರು: ಗುಬ್ಬಿಯ ದಲಿತ ಮುಖಂಡ ನರಸಿಂಹಮೂರ್ತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 13 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಕಿರಣ್, ರಾಜ @ ಕ್ಯಾಟ್ ರಾಜ, ಮಂಜು @ ಮ್ಯಾಕ್ಸಿ, ಅಭಿಷೇಕ್ @ ಕರೀಮ, ನಯಾಜ್, ವೆಂಕಟೇಶ್, ಕೀರ್ತಿ, ಚಂದ್ರಶೇಖರ್, ಭರತ್, ದೀರಜ್, ವೆಂಕಟೇಶ, ಬಸವರಾಜು, ನಾಗರಾಜು ಬಂದಿತ ಆರೋಪಿಗಳು. ಇದನ್ನೂ ಓದಿ: ದಲಿತ ಮುಖಂಡನ ಕೊಲೆ ಪ್ರಕರಣ – ಐವರು ಶಂಕಿತರು ವಶಕ್ಕೆ

tumakuru sp

ಈ ಕುರಿತು ತುಮಕೂರು ಎಸ್‌ಪಿ ರಾಹುಲ್ ಕುಮಾರ್ ಶಹಾಪುರ್ ಸುದ್ದಿಗೋಷ್ಟಿ ನಡೆಸಿ, ಒಟ್ಟು 13 ಆರೋಪಿಗಳನ್ನು ಬಂಧಿಸಲಾಗಿದೆ. ನರಸಿಂಹ ಮೂರ್ತಿ ಅಲಿಯಾಸ್ ಕುರಿಮೂರ್ತಿ ಕೊಲೆಯಾಗಿದ್ದರು. ಒಟ್ಟು 7 ಆರೋಪಿಗಳು ಮಾಡಿದ್ದಾರೆ. ಇನ್ನುಳಿದ 6 ಜನ ಆರೋಪಿಗಳು ಕೊಲೆಗೆ ಸಹಕರಿಸಿದ್ದಾರೆ ಎಂದು ತಿಳಿಸಿದ್ದಾರೆ.

ಬಂಧಿತರಲ್ಲಿ ಒಟ್ಟು ಆರು ಜನ ಗುಬ್ಬಿ ಟೌನ್‌ನವರು. ಇಬ್ಬರು ಮಂಡ್ಯ ಮೂಲದವರು. ಇನ್ನಿಬ್ಬರು 2 ಮೈಸೂರು, ಇಬ್ಬರು ರಾಮನಗರ, ಒಬ್ಬ ಬೆಂಗಳೂರು ಮೂಲದವರಾಗಿದ್ದಾರೆ. ಆರೋಪಿಗಳಲ್ಲಿ ಕೆಲವರು ರೌಡಿಶೀಟರ್‌ಗಳಾಗಿದ್ದಾರೆ. ಇದನ್ನೂ ಓದಿ: ಟೀ ಅಂಗಡಿ ಮುಂದೆ ಕುಳಿತಿದ್ದ ಡಿಎಸ್‌ಎಸ್ ಮುಖಂಡನನ್ನು ಕೊಚ್ಚಿ ಕೊಂದ್ರು!

ಭೂ ವಿವಾದ ಹಾಗೂ ಹಣದ ವಿಚಾರಕ್ಕೆ ಕೊಲೆ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ನರಸಿಂಹ ಮೂರ್ತಿ ಹಾಗೂ ಆರೋಪಿ ಕಿರಣ್ ಪರಸ್ಪರ ಪರಿಚಯಸ್ಥರು. ಇತ್ತಿಚೆಗೆ ಕೆಲವು ತಿಂಗಳಿಂದ ಇಬ್ಬರೂ ಬೇರೆಯಾಗಿದ್ದರು. ಪರಸ್ಪರ ದ್ವೇಷ ಬೆಳೆಸಿಕೊಂಡಿದ್ದರು ಎಂದು ಎಸ್‌ಪಿ ರಾಹುಲ್ ಕುಮಾರ್ ಶಹಾಪುರ್ ಮಾಹಿತಿ ನೀಡಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *