ಪವನ್ ಕಲ್ಯಾಣ್‌ಗೆ ರಾಜಮೌಳಿ ಆ್ಯಕ್ಷನ್ ಕಟ್

Public TV
1 Min Read
pawan kalyan

ಟಾಲಿವುಡ್‌ನ ಪವರ್‌ಸ್ಟಾರ್ ಪವನ್‌ಕಲ್ಯಾಣ್‌ಗೆ ನಿರ್ದೇಶನ ಮಾಡುವುದಕ್ಕೆ ರಾಜಮೌಳಿ ಸಜ್ಜಾಗಿದ್ದಾರೆ. ಇಬ್ಬರು ದಕ್ಷಿಣ ಭಾರತದ ಟ್ಯಾಲೆಂಟೆಡ್ ಪ್ರತಿಭೆಗಳಾಗಿದ್ದು, ಒಬ್ಬರು ನಟನೆಯಲ್ಲಿ ಸೈ ಎನಿಸಿಕೊಂಡ್ರೆ, ಇನ್ನೊಬ್ಬರು ನಿರ್ದೇಶನದಲ್ಲಿ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. ಇದೀಗ ಇಬ್ಬರು ಒಟ್ಟಾಗಿ ಕೆಲಸ ಮಾಡಲು ರೆಡಿಯಾಗಿದ್ದಾರೆ.

Pawan Kalyanಈ ಮೊದಲೇ ಪವನ್ ಕಲ್ಯಾಣ, ರಾಜಮೌಳಿ ಜತೆ ಕೆಲಸ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದರು. ರಾಜಮೌಳಿ ಕೂಡ ಪವನ್ ಕಲ್ಯಾಣ್‌ಗೆ ಕಥೆ ಕೂಡ ಹೇಳಿದ್ದರು. ಆದರೆ ಒಟ್ಟಿಗೆ ಕೆಲಸ ಮಾಡುವ ಒಂದೊಳ್ಳೆ ಗಳಿಗೆ ಕೂಡಿ ಬಂದಿರಲಿಲ್ಲ. ಇದೀಗ ಮತ್ತೆ ಆ ಅವಕಾಶ ಸಿಕ್ಕಿದೆ. ಪವನ್ ಕಲ್ಯಾಣ್‌ಗೆ ರಾಜಮೌಳಿ ಆ್ಯಕ್ಷನ್ ಕಟ್ ಹೇಳೋಕೆ ಸಜ್ಜಾಗಿದ್ದಾರೆ. ಇದನ್ನೂ ಓದಿ: ಹಾಟ್ ಆಗಿ ಕ್ಯಾಮೆರಾ ಕಣ್ಣಿಗೆ ಪೋಸ್‌ ಕೊಟ್ಟ ತುಪ್ಪದ ಹುಡುಗಿ ರಾಗಿಣಿ

ss rajamouli

ಬಾಹುಬಲಿ, ಆರ್‌ಆರ್‌ಆರ್ ಸಕ್ಸಸ್ ನಂತರ ರಾಜಮೌಳಿ ಪ್ರಿನ್ಸ್ ಮಹೇಶ್ ಬಾಬುಗೆ ನಿರ್ದೇಶನ ಮಾಡಲು ಸಕಲ ತಯಾರಿ ನಡೆಯುತ್ತಿದೆ. 2023ರಲ್ಲಿ ಈ ಕಾಂಬಿನೇಷನ್ ಚಿತ್ರ ಸೆಟ್ಟೇರಲಿದೆ. ಪವನ್ ಕಲ್ಯಾಣ್ ಕೂಡ ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ಮುಗಿಸಿ, ರಾಜಮೌಳಿ ಚಿತ್ರಕ್ಕೆ ಸಜ್ಜಾಗಬೇಕಿದೆ. ನಿರ್ದೇಶಕ ರಾಜಮೌಳಿ ಕೂಡ 2024ರ ನಂತರನೇ ಫ್ರೀ ಆಗಲಿದ್ದಾರೆ. ಪವನ್ ಮತ್ತು ರಾಜಮೌಳಿ ಚಿತ್ರ 2025ಕ್ಕೆ ಶುರುವಾಗೋದು ಗ್ಯಾರೆಂಟಿ. ಇನ್ನು ಇವರಿಬ್ಬರ ಡೆಡ್ಲಿ ಕಾಂಬಿನೇಷನ್ ನೋಡಲು ಫ್ಯಾನ್ಸ್ ಕಾಯ್ತಿದ್ದಾರೆ.

Share This Article