ಮೋದಿ ಪ್ರಧಾನಿಯಾಗಿ 8 ವರ್ಷ – ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇಗೆ ಚಾಲನೆ

Public TV
2 Min Read
NARENDRA MODI 1

ನವದೆಹಲಿ: ಜಪಾನ್ ಪ್ರವಾಸಿ ಮುಗಿದ ನಂತರ ಭಾರತಕ್ಕೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹೈದರಾಬಾದ್ ಹಾಗೂ ಚೆನ್ನೈಗೆ ಭೇಟಿ ನೀಡಲಿದ್ದಾರೆ.

ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಹಾಗೂ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ಎಂಟು ವರ್ಷಗಳು ಪೂರ್ಣಗೊಳ್ಳುತ್ತಿರುವ ಹಿನ್ನಲೆ ಮೋದಿ ಗುರುವಾರ ಹೈದರಾಬಾದ್ ಹಾಗೂ ತಮಿಳುನಾಡಿನಲ್ಲಿ ಮಾಡಲಿರುವ ಭಾಷಣ ಮೇಲೆ ಎಲ್ಲರ ನಿರೀಕ್ಷೆಗಳಿದೆ.

modi japan

ತಮಿಳುನಾಡಿನಲ್ಲಿ ಡಿಎಂಕೆ ಸರ್ಕಾರ ಆಡಳಿತಕ್ಕೆ ಬಂದ ಬಳಿಕ ನರೇಂದ್ರ ಮೋದಿ ಅವರು, ಇದೇ ಮೊದಲ ಬಾರಿಗೆ ತಮಿಳುನಾಡಿಗೆ ಭೇಟಿ ನೀಡುತ್ತಿದ್ದು ಹಲವು ಯೋಜನೆಗಳಿಗೆ ಶಿಲನ್ಯಾಸ ನೆರವೇರಿಸಲಿದ್ದಾರೆ.

ಹೈದರಾಬಾದ್ ಭೇಟಿ: ಪ್ರಧಾನಿ ಮೋದಿ ಅವರು ಇಂದು 2 ಗಂಟೆ ಸುಮಾರಿಗೆ ಹೈದರಾಬಾದ್‍ಗೆ ಆಗಮಿಸಲಿದ್ದು, ಬಳಿಕ ಐಎಸ್‍ಬಿ 20ನೇ ವರ್ಷದ ಸಂಭ್ರಮಾಚರಣೆ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಪದವಿ ಸಮಾರಂಭದಲ್ಲಿ ಭಾಷಣ ಮಾಡಲಿದ್ದಾರೆ. ಇದನ್ನೂ ಓದಿ: ಪಾಟಿದರ್ ಸ್ಫೋಟಕ ಶತಕ, ಡಿ.ಕೆ ಅಬ್ಬರ – ಅಹಮದಾಬಾದ್‌ಗೆ ಹಾರಿದ ಬೆಂಗ್ಳೂರು

NARENDRA MODI 3 1

ತಮಿಳುನಾಡು ಭೇಟಿ: ಸಂಜೆ 5.45ರ ಸುಮಾರಿಗೆ ಚೆನ್ನೈ ತಲುಪಲಿರುವ ಮೋದಿ ಅವರು, 31,400 ಕೋಟಿಯ ಒಟ್ಟು 11 ಯೋಜನೆಗಳಿಗೆ ಅವರು ಶಿಲನ್ಯಾಸ ಮಾಡಲಿದ್ದು, ಇದೇ ವೇಳೆ 2,900 ಕೋಟಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾಗಿರುವ ನಾಲ್ಕು ರೈಲ್ವೆ ಯೋಜನೆಗಳನ್ನು ಪ್ರಧಾನಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. 910 ಕೋಟಿ ವೆಚ್ಚದಲ್ಲಿ 271 ಕಿಮೀ ಉದ್ದದ ತಿರುವಳ್ಳೂರು-ಬೆಂಗಳೂರು ಭಾಗದ ನೈಸರ್ಗಿಕ ಅನಿಲ ಪೈಪ್‍ಲೈನ್‍ಗೂ ಅವರು ಚಾಲನೆ ನೀಡಲಿದ್ದು, ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 116 ಕೋಟಿ ವೆಚ್ಚದಲ್ಲಿ ಚೆನ್ನೈನ ಲೈಟ್ ಹೌಸ್ ಯೋಜನೆಯ ಭಾಗವಾಗಿ ನಿರ್ಮಿಸಲಾದ 1,152 ಮನೆಗಳನ್ನು ಅವರು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ರಷ್ಯಾದಿಂದ ತೈಲ ಖರೀದಿ ಮುಂದುವರಿಸಿದ ಭಾರತ – ರಿಯಾಯಿತಿ ಬಗ್ಗೆ ಆಗಿಲ್ಲ ನಿರ್ಧಾರ

PM MET STALIN

28,500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಆರು ರಾಷ್ಟ್ರೀಯ ಹೆದ್ದಾರಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದು, ಇದು 262 ಕಿಮೀ ಉದ್ದದ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ರಸ್ತೆ ಒಳಗೊಂಡಿದೆ. 14,870 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಈ ಯೋಜನೆಯಿಂದ ಎರಡು ನಗರಗಳ ನಡುವಿನ ಪ್ರಯಾಣದ ಸಮಯವನ್ನು ಎರಡರಿಂದ ಮೂರು ಗಂಟೆಗಳವರೆಗೆ ಕಡಿಮೆ ಮಾಡುವ ನಿರೀಕ್ಷೆಯಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.

Share This Article
Leave a Comment

Leave a Reply

Your email address will not be published. Required fields are marked *