ಮಾಧ್ಯಮವೊಂದರ ಸಂದರ್ಶನದಲ್ಲಿ ಕಾಶ್ಮೀರ ಪಂಡಿತರ ಹತ್ಯೆ ಮತ್ತು ಜೈ ಶ್ರೀರಾಮ್ ಎಂದು ಹೇಳುತ್ತಾ ಗೋ ಸಾಗಾಣೆ ಮಾಡುತ್ತಿದ್ದ ಮುಸ್ಲಿಂ ಹತ್ಯೆ ಎರಡೂ ಒಂದೇ ಅನಿಸುತ್ತಿದೆ ಎಂದು ಹೇಳಿಕೆ ನೀಡಿ ವಿವಾದ ಸೃಷ್ಟಿಸಿದ್ದ ದಕ್ಷಿಣದ ತಾರೆ ಸಾಯಿ ಪಲ್ಲವಿ ಇದೀಗ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
Advertisement
ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋ ಕಳ್ಳಸಾಗಾಣಿಕೆ ಬಗ್ಗೆ ಮಾತನಾಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಧಾರ್ಮಿಕವಾಗಿ ನೋಡುವುದಾದರೆ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋ ಕಳ್ಳಸಾಗಾಣಿಕೆ ಎರಡೂ ಒಂದೇ ಅಲ್ಲವೇ? ಎಂದು ಹೇಳುವ ಮೂಲಕ ಸಾಯಿ ಪಲ್ಲವಿ ಹೊಸ ವಿವಾದವನ್ನು ಹುಟ್ಟು ಹಾಕಿದ್ದರು. ದೇಶಾದ್ಯಂತ ಈ ಬಗ್ಗೆ ತೀವ್ರ ಪರ ವಿರೋಧ ವ್ಯಕ್ತವಾಗಿದೆ. ಈ ಬಗ್ಗೆ ಫೇಸ್‍ಬುಕ್ ಲೈವ್ ಮೂಲಕ ಸ್ಪಷ್ಟನೆ ನೀಡಿದ ಅವರು, ದಿ ಕಾಶ್ಮೀರ್ ಫೈಲ್ಸ್ ಅನ್ನು ವೀಕ್ಷಿಸಿದ ನಂತರ, ನಾನು ಚಿತ್ರದ ನಿರ್ದೇಶಕ (ವಿವೇಕ್ ಅಗ್ನಿಹೋತ್ರಿ) ಜೊತೆ ಮಾತನಾಡಿದೆ. ಜನರ ದುಃಸ್ಥಿತಿಯನ್ನು ನೋಡಿದ ನಂತರ ತಾನು ವಿಚಲಿತಳಾಗಿದ್ದೇನೆ. ಇದನ್ನೂ ಓದಿ: ‘ಜೈ ಶ್ರೀರಾಮ್’ ಎಂದು ಕೊಲ್ಲುವ ಮಾತಿನ ವಿವಾದ: ನಟಿ ಸಾಯಿ ಪಲ್ಲವಿ ಬಂಧನಕ್ಕೆ ಹೆಚ್ಚಿದ ಒತ್ತಡ
Advertisement
View this post on Instagram
Advertisement
ಯಾವುದೇ ರೂಪದಲ್ಲಿ ಹಿಂಸೆ ಮತ್ತು ಯಾವುದೇ ಧರ್ಮದ ಹೆಸರಿನಲ್ಲಿ ಹಿಂಸೆ ದೊಡ್ಡ ಪಾಪ ಎಂದು ನಾನು ನಂಬುತ್ತೇನೆ. ನಾನು ಹೇಳಲು ಉದ್ದೇಶಿಸಿದ್ದು ಇಷ್ಟೇ. ಆದರೆ, ಅನೇಕ ಜನರು ಇದನ್ನು ಬೇರೆ ರೀತಿ ಅರ್ಥಮಾಡಿಕೊಂಡು ವಿವಾದ ಸೃಷ್ಟಿಸಿದ್ದು, ಆತಂಕಕಾರಿಯಾಗಿದೆ. ನಮ್ಮಲ್ಲಿ ಯಾರೊಬ್ಬರಿಗೂ ಇನ್ನೊಬ್ಬರ ವೈಯಕ್ತಿಕ ಜೀವನವನ್ನು ತೆಗೆದುಕೊಳ್ಳುವ ಹಕ್ಕಿಲ್ಲ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ ಜೊತೆಗೆ ಇಲ್ಲಿ ನನ್ನ ಸ್ಪಷ್ಟೀಕರಣವಿದೆ ನಿಮ್ಮೆಲ್ಲರಿಗೂ ಸಂತೋಷ, ಶಾಂತಿ ಮತ್ತು ಪ್ರೀತಿಯನ್ನು ನಾನು ಬಯಸುತ್ತೇನೆ ಎಂದು ಅಡಿಬರಹ ನೀಡಿದ್ದಾರೆ. ಇದನ್ನೂ ಓದಿ: ‘ಜೈ ಶ್ರೀರಾಮ್’ ಎನ್ನುತ್ತಾ ಮುಸ್ಲಿಂ ಹತ್ಯೆ ವಿಚಾರ: ಸಾಯಿ ಪಲ್ಲವಿ ಬೆಂಬಲಕ್ಕೆ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ
Advertisement
ವಿವಾದದ ಹೇಳಿಕೆ:
ಕಾಶ್ಮೀರ ಪಂಡಿತರ ಹತ್ಯೆ ಮತ್ತು ಜೈ ಶ್ರೀರಾಮ್ ಎಂದು ಹೇಳುತ್ತಾ ಗೋ ಸಾಗಾಣೆ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿ ಮೇಲಿನ ಹಲ್ಲೆ ಎರಡೂ ಒಂದೇ ಅನಿಸುತ್ತಿದೆ. ಧರ್ಮದ ಹೆಸರಿನಲ್ಲಿ ನಡೆಯುವ ಹತ್ಯೆಗಳನ್ನು ಖಂಡಿಸಬೇಕು ಎಂದು ಸಾಯಿ ಪಲ್ಲವಿ ಮಾತನಾಡಿದ್ದರು. ನಾನು ಸಮಸಮಾಜದ ಕನಸು ಕಂಡಿರುವ ಹುಡುಗಿ. ನಾನು ಯಾವುದೇ ಪಕ್ಷದ ಪರವಾಗಿ ಕೆಲಸ ಮಾಡುವುದಿಲ್ಲ. ಜಾತಿ, ಧರ್ಮಗಳ ಬಡಿದಾಟಕ್ಕೂ ನಾನು ಸಿದ್ಧಳಿಲ್ಲ. ಸಮಾಜದಲ್ಲಿ ಎಲ್ಲರೂ ಒಗ್ಗಟ್ಟಿನಿಂದಲೇ ಬದುಕಬೇಕು. ಧರ್ಮಗಳ ಕಚ್ಚಾಟ ಏಕೆ? ಯಾರದೋ ಲಾಭಕ್ಕಾಗಿ ಆಗುತ್ತಿರುವ ದಾಳಿಯಿದು ಅಂತ ನನಗೆ ಅನಿಸುತ್ತಿದೆ ಎಂದು ಸಾಯಿ ಪಲ್ಲವಿ ಮಾತನಾಡಿದ್ದಾರೆ. ಮೊನ್ನೆ ಇಂಥದ್ದೊಂದು ಹೇಳಿಕೆಯನ್ನು ಸಾಯಿ ಪಲ್ಲವಿ ಕೊಡುತ್ತಿದ್ದಂತೆಯೇ ಎಲ್ಲಡೆ ಆಕ್ರೋಶ ವ್ಯಕ್ತವಾಯಿತು. ಸಾಯಿ ಮಾತಿಗೆ ಪರ ವಿರೋಧ ವ್ಯಕ್ತವಾಯಿತು. ಕಳ್ಳಸಾಗಾಣಿಕೆದಾರನಿಗೆ ಕಾಶ್ಮೀರಿ ಪಂಡಿತರ ಹತ್ಯೆಯನ್ನು ಹೋಲಿಸಿದ್ದಕ್ಕಾಗಿ ಭಜರಂಗ ದಳದ ನಾಯಕರು, ಹೈದರಾಬಾದ್‍ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.