ಐತಿಹಾಸಿಕ ಮುರುಘಾ ಮಠಕ್ಕೆ ನೂತನ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಸ್ವಾಮೀಜಿ ಆಯ್ಕೆ

Public TV
2 Min Read
Murugha Math Basavaditya Swamiji Chitradurga

ಚಿತ್ರದುರ್ಗ: ಐತಿಹಾಸಿಕ ಹಿನ್ನೆಲೆಯ ಮುರುಘಾ ಮಠಕ್ಕೆ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಸ್ವಾಮೀಜಿ ಆಯ್ಕೆಯಾಗಿದ್ದಾರೆ.

ಚಿತ್ರದುರ್ಗ ತಾಲೂಕಿನ ಚಂದ್ರಕಲಾ ಹಾಗೂ ಶಿವಮೂರ್ತಯ್ಯ ಅವರ ಏಕೈಕ ಸುಪುತ್ರರಾಗಿರುವ ಬಸವಾದಿತ್ಯ ಅವರು ಹಿಂದಿನಿಂದಲೂ ಆಧ್ಯಾತ್ಮದಲ್ಲಿ ಆಸಕ್ತಿ ಹೊಂದಿದ್ದರು. ಬಸವಾದಿತ್ಯ ಬಸವ ಕೇಂದ್ರದ ಒಡನಾಡಿಯಾಗಿದ್ದು, ಅವರ ದೊಡ್ಡಮ್ಮನೊಂದಿಗೆ ಮುರುಘಾ ಮಠದ ಕಾರ್ಯಕ್ರಮಗಳಿಗೆ ಭಾಗಿಯಾಗ್ತಿದ್ದರು. ಇವರ ನಡೆನುಡಿ ಗಮನಿಸಿದ ಮುರುಘಾ ಮಠದ ಪೀಠಾಧಿಪತಿ ಡಾ.ಶಿವಮೂರ್ತಿ ಮುರುಘಾ ಶರಣರು ಅವರಿಗೆ ಗುರುಕುಲದಲ್ಲಿ ವಿದ್ಯಾಭ್ಯಾಸ ಮಾಡಿಸಿದ್ದರು. ಇದನ್ನೂ ಓದಿ: ಜವಾಹರಲಾಲ್ ನೆಹರೂ ಪುಣ್ಯ ತಿಥಿ – ಸೋನಿಯಾ ಗಾಂಧಿಯಿಂದ ಪುಷ್ಪ ನಮನ

Murugha Math Basavaditya Swamiji Chitradurga 3

ಬಸವಾದಿತ್ಯ ಅವರು ಚಿತ್ರದುರ್ಗದ ಎಸ್.ಜೆ.ಎಂ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದು, ಚಿತ್ರದುರ್ಗದ ಮುರುಘಾ ಮಠದ ಶಿರಸಂಗಿ ಮಹಾಲಿಂಗ ಸ್ವಾಮಿ ಸಭಾಂಗಣದಲ್ಲಿ ನೂರಾರು ಭಕ್ತರ ಸಮ್ಮುಖದಲ್ಲಿ ಶರಣರು ಈ ಘೋಷಣೆ ಮಾಡಿದ್ದಾರೆ. ನೂತನ ಉತ್ತರಾಧಿಕಾರಿ ಬಸವಾದಿತ್ಯ ಸ್ವಾಮಿಗಳಿಗೆ ಹಣೆಗೆ ವಿಭೂತಿ ಇಟ್ಟು, ರುದ್ರಾಕ್ಷಿ ಮಾಲೆ ಹಾಕುವ ಮೂಲಕ ಘೋಷಣೆಯನ್ನು ಹೊರಡಿಸಿದರು. ಮುರುಘಾ ಶರಣರ ನಂತರ ಭಕ್ತರೆಲ್ಲರೂ ನೂತನ ಉತ್ತರಾಧಿಕಾರಿ ಶ್ರೀಗಳಿಗೆ ಹೂವಿನ ಸುರಿಮಳೆ ಸುರಿಸಿದರು.

Murugha Math Basavaditya Swamiji Chitradurga 3

ಆತುರದ ನಿರ್ಧಾರವಲ್ಲ
ನೂತನ ಉತ್ತರಾಧಿಕಾರಿ ಘೋಷಣೆ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಶರಣರು ಇದು ಆತುರದ ನಿರ್ಧಾರವಲ್ಲ. ಒಂದು ವರ್ಷದ ಹಿಂದೆಯೇ ಉತ್ತರಾಧಿಕಾರಿ ಘೋಷಣೆ ಬಗ್ಗೆ ನಿರ್ಧರಿಸಲಾಗಿತ್ತು. ಈಗಿನ ಬಸವಾದಿತ್ಯ ಸ್ವಾಮಿಗಳು ಅವರು ಚಿತ್ರದುರ್ಗ ಹುಲ್ಲೂರು ಗ್ರಾಮದ ಶಿವಮೂರ್ತಯ್ಯ ಮತ್ತು ಚಂದ್ರಕಲಾ ದಂಪತಿ ಸುಪುತ್ರನಾಗಿದ್ದಾರೆ. ಚಿತ್ರದುರ್ಗ ನಗರದ ಎಸ್‍.ಜೆ.ಎಂ ಸ್ವಾತಂತ್ರ್ಯ ಕಾಲೇಜಿನಲ್ಲಿ ಬಸವಾದಿತ್ಯ ಸ್ವಾಮಿಗಳು ವ್ಯಾಸಂಗ ಮಾಡುತ್ತಿದ್ದರು.

Murugha Math Basavaditya Swamiji Chitradurga 5

ಮಠದ ನೂತನ ಉತ್ತರಾಧಿಕಾರಿಯಾದ ಬಸವಾಧಿತ್ಯ ಸ್ವಾಮಿಗಳು ಸಹ ಈ ಕುರಿತು ಮಾತನಾಡಿದ ಅವರು, ನನಗೆ ಚಿಕ್ಕ ವಯಸ್ಸಿನಲ್ಲೇ ಮಠದ ಜವಾಬ್ದಾರಿ ನೀಡಿದ್ದಾರೆ. ಮಠವನ್ನು ಮತ್ತಷ್ಟು ಅಭಿವೃದ್ಧಿಯತ್ತ ಕೊಂಡೊಯ್ಯುಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ತೃತೀಯ ರಂಗ ರಚನೆಗೆ ದೇವೇಗೌಡರ ಜೊತೆ ಚಂದ್ರಶೇಖರ್ ರಾವ್ ಚರ್ಚೆ

Murugha Math Basavaditya Swamiji Chitradurga 4

ಇದೇ ವೇಳೆ ಉತ್ತರಾಧಿಕಾರಿಯಾದ ಬಸವಾದಿತ್ಯ ಅವರ ಪೋಷಕರಿಗೂ ಸಂತಸವಾಗಿದೆ. ಈ ಸಮಾಜದಲ್ಲಿ ಬಹುತೇಕರು ಡಾಕ್ಟರ್, ಇಂಜಿನಿಯರ್ ಆಗ್ತಾರೆ. ಆದರೆ ಸ್ವಾಮೀಜಿಗಳಾಗೋದು ವಿರಳ. ಈ ಅವಕಾಶ ಸಿಕ್ಕಿರೋದು ನಮ್ಮ ಭಾಗ್ಯ ಎನಿಸಿದೆ. ಬಸವಾದಿತ್ಯ ಕೇವಲ ನಮ್ಮ ಮಗನಾಗಿರದೇ ಎಲ್ಲರ ಮನೆಮಗನಾಗಲೆಂದು ಅವರ ತಾಯಿ ಚಂದ್ರಕಲಾ ಹಾಗೂ ತಂದೆ ಶಿವಮೂರ್ತಯ್ಯ ಶುಭ ಹಾರೈಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *