ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಸೈಕಲ್ ಸವಾರಿ ಮಾಡುವ ಸಂದರ್ಭ ಎಡವಿ ಬಿದ್ದಿದ್ದಾರೆ.
ಶನಿವಾರ ಬೆಳಗ್ಗೆ ಡೇವಲ್ ರಾಜ್ಯದ ಬೀಚ್ ಹೋಮ್ ಬಳಿ ಸೈಕಲ್ ಸವಾರಿ ಮಾಡುತ್ತಿದ್ದ ಸಂದರ್ಭ ಜೋ ಬೈಡನ್ ಎಡವಿ ಬಿದ್ದಿದ್ದಾರೆ. ಬೈಡನ್ ಬಿದ್ದ ತಕ್ಷಣ ನೆರೆದವರು ತಬ್ಬಿಬ್ಬಾಗಿದ್ದಾರೆ. ಆದರೂ ಬೈಡನ್ ನನಗೇನೂ ಆಗಿಲ್ಲ, ಚೆನ್ನಾಗೇ ಇದ್ದೇನೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ 750, ಬೆಂಗ್ಳೂರಲ್ಲಿ 716 ಕೇಸ್ – ಪಾಸಿಟಿವಿಟಿ ರೇಟ್ ಶೇ. 3.06ಕ್ಕೆ ಏರಿಕೆ
ಬೈಡನ್ ಡೆಲವೇರ್‌ನ ರೆಹೋಬೋತ್ ಬೀಚ್‌ನಲ್ಲಿರುವ ಅವರ ಮನೆಯ ಬಳಿಯ ಸ್ಟೇಟ್ ಪಾರ್ಕ್‌ನಲ್ಲಿ ಪ್ರಥಮ ಮಹಿಳೆ ಜಿಲ್ ಬಿಬೈಡನ್ ರೊಂದಿಗೆ ಸೈಕಲ್ ಸವಾರಿ ಮಾಡುತ್ತಿದ್ದರು. ಪಕ್ಕದಲ್ಲೇ ನೆರೆದಿದ್ದವರನ್ನು ಮಾತನಾಡಿಸಲು ಬೈಡನ್ ಸೈಕಲ್ ಅನ್ನು ರಸ್ತೆ ಬದಿ ನಿಲ್ಲಿಸಿದಾಗ ನಿಯಂತ್ರಣ ತಪ್ಪಿ ಬಿದ್ದಿದ್ದಾರೆ.
ಬೈಡನ್ ಸೈಕಲ್‌ನಿಂದ ಬೀಳುವುದಕ್ಕೂ ಮೊದಲೇ ನೆರೆದಿದ್ದವರು ಅದರ ವೀಡಿಯೋ ಮಾಡಿದ್ದಾರೆ. ಈ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದು, ವಿಶ್ವದ ದೊಡ್ಡಣ್ಣ ಬಿದ್ದಿರುವ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಸ್ಥಾನಕ್ಕೆ ಸ್ಪರ್ಧಿಸಲ್ಲ: ಫಾರೂಕ್ ಅಬ್ದುಲ್ಲಾ
Biden falls down from bike in Delaware ???? pic.twitter.com/Z6NipmnfyS
— Nwabulibu (@Nwabulibu) June 18, 2022
ಬೈಡನ್ ಈ ಬಗ್ಗೆ ಬಳಿಕ ತಮ್ಮ ಹಿತೈಷಿ ಹಾಗೂ ವರದಿಗಾರರಿಗೆ ತಿಳಿಸಿದ್ದಾರೆ. ಶ್ವೇತಭವನದ ಪೂಲ್ ವರದಿಯ ಪ್ರಕಾರ, ಬೈಡನ್‌ಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿಸಿವೆ.