Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಪಠ್ಯದಲ್ಲಿ ಬಸವಣ್ಣನ ವಿಚಾರಕ್ಕೆ ಧಕ್ಕೆ – ಪಂಡಿತಾರಾದ್ಯ ಶ್ರೀಗಳಿಂದ ಹೋರಾಟದ ಎಚ್ಚರಿಕೆ
Notification Show More
Font ResizerAa
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಪಠ್ಯದಲ್ಲಿ ಬಸವಣ್ಣನ ವಿಚಾರಕ್ಕೆ ಧಕ್ಕೆ – ಪಂಡಿತಾರಾದ್ಯ ಶ್ರೀಗಳಿಂದ ಹೋರಾಟದ ಎಚ್ಚರಿಕೆ

Public TV
Last updated: May 31, 2022 11:14 am
Public TV
Share
2 Min Read
Panditaradhya Swamiji
SHARE

ಬೆಂಗಳೂರು: 9 ನೇ ತರಗತಿ ಸಮಾಜ ವಿಜ್ಞಾನ ಪಠ್ಯ ಪುಸ್ತಕ ಭಾಗ -1 ರಲ್ಲಿ ಬಸವಣ್ಣನವರ ಪಾಠದಲ್ಲಿ ಕೆಲ ಅಂಶ ತೆಗೆದ ವಿಚಾರಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಸಾಣೇಹಳ್ಳಿ ತರಳುಬಾಳು ಶಾಖಾಮಠದ ಸಾಣೇಹಳ್ಳಿಯ ಪಂಡಿತಾರಾದ್ಯ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪಂಡಿತಾರಾದ್ಯ ಶ್ರೀಗಳು ಪತ್ರ ಬರೆದಿದ್ದು, ಪಠ್ಯ ಪುಸ್ತಕವನ್ನ ತಡೆಹಿಡಿದು ಸರಿ ಪಡಿಸುವಂತೆ ಆಗ್ರಹಿಸಿದ್ದಾರೆ.

ಪತ್ರದಲ್ಲಿ ಏನಿದೆ?
ಪಠ್ಯಪುಸ್ತಕ ರಚನಾ ಸಮಿತಿ ಮತ್ತು ಅದು ಬದಲಾಯಿಸಿರುವ ಪಠ್ಯ ಕುರಿತು ಸಾಕಷ್ಟು ಮತ್ತು ಆಪಾದನೆ ಕೇಳಿಬರುತ್ತಿವೆ. ಯಾವ ಹಂತದಲ್ಲಿ ಏನೇನು ಬದಲಾಯಿಸಿದ್ದಾರೆ ಎನ್ನುವುದನ್ನು ಗಮನಿಸೋಣ ಎಂದರೆ ಪಠ್ಯಪುಸ್ತಕಗಳೇ ಎಲ್ಲೂ ದೊರೆಯುತ್ತಿಲ್ಲ. ಶಾಲೆಗಳು ಪ್ರಾರಂಭವಾಗಿ 15 ದಿನಗಳಾಗಿವೆ. ಆದರೂ ಪಠ್ಯ ಮಸ್ತಕಗಳಿಲ್ಲ ಎಂದರೆ ಶಿಕ್ಷಕರು ಹೇಗೆ ಪಾಠ ಮಾಡಬೇಕು? ಈಗಿನ ಪಠ್ಯಸಮಿತಿಯಲ್ಲಿರುವವರು ಒಂದು ವರ್ಗಕ್ಕೆ ಸೇರಿದವರೆ ಮೇಲ್ನೋಟಕ್ಕೆ ಎದ್ದು ತೋರುವುದು. ಶಿಕ್ಷಣ ಕ್ಷೇತ್ರದಲ್ಲಿ ದುಡಿದವರು, ಶಿಕ್ಷಣ ತಜ್ಞರು, ಸಾಮಾಜಿಕ ಕಾಳಜಿಯುಳ್ಳ ದೂರದೃಷ್ಟಿಯುಳ್ಳವರು ಪಠ್ಯರಚನಾ ಸಮಿತಿಯಲ್ಲಿರಬೇಕಾದ್ದು ಅಪೇಕ್ಷಣೀಯ, ಅಲ್ಲಿ ಜಾತಿ, ಪಕ್ಷ ರಾಜಕಾರಣ ಹೆಡೆಯಾಡಬಾರದು ಎಂದಿದ್ದಾರೆ.ಇದನ್ನೂ ಓದಿ: ನಾಗರಿಕರನ್ನು ಕೊಂದಿದ್ದ ಇಬ್ಬರು ಉಗ್ರರ ಹತ್ಯೆ

