ಕನ್ನಡ ಚಿತ್ರರಂಗಕ್ಕೆ `ಜೋಶ್’ ಚಿತ್ರದ ಮೂಲಕ ನಾಯಕಿಯಾಗಿ ಪರಿಚಿತರಾದ ಪೂರ್ಣ ಈಗ ಹಸೆಮಣೆ ಏರಲು ಸಜ್ಜಾಗಿದ್ದು. ಸಾಮಾಜಿಕ ಜಾಲತಾಣದಲ್ಲಿ ಫೋಟೋ ಶೇರ್ ಮಾಡಿ, ಪತಿಯನ್ನು ಪರಿಚಯಿಸುವ ಮೂಲಕ ತಮ್ಮ ಮದುವೆಯ ಕುರಿತು ನಟಿ ಪೂರ್ಣ ರಿವೀಲ್ ಮಾಡಿದ್ದಾರೆ.
`ಜೋಶ್’ ಚಿತ್ರದ ಮೂಲಕ ಕನ್ನಡ ಸಿನಿಪ್ರೇಕ್ಷಕರ ಹೃದಯ ಗೆದ್ದಿದ್ದ ನಟಿ ಪೂರ್ಣ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ಮಿಂಚಿರುವ ನಟಿ ಪೂರ್ಣ ಅವರ ನಿಜವಾದ ಹೆಸರು ಶಮ್ನಾ ಕಾಸಿಮ್. ಬಹುಭಾಷಾ ಸಿನಿಮಾಗಳಲ್ಲಿ ಛಾಪೂ ಮೂಡಿಸಿರುವ ನಟಿ ಪೂರ್ಣ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಇದೀಗ ಶಾಮ್ನಾ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದು ಈ ಬಗ್ಗೆ ನಟಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ.
View this post on Instagram
`ನನ್ನ ಜೀವನದ ಮುಂದಿನ ಹಂತಕ್ಕೆ ಕಾಲಿಡುತ್ತಿದ್ದೇನೆ’ ಎಂದು ಸಂತಸದ ವಿಚಾರವನ್ನು ನಟಿ ಪೂರ್ಣ ಹಂಚಿಕೊಂಡಿದ್ದಾರೆ. ಜೊತೆಗೆ ಭಾವಿ ಪತಿಯನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಅಂದಹಾಗೆ ಪೂರ್ಣ ಮದುವೆಯಾಗುತ್ತಿರುವ ಹುಡುಗ ಶಾನಿದ್ ಆಸಿಫ್ ಅಲಿ.
ಈ ಬಗ್ಗೆ ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ಹಂಚಿಕೊಂಡಿರುವ ನಟಿ ಪೂರ್ಣ ನನ್ನ ಕುಟುಂಬದ ಆಶೀರ್ವಾದದ ಜೊತೆಗೆ ನಾನು ನನ್ನ ಜೀವನದ ಮುಂದಿನ ಹಂತಕ್ಕೆ ಹೆಜ್ಜೆ ಇಡುತ್ತಿದ್ದೇನೆ. ಇದು ಅಧಿಕೃತ ಎಂದು ಹೇಳಿದ್ದಾರೆ. ನೆಚ್ಚಿನ ನಟಿಯ ಹೊಸ ಅಧ್ಯಾಯಕ್ಕೆ ಅಭಿಮಾನಿಗಳು ಶುಭ ಕೋರಿದ್ದಾರೆ.