ಮೈಸೂರು: ದೆಹಲಿಯ ಇಂಡಿಯಾ ಗೇಟ್ ಮುಂಭಾಗ ಸುಭಾಷ್ ಚಂದ್ರ ಬೋಸ್ ಅವರ 30 ಅಡಿ ಎತ್ತರದ ಕಪ್ಪು ಕಲ್ಲಿನ ಏಕ ಶಿಲೆಯ ಮೂರ್ತಿ ನಿರ್ಮಾಣದ ಬಹುದೊಡ್ಡ ಅವಕಾಶ ಈಗ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರಿಗೆ ಸಿಕ್ಕಿದೆ.
ಕೇದಾರನಾಥ್‍ನಲ್ಲಿ ಶಂಕರಾಚಾರ್ಯರ ಅವರ ಮೂರ್ತಿ ಕೆತ್ತಿ ಖ್ಯಾತಿ ಪಡೆದ ಯೋಗಿರಾಜ್‍ಗೆ ಈಗ ಮತ್ತೊಂದು ಬಹುದೊಡ್ಡ ಅವಕಾಶ ಸಿಕ್ಕಿದೆ. ದೆಹಲಿಯಲ್ಲೇ ಉಳಿದು ಈ ಮೂರ್ತಿ ಕೆತ್ತನೆಯನ್ನು ಇವರು ಮತ್ತು ತಂಡ ಮಾಡಲಿದೆ.
ಈ ಬಗ್ಗೆ ಮಾತನಾಡಿದ ಯೋಗಿರಾಜ್ ಅವರು, ಇಂಡಿಯಾ ಗೇಟ್‍ಗೆ ಕಲಾಕೃತಿ ಸೇರ್ಪಡೆ ಆಗುತ್ತಿರುವುದು ಹೆಮ್ಮೆಯ ವಿಷಯ. ಗ್ರಾನೇಟ್ ಕಲ್ಲಿನಲ್ಲಿನ ಸುಭಾಷ್ ಚಂದ್ರ ಅವರ ಮೂರ್ತಿ ಕೆತ್ತನೆ ಆಗುತ್ತದೆ. 30 ಅಡಿ ಕಲ್ಲಿನಲ್ಲಿ ಈ ಕೆತ್ತನೆ ಮಾಡಬೇಕು. ಬುಧವಾರ ದೆಹಲಿಗೆ ಹೋಗುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಶೀಘ್ರವೇ ಕೇಂದ್ರ ಸಚಿವ ಸಂಪುಟ ಪುನಾರಚನೆ?
ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮೈಸೂರಿನ ಶಿಲ್ಪಿ ಯೋಗಿರಾಜ್ ಅರುಣ್ ಭೇಟಿಯಾಗಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ನೀಡಿದ್ದರು. ಅಷ್ಟೇ ಅಲ್ಲದೇ ಸ್ವತಃ ಪ್ರಧಾನಿ ಸಚಿವಾಲಯದ ಅಧಿಕಾರಿಗಳೇ ದೇಶಾದ್ಯಂತ ಹುಡುಕಾಡಿ ಕೇದಾರಾನಾಥದಲ್ಲಿ ಶಂಕರರ ಪುತ್ಥಳಿ ಕೆತ್ತಲು ಅಂತಿಮವಾಗಿ ಆಯ್ಕೆ ಮಾಡಿಕೊಂಡಿದ್ದರು. ಇದನ್ನೂ ಓದಿ: ಸೆ.15ವರೆಗೆ ಪದ್ಮ ಪ್ರಶಸ್ತಿ ನಾಮನಿರ್ದೇಶನ ಮಾಡಿ