CM Basavaraja Bommai

ವಾಟ್ಸಾಪ್‍ನಲ್ಲಿ ನಾವು ನೋಡಿರುವಂತೆ 9ನೇ ತರಗತಿಯ ‘ಸಮಾಜ ವಿಜ್ಞಾನ’ ಪಠ್ಯಪುಸ್ತಕ (ಪರಿಷ್ಕೃತ-2022) ಭಾಗ-1 ರಲ್ಲಿ ಬಸವಣ್ಣನವರನ್ನು ಕುರಿತ ಪಾಠವಿದೆ. ಕಳೆದ ವರ್ಷವೂ ಈ ಪಾಠವಿತ್ತು. ಆದರೆ ಅದರಲ್ಲಿನ ಪ್ರಮುಖ ಸಾಲುಗಳನ್ನು ತೆಗೆದು ತಮಗೆ ಬೇಕಾದವುಗಳನ್ನು ಸೇರಿಸಿದ್ದಾರೆ. ಕಳೆದ ವರ್ಷದ ಪಾಠದಲ್ಲಿ ಮಧ್ಯಕಾಲದ ಕರ್ನಾಟಕದ ಸಮಾಜವನ್ನು ಸುಧಾರಿಸಲು ಹೋರಾಡಿದ ಆದ್ಯ ಪ್ರವರ್ತಕರಲ್ಲಿ ಬಸವೇಶ್ವರರು ಒಬ್ಬರಾಗಿದ್ದಾರೆ. ವೈದಿಕ ಮೂಲ ಧರ್ಮದಲ್ಲಿ ಬೇರೂರಿದ್ದ ಅಸಂಖ್ಯಾ ಧಾರ್ಮಿಕ ಆಚರಣಾ ವಿಧಿ ವಿಧಾನಗಳನ್ನು ಬದಿಗೊತ್ತಿ ಮಾನವೀಯ ಮೌಲ್ಯ ಆಧಾರಿತ ಸರಳ ವೀರಶೈವ ಸಿದ್ಧಾಂತವನ್ನು ಬಸವೇಶ್ವರರು ಹಾಗೂ ಅವರ ಅನುಯಾಯಿಗಳಾದ ಶರಣರು ಪ್ರಚಾರಪಡಿಸಿದರು. ಜಾತಿವ್ಯವಸ್ಥೆಯ ಕಡುವಿರೋಧಿಯಾಗಿದ್ದ ಬಸವೇಶ್ವರರು ತಮ್ಮ ಉಪನಯನದ ಯಜ್ಯೋಪವೀತವನ್ನು ಕಿತ್ತೆಸೆದು ಕೂಡಲಸಂಗಮಕ್ಕೆ ನಡೆದರು. ಉನ್ನತಾಧಿಕಾರದಲ್ಲಿದ್ದರೂ ಹಣ, ಅಧಿಕಾರ, ಅಧಿಪತ್ಯ ಇವ್ಯಾವುದರಿಂದಲೂ ಇವರು ವಿಚಲಿತರಾಗಲಿಲ್ಲ. ತಮ್ಮ ಇಡೀ ಜೀವನವನ್ನು ಸಮಾಜ ಮತ್ತು ಧರ್ಮದಲ್ಲಿನ ಅನಿಷ್ಟ ಪದ್ಧತಿಗಳನ್ನು ತೊಡೆದುಹಾಕಲು ಮೀಸಲಿರಿಸಿದರು. ಸಮಾಜ, ಧರ್ಮದ ಪುನಶ್ವೇತನಕ್ಕೆ ಟೊಂಕಕಟ್ಟಿದರು. ಸ್ವಾವಲಂಬನೆಯ ತತ್ವವನ್ನು, ದೇಹವೇ ದೇಗುಲ, ಈ ಬಗೆಯ ಸಂವೇದನೆಗಳು ಇಂದಿಗೂ ನಮ್ಮ ಸಮಾಜಕ್ಕೆ ದಾರಿದೀಪಗಳಾಗಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:  ಬಾವಿಗೆ ಎಸೆದು 6 ಮಕ್ಕಳ ಹತ್ಯೆಗೈದ ಕ್ರೂರಿ ತಾಯಿ

basavanna

ಅವರು ಸರಳ ಕನ್ನಡವನ್ನು ಬಳಸುವ ಮೂಲಕ ತಮ್ಮ ಚಳವಳಿಯನ್ನು ಜನಮುಖಿಯಾಗಿಸಿದರು. ಅನೇಕ ಮಹತ್ವದ ಅಂಶಗಳನ್ನೇ ತೆಗೆದುಹಾಕಿ ತಮಗೆ ಬೇಕಾದಂತೆ ತಿರುಚಿದ್ದಾರೆ. ಬಸವಣ್ಣ ಮತ್ತು ಅವರು ಪ್ರತಿಪಾದಿಸಿದ ಲಿಂಗಾಯತ ಧರ್ಮದ ಬಗ್ಗೆ ತಪ್ಪು ಅಭಿಪ್ರಾಯ ಬರುವಂತೆ ಮಾಡಿದ್ದಾರೆ. ಈ ಬದಲಾವಣೆ ನಿಜಕ್ಕೂ ಖಂಡನಾರ್ಹ. ಬಸವಣ್ಣನವರ ಶುದ್ಧ, ಪಾರದರ್ಶಕ ಬದುಕಿಗೆ ಕಳಂಕ ತಂದಂತೆ. ವಚನಕಾರರು ವೀರಶೈವ ಮತವನ್ನು ಸುಧಾರಿಸಿದರು ಎನ್ನುವುದು ಶುದ್ಧ ಸುಳ್ಳು. ಅವರು ಲಿಂಗಾಯತ ಧರ್ಮವನ್ನು ಜಾರಿಯಲ್ಲಿ ತಂದರು ಎಂದಾಗಬೇಕಿತ್ತು. ಇಂತಹ ಹಲವು ದೋಷಗಳಾಗಿವೆ. ಆದುದರಿಂದ ತಕ್ಷಣ ಇಡೀ ಪಠ್ಯವನ್ನೇ ತಡೆಹಿಡಿದು ಎಲ್ಲಿಯೂ ದೋಷವಾಗದಂತೆ ಪರಿಷ್ಕರಣೆ ಮಾಡಬೇಕು. ಇಲ್ಲವೇ ಹಿಂದಿನ ಪಠ್ಯವನ್ನೇ ಮುಂದುವರಿಸಬೇಕು. ಈ ಬಗ್ಗೆ ಕೂಡಲೇ ಕ್ರಮ ಜರುಗಿಸದಿದ್ದರೆ ನಾಡಿನಾದ್ಯಂತ ಹೋರಾಟ ನಡೆಯುವುದು ಅನಿವಾರ್ಯವಾಗಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

Share This Article
Facebook Whatsapp Whatsapp Telegram
Previous Article yogiraj arun ಇಂಡಿಯಾ ಗೇಟ್ ಮುಂದೆ ಪ್ರತಿಷ್ಠಾನೆ ಆಗಲಿರುವ ಬೋಸ್ ಶಿಲ್ಪವನ್ನು ಕೆತ್ತುತ್ತಿರುವುದು ಕನ್ನಡಿಗ
Next Article kamal hasan 1 ಕಮಲ್ ಹಾಸನ್ ‘ವಿಕ್ರಮ್’ ಚಿತ್ರಕ್ಕೆ 13 ಕಡೆ ಕತ್ತರಿ : ಸೆನ್ಸಾರ್ ಮಂಡಳಿ ಸೂಚನೆ ಏನಿತ್ತು?

