ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಪರ ವಿರೋಧದ ಅಲೆ ಜೋರಾಗುತ್ತಿದೆ. ಪಠ್ಯ ಪರಿಷ್ಕರಣೆ ಕುರಿತಂತೆ ಈವರೆಗೂ ಸಾಹಿತಿಗಳು ಮತ್ತು ರಾಜಕಾರಣಿಗಳ ಪ್ರವೇಶ ಮಾತ್ರ ಆಗಿತ್ತು. ಇದೀಗ ಸಿನಿಮಾ ನಟ, ಸಾಮಾಜಿಕ ಹೋರಾಟಗಾರ ಚೇತನ್ ಪ್ರವೇಶ ಮಾಡಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆಗೆ ಸಂಬಂಧ ಪಟ್ಟಂತೆ ಅವರು ತಮ್ಮ ಆಕ್ರೋಶವನ್ನು ವಿಭಿನ್ನವಾಗಿ ಹೊರ ಹಾಕಿದ್ದಾರೆ. ಇದನ್ನೂ ಓದಿ: ಎರಡೇ ದಿನಕ್ಕೆ 100 ಕೋಟಿ ಕ್ಲಬ್ ಸೇರಿದ ಕಮಲ್ ಹಾಸನ್ ನಟನೆಯ `ವಿಕ್ರಮ್’ ಚಿತ್ರ
ಈವರೆಗೂ ರೋಹಿತ್ ಚಕ್ರತೀರ್ಥ ಮತ್ತು ಬಿಜೆಪಿ ಬಗ್ಗೆಯೇ ಕಟುವಾಗಿ ಟೀಕೆ ಮಾಡುತ್ತಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಕ್ಕೂ ಚೇತನ್ ಕಿವಿ ಹಿಂಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ವಿಡಿಯೋದಲ್ಲಿ ಅವರು, “ಗಾಂಧಿ – ನೆಹರು ನಮ್ಮ ವಿರೋಧಿಗಳು . ಆರ್ ಎಸ್ ಎಸ್, ಹೆಗೆಡೆವಾರ್ ನಮ್ಮ ವಿರೋಧಿಗಳು. ಅಂಬೇಡ್ಕರ್ , ಕುವೆಂಪು ,ದರಾ ಬೇಂದ್ರೆ ಪರ ನಮ್ಮ ನಿಲುವು” ಎಂದು ಹೇಳಿದ್ದಾರೆ. ಇದನ್ನೂ ಓದಿ: ಬೇಬಿ ಶವರ್‌ನಲ್ಲಿ ಮಿಂಚಿದ ಪ್ರಣೀತಾ ಸುಭಾಷ್
ಕಾಂಗ್ರೆಸ್ ಕಾಲ ಬಂದರೆ ಗಾಂಧಿ , ನೆಹರು ಕುರಿತಾದ ಪಾಠವನ್ನು ಮಕ್ಕಳಿಗೆ ಹೊರೆಸುತ್ತಾರೆ. ಈಗ ಬಿಜೆಪಿಯು ಸಂಘದ ಪಟ್ಟಿ ಹಚ್ಚಲು ಮುಂದಾಗಿದೆ ಎಂದಿರುವ ಚೇತನ್, ಈ ಕುರಿತು ನಾವೆಲ್ಲ ಸಾಮೂಹಿ ಚಳವಳಿಗೆ ಧುಮುಕಬೇಕು. ಸಮಸಮಾಜಕ್ಕಾಗಿ – ಸೈದ್ಧಾಂತಿಕ ನಿಲುವಿಗಾಗಿ ಹೋರಾಡಿದವರು ಪಠ್ಯದಲ್ಲಿರಲಿ. ಕಾಂಗ್ರೆಸ್ , ಜೆಡಿಎಸ್ , ಬಿಜೆಪಿ ಎಲ್ಲರದ್ದೂ ಒಂದೇ ಕಥೆ. ಪಠ್ಯ ಪುಸಕ್ತ ಪರಿಷ್ಕರಣಾ ಸಮಿತಿ ಏಜೆನ್ಸಿಯು ಪಾರ್ಟಿಗಳ ಹಿಡಿತದಲ್ಲಿ ಇರಬಾರದು ಎಂದಿದ್ದಾರೆ ಚೇತನ್.