ತುರ್ತು ನಿರ್ಗಮನ: ದಶಕಗಳ ನಂತರ ಪ್ರತ್ಯಕ್ಷರಾದ ಸುನೀಲ್

Public TV
2 Min Read
SUNIL RAO 1

ಸಿನಿಮಾರಂಗ ಅಂದ್ರೆ ಸಾಕಷ್ಟು ಸಿನಿಮಾಗಳು ಬರ್ತಾವೆ, ಹೋಗ್ತಾವೆ. ಆದರೆ ಕೆಲವೊಂದಿಷ್ಟು ಸಿನಿಮಾಗಳು ಬರ್ತಾನೆ ನಿರೀಕ್ಷೆಯನ್ನ ಹುಟ್ಟುಹಾಕ್ತಾವೆ. ಅದಕ್ಕೆ ಕಾರಣ ಸಿನಿಮಾ ಶೀರ್ಷಿಕೆ, ತಾರಾಗಣ, ಕಥಾ ಹಂದರ ಇನ್ನೂ ಏನೇನೋ ಇರತ್ತೆ. ಆದರೆ ಅಂಥದ್ದೇ ನಿರೀಕ್ಷೆಯೊಂದಿಗೆ ಇದೇ ವಾರ ಅಂದ್ರೆ 24 ರಂದು ತೆರೆಕಾಣ್ತಿರೋ ಸಿನಿಮಾ ತುರ್ತು ನಿಗಮನ. ಹೌದು. ಟೈಟಲ್ ಕೇಳಿದ್ರೆನೇ ಇಲ್ಲೇನೂ ನಿಗೂಢಗಳಂತೂ ಇದೇ ಅನ್ನೋದು ಪಕ್ಕಾ ಆಗತ್ತೆ. ಆದರೆ ಆ ಸೀಕ್ರೆಟ್ ಗಳನ್ನ ಗೌಪ್ಯವಾಗಿಟ್ಟುಕೊಂಡು ಸಿನಿಮಾ ಮೇಲಿನ ಭರವಸೆ, ಕಾತುರವನ್ನ ಹಾಗೇ ಕಾಯ್ದಿಟ್ಟುಕೊಂಡು ಬಂದಿರುವ ಈ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.

SUNIL RAO 2

ಹೇಮಂತ್ ಕುಮಾರ್ ನಿರ್ದೇಶನದ ತುರ್ತು ನಿಗಮನ ಚಿತ್ರ ಬರೀ ಟೈಟಲ್ ಮೂಲಕ ಮಾತ್ರವಲ್ಲ ಟ್ರೈಲರ್ ಮೂಲಕವೂ ಗಮನ ಸೆಳೆದಿತ್ತು. ಈ ಚಿತ್ರದಲ್ಲಿ ಪ್ರೇಕ್ಷಕರೊಳಗಿರೋ ನಿರೀಕ್ಷೆಗಳನ್ನು ಮೀರಿದ ಕಥಾನಕವಿದೆ. ಕಲ್ಪನೆಗೆ ನಿಲುಕದ ಅಚ್ಚರಿಗಳಿದ್ದಾವೆ ಅನ್ನೋದನ್ನು ಟ್ರೈಲರ್ ಮೂಲಕ ಚಿತ್ರತಂಡವೇ ರಿವೀಲ್ ಮಾಡಿತ್ತು. ತುರ್ತು ನಿರ್ಗಮನ ಚಿತ್ರದಿಂದ ಸಿನಿಪ್ರಿಯರಿಗೆ ಇನ್ನೊಂದು ಗುಡ್ ನ್ಯೂಸ್ ಸಹ ಇದೆ. ಅದೇನಪ್ಪಾ ಅಂದ್ರೆ ಈ ಸಿನಿಮಾದ ಕಥೆಯೇ ವಿಶೇಷ ಅಂದುಕೊಂಡರೆ ಅದು ತಪ್ಪು, ಯಾಕಂದ್ರೆ ಈ ಸಿನಿಮಾದ ಪಾತ್ರವರ್ಗ ಮತ್ತು ಅದನ್ನು ನಿರ್ವಹಿಸಿರುವ ಕಲಾವಿದರ ವಿಚಾರವಾಗಿಯೂ ಅಂಥಾದ್ದೇ ವಿಶೇಷತೆಗಳಿದ್ದಾವೆ. ಅದ್ ಹೇಗೆ? ಅಂಥ ವಿಶೇಷ ಈ ಸಿನಿಮಾದಲ್ಲಿ ಏನಿದೆ? ಯಾರಿದ್ದಾರೆ? ಅಂತನಾ ? ಈ ಮೂಲಕ ಎಕ್ಸ್‍ಕ್ಯೂಸ್‍ಮೀ ಚಿತ್ರದ ಟೀನೇಜ್ ಹುಡುಗೀರ ಮನ ಕದ್ದಿದ್ದ ಸುನೀಲ್ ರಾವ್ ದಶಕಗಳ ನಂತರ ಮತ್ತೆ ನಾಯಕ ನಟನಾಗಿ ತೆರೆಯ ಮೇಲೆ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ: ನಟಿ ಕಾರುಣ್ಯ ರಾಮ್ ಗೃಹ ಪ್ರವೇಶದಲ್ಲಿ ಚಂದನವನದ ತಾರೆಯರು

