ರಿಲೀಸ್‌ಗೂ ಮುನ್ನವೇ `ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ಕಂಟಕ: ಈ ದೇಶಗಳಲ್ಲಿ ಈ ಚಿತ್ರ ಬ್ಯಾನ್

Public TV
1 Min Read
akshay kumar

ಕ್ಷಯ್ ಕುಮಾರ್ ನಟನೆಯ ಬಹುನಿರೀಕ್ಷಿತ ಚಿತ್ರ `ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ರಿಲೀಸ್‌ಗೂ ಮುನ್ನವೇ ಕಂಟಕ ಏದುರಾಗಿದೆ. ಇದೇ ಜೂನ್ 3ಕ್ಕೆ ಬಿಡುಗಡೆಗೆ ರೆಡಿಯಿರೋ ಚಿತ್ರಕ್ಕೆ ಕೆಲ ದೇಶಗಳಲ್ಲಿ ಸಿನಿಮಾ ಬ್ಯಾನ್ ಮಾಡಲಾಗಿದೆ.

FotoJet 6 3ಅಕ್ಷಯ್ ಕುಮಾರ್ ನಟನೆಯ `ಸಾಮ್ರಾಟ್ ಪೃಥ್ವಿರಾಜ್’ ಸಿನಿಮಾ, ರಿಲೀಸ್‌ಗೆ ಒಂದು ದಿನ ಇರುವಾಗ ಕೆಲ ದೇಶಗಳಲ್ಲಿ ಈ ಚಿತ್ರ ಬ್ಯಾನ್ ಮಾಡಲಾಗಿದೆ. ಓಮನ್ ಮತ್ತು ಕುವೈತ್‌ನಲ್ಲಿ ಅಕ್ಷಯ್ ಕುಮಾರ್ ಅಭಿನಯದ ಈ ಚಿತ್ರಕ್ಕೆ ಪ್ರದರ್ಶನಕ್ಕೆ ಅವಕಾಶ ನೀಡಿಲ್ಲ ಎಂಬ ಮಾಹಿತಿ ಇದೀಗ ಹೊರ ಬಿದ್ದಿದೆ.

 

View this post on Instagram

 

A post shared by Akshay Kumar (@akshaykumar)

ಐತಿಹಾಸಿಕ ಹಿನ್ನೆಲೆ ಇರುವ `ಸಾಮ್ರಾಟ್ ಪೃಥ್ವಿರಾಜ್’ ಚಿತ್ರಕ್ಕೆ ಪ್ರದರ್ಶನಕ್ಕೆ ಯಾಕೆ ಅಡ್ಡಗಾಲು ಹಾಕಿದ್ದಾರೆ ಎಂಬುದುದಕ್ಕೆ ಈ ಕುರಿತು ಮಾಹಿತಿ ಸಿಕ್ಕಿಲ್ಲ. ಈಗ ರಿಲೀಸ್‌ ತಡೆ ನೀಡಿರುವ ವಿಚಾರಕ್ಕೆ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪತ್ನಿ ವಿರುದ್ಧ ಹೂಡಿದ್ದ ಮಾನನಷ್ಟ ಮೊಕದ್ದಮೆಯಲ್ಲಿ ಗೆದ್ದ ಹಾಲಿವುಡ್ ಸ್ಟಾರ್ ನಟ ಜಾನಿ ಡೆಪ್ : ನೂರಾರು ಕೋಟಿ ಪರಿಹಾರ

 

View this post on Instagram

 

A post shared by Akshay Kumar (@akshaykumar)

ಪೃಥ್ವಿರಾಜ್ ಚೌಹಾಣ್ ಕಥಾಹಂದರವಿರುವ ಈ ಸಿನಿಮಾಗೆ ಅಕ್ಷಯ್‌ಗೆ ಜೋಡಿಯಾಗಿ ವಿಶ್ವ ಸುಂದರಿ ಮಾನುಷಿ ಚಿಲ್ಲರ್ ನಟಿಸಿದ್ದಾರೆ. ಡಾ.ಚಂದ್ರಪ್ರಕಾಶ್ ದ್ವಿವೇದಿ ನಿರ್ದೇಶನದ ಈ ಚಿತ್ರ ಹಿಂದಿ, ತೆಲುಗು ಮತ್ತು ತಮಿಳಿನಲ್ಲಿ ಜೂನ್ ೩ಕ್ಕೆ ತೆರೆ ಕಾಣಲಿದೆ. ಇನ್ನು ಈ ಎಲ್ಲಾ ಅಡೆ ತಡೆಗಳ ಮಧ್ಯೆ ಗೆದ್ದು ನಿಂತು ಬಾಲಿವುಡ್ ರಂಗಕ್ಕೆ `ಸಾಮ್ರಾಟ್ ಪೃಥ್ವಿರಾಜ್’ ಚಿತ್ರ ಹೊಸ ಚೈತನ್ಯ ನೀಡುತ್ತಾ ಅಂತಾ ಕಾದು ನೋಡಬೇಕಿದೆ.

Share This Article
Leave a Comment

Leave a Reply

Your email address will not be published. Required fields are marked *