Latest Cinema News

Ramya Ravichandran
ತುಮಕೂರು ದಸರಾಗೆ ರಮ್ಯಾ – ರವಿಚಂದ್ರನ್
Cinema Districts Karnataka Latest Sandalwood Top Stories Tumakuru
Kolar Dhruva Sarja
ಕೋಲಾರ ಕಾಶಿ ವಿಶ್ವೇಶ್ವರ ಸ್ವಾಮಿ ದೇವಾಲಯದಲ್ಲಿ ನಟ ಧ್ರುವ ಸರ್ಜಾ ವಿಶೇಷ ಪೂಜೆ
Cinema Districts Karnataka Kolar Latest Sandalwood Top Stories
Kantara 2
ಕಾಂತಾರ ಚಾಪ್ಟರ್‌-1 ಟ್ರೈಲರ್‌ ಲಾಂಚ್‌ಗೆ ದಿನಾಂಕ, ಸಮಯ ಫಿಕ್ಸ್‌ – ಹೊಂಬಾಳೆ ಫಿಲ್ಮ್ಸ್ಅಧಿಕೃತ ಮಾಹಿತಿ
Bengaluru City Cinema Latest Sandalwood Top Stories
mohanlal 1
ಖ್ಯಾತ ನಟ ಮೋಹನ್ ಲಾಲ್‌ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಘೋಷಣೆ
Cinema Latest Top Stories
Vijay
ತಮಿಳುನಾಡು | ರಾಜೀವ್ ಗಾಂಧಿ ಹಂತಕನನ್ನ ಹಾಡಿ ಹೊಗಳಿದ ದಳಪತಿ ವಿಜಯ್
Cinema Latest Main Post National

You Might Also Like

DVG SHANTANA GOWDA AV
Davanagere

ಆಣೆ ಪ್ರಮಾಣಕ್ಕಾಗಿ ದೇವಾಲಯಕ್ಕೆ ಬಂದ ಹೊನ್ನಾಳಿ ಶಾಸಕ – ಸವಾಲೆಸೆದು ಕೈಕೊಟ್ಟ ರೇಣುಕಾಚಾರ್ಯ ಆಪ್ತ

16 minutes ago
Mahesh Shetty Timarodi
Districts

ವಿಚಾರಣೆಗೆ ಗೈರು – ತಿಮರೋಡಿಗೆ ಎರಡನೇ ನೋಟಿಸ್‌ ಜಾರಿ

16 minutes ago
Madhu Bangarappa 1
Bengaluru City

ಶಾಲಾ ಅವಧಿ ಬದಲು ರಜೆ ವೇಳೆ ಸರ್ವೆಗೆ ಶಿಕ್ಷಕರ ಬಳಕೆ: ಮಧು ಬಂಗಾರಪ್ಪ

24 minutes ago
NITIN GADKARI
Latest

ಮೀಸಲಾತಿ ತೆಗೆದುಕೊಳ್ಳದಿರುವುದೇ ಬ್ರಾಹ್ಮಣನಾದ ನನಗೆ ದೇವರು ಮಾಡಿದ ದೊಡ್ಡ ಆಶೀರ್ವಾದ: ನಿತಿನ್‌ ಗಡ್ಕರಿ

41 minutes ago
Ambulance Dirver
Districts

ಅಂಬುಲೆನ್ಸ್‌ ಬ್ರೇಕ್ ಫೇಲಾದ್ರೂ ಗರ್ಭಿಣಿಯನ್ನ ಹಾಸ್ಪಿಟಲ್‌ಗೆ ತಲುಪಿಸಿದ ಚಾಲಕ – ಜನರಿಂದ ಮೆಚ್ಚುಗೆ

53 minutes ago
Previous Next
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?