SUNIL RAO

ಅದೇನೋ ಗೊತ್ತಿಲ್ಲ ಸಖತ್ ಹೈಪ್ ಕ್ರಿಯೇಟ್ ಆಗಿ ಮಿಂಚುತ್ತಿದ್ದ ಕಾಲದಲ್ಲೇ ಸುನೀಲ್ ತೆರೆಮರೆಗೆ ಸರಿದಿದ್ದರು. ಆದರೆ ಬಾಲ ನಟನಾಗಿಯೇ ಇಷ್ಟವಾಗಿದ್ದ ಸುನೀಲ್ ರಾವ್ ನಾಯಕ ನಟನಾಗಿಯೂ ಮನಸು ಕದ್ದಿದ್ರು. ಆದರೆ ಸಡನ್ ಅಗಿ ಸುನಿಲ್ ನಟನೆಯಿಂದ ದೂರ ಊಳಿದರೂ ಸಹ ಅವರ ಅಭಿಮಾನಿಗಳು ಮಾತ್ರ ಅವರನ್ನ ಮರೆತಿಲ್ಲ ಸುನೀಲ್ ಮತ್ಯಾವಾಗ ರಿಟರ್ನ್ ಸಿನೆಮಾಗೆ ಬರ್ತಾರೆ? ನಟಿಸ್ತಾರೆ ಅಂತ ಎದುರು ನೋಡ್ತಿದ್ರು. ಆ ನಿರೀಕ್ಷೆಗಳು ತುರ್ತು ನಿರ್ಗಮನ ಸಿನಿಮಾ ಮೂಲಕ ನಿಜವಾಗಲಿದೆ.

ಒಂದೊಳ್ಳೆ ಅವಕಾಶ ಮತ್ತು ಅದ್ಭುತ ಪಾತ್ರದ ಮೂಲಕ ಮತ್ತೆ ಬಣ್ಣ ಹಚ್ಚುವ ಇರಾದೆ ಹೊಂದಿದ್ದ ಸುನೀಲ್ ರಾವ್‍ಗೆ ವರದಂತೆ ಸಿಕ್ಕಿದ್ದ ಚಿತ್ರ ತುರ್ತು ನಿರ್ಗಮನ. ಅವರೇ ಹೇಳುವ ಪ್ರಕಾರ ಈ ಚಿತ್ರದ ಕಥೆಯನ್ನು ಯಾವ ಹೀರೋಗಳೇ ಕೇಳಿದರೂ ಇಲ್ಲ ಎನ್ನಲು ಸಾಧ್ಯವೇ ಇಲ್ಲವಂತೆ. ಅವರ ಪಾತ್ರದ ಬಗೆಗೂ ಚಿತ್ರ ತಂಡ ಕೆಲವು ವಿಚಾರಗಳನ್ನು ಬಿಟ್ಟು ಕೊಟ್ಟಿತ್ತು. ಅವರ ಪ್ರಕಾರ ಬಹುತೇಕ ಗಂಡುಮಕ್ಕಳ ಬದುಕಿಗೆ, ಮನಸ್ಥಿತಿಗೆ ಹತ್ತಿರವಾದ ಪಾತ್ರಕ್ಕೆ ಸುನೀಲ್ ಬಣ್ಣ ಹಚ್ಚಿದ್ದು, ತನ್ನನ್ನು ತಾನೇ ಬುದ್ಧಿವಂತ ಅಂದುಕೊಂಡಿರುವ ಯುವಕನೊಬ್ಬ ಅದ್ಯಾವುದೋ ಅಗೋಚರ ಸಾಧನೆಗೆ ರೆಡಿಯಾಗಿ ನಿಂತಿರುವ ಪಾತ್ರಕ್ಕೆ ಸುನೀಲ್ ರಾವ್ ಜೀವ ತುಂಬಿದ್ದಾರಂತೆ. ಈ ಪಾತ್ರದ ಮೂಲಕ ಸುನೀಲ್ ಚಿತ್ರಬದುಕಿಗೆ ಹಾಕಿದ್ದ ಒಂದಷ್ಟು ಕಾಲದ ಬ್ರೇಕ್ ಈ ತುರ್ತು ನಿರ್ಗಮನದ ಮೂಲಕ ಒಂದೊಳ್ಳೆ ಹೊಸ ಮೈಲಿಗಲ್ಲಾಗಿ ನಿಲ್ಲಲಿದೆಯಂತೆ.

ಚಿತ್ರದಲ್ಲಿ ಡಿಫರೆಂಟ್ ರೋಲ್ ನಲ್ಲಿ ಸುಧಾರಾಣಿ, ರಾಜ್ ಬಿ ಶೆಟ್ಟಿ, ನಟಿಸಿದ್ದು, ಸಂಯುಕ್ತ ಹೆಗಡೆ, ಹಿತ ಚಂದ್ರಶೇಖರ್ ತಾರಾಗಣದಲ್ಲಿದ್ದಾರೆ. ಧೀರೇಂದ್ರ ದಾಸ್ ಸಂಗೀತ, ಪ್ರಯಾಗ್ ಅವರ ಛಾಯಾಗ್ರಹಣ ತುರ್ತು ನಿರ್ಗಮನಕ್ಕಿದ್ದು ಇವೆಲ್ಲದರ ಒಟ್ಟು ಪ್ರಯತ್ನ ಇದೇ ವಾರವೇ ಅನಾವರಣಗೊಳ್ಳಲಿದೆ.

Live Tv

Share This Article
Leave a Comment

Leave a Reply

Your email address will not be published. Required fields are marked *