ನ್ಯಾಷನಲ್ ಸ್ಟಾರ್ ಯಶ್ ನಟನೆಯ `ಕೆಜಿಎಫ್ 2′ ತೆರೆಗೆ ಬಂದು ಎರಡು ತಿಂಗಳು ಕಳೆದಿದೆ. ಗಲ್ಲಾಪೆಟ್ಟಿಗೆಯಲ್ಲಿ ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಈ ಚಿತ್ರದ ಸಕ್ಸಸ್ ಬಳಿಕ ರಾಕಿಭಾಯ್, ತಮ್ಮ ಕುಟುಂಬದ ಕಡೆ ಹೆಚ್ಚು ಗಮನ ಕೊಡ್ತಿದ್ದಾರೆ. ಇತ್ತೀಚೆಗಷ್ಟೇ ಕುಟುಂಬದ ಜೊತೆ ಅನಿಮಲ್ ಪಾರ್ಕ್‌ಗೆ ಭೇಟಿ ಕೊಟ್ಟಿದ್ದರು. ಇದರ ವಿಡಿಯೋ ಇದೀಗ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
`ಕೆಜಿಎಫ್’ ಯಶಸ್ಸಿನ ನಂತರ ಯಶ್ ಕುಟುಂಬಕ್ಕೆ ಸಮಯ ನೀಡ್ತಿದ್ದಾರೆ. ಯಶ್ ಮತ್ತು ರಾಧಿಕಾ ಪಂಡಿತ್, ಮಕ್ಕಳಾದ ಐರಾ, ಯಥರ್ವ್, ರಾಧಿಕಾ ಸಹೋದರ ಗೌರಂಗ್, ಯಶ್ ಸಹೋದರಿ ನಂದನಿ ಕುಟುಂಬದವರೆಲ್ಲರೂ ಸೇರಿ ಇತ್ತೀಚೆಗಷ್ಟೇ ಕನಕಪುರ ರಸ್ತೆಯಲ್ಲಿರುವ ಅನಿಮಲ್ ಪಾರ್ಕ್ ತೆರಳಿದ್ದರು. ಇದರ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಯಾವುದೇ ಧರ್ಮದವರಿಗೆ ನೋಯಿಸುವ ಉದ್ದೇಶವಿಲ್ಲ – ಕ್ಷಮೆಯಾಚಿಸಿದ ಸಾಯಿ ಪಲ್ಲವಿ
View this post on Instagram
ಕೆಲ ದಿನಗಳ ಹಿಂದೆ ನಟಿ ರಾಧಿಕಾ ಕೂಡ ಗಿಳಿ ಜೊತೆಗಿನ ಫೋಟೋ ಹಂಚಿಕೊಂಡಿದ್ದರು. ಬೇರೆ ಬೇರೆ ಪ್ರಾಣಿ, ಪಕ್ಷಿಗಳ ಜೊತೆ ಯಶ್ ಕುಟುಂಬ ಸಂತಸದ ಸಮಯವನ್ನ ಕಳೆದಿದೆ. ಅನಿಮಲ್ ಪಾರ್ಕ್ ಅನ್ನು ಸಂಜೀವ ಎಂಬುವವರು ನಡೆಸುತ್ತಿದ್ದಾರೆ. ಈ ಕುರಿತು ಯಶ್ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.
An experience that changed our perception!
Always knew Sanjeev as a passionate kid and today, he has made us all proud, by doing what he loves and creating an unforgettable experience. pic.twitter.com/99M9QwzcAD
— Yash (@TheNameIsYash) June 18, 2022
ರಾಕಿಭಾಯ್ ನಟಿಸಿರುವ ಚಿತ್ರ ಹಿಟ್ ಆದಮೇಲೆ ಮುಂದೆ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಅಂತಾ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಯಶ್ ಮುಂದಿನ ನಡೆಗಾಗಿ ಮತ್ತು ಚಿತ್ರಗಳ ಅಧಿಕೃತ ಘೋಷಣೆಗಾಗಿ ಫ್ಯಾನ್ಸ್ ಕಾಯ್ತಿದ್ದಾರೆ.
Live Tv