ಚಾಮರಾಜನಗರದ ಅವಳಿ ಜಲಾಶಯ ಭರ್ತಿ – ಅಚ್ಚುಕಟ್ಟು ಪ್ರದೇಶಕ್ಕೆ ನೀರು ಬಿಡಲು ಒತ್ತಾಯ

Public TV
1 Min Read
CNG DAM 1

ಚಾಮರಾಜನಗರ: ಜಿಲ್ಲೆಯಲ್ಲಿರುವ ಜಲಾಶಯಗಳು ಭರ್ತಿಯಾಗೋದೆ ತಮಿಳುನಾಡಿನಲ್ಲಿ ಉತ್ತಮ ಮಳೆಯಾದ್ರೆ. ಅಸನಿ ಚಂಡಮಾರುತದ ಎಫೆಕ್ಟ್‌ನಿಂದಾಗಿ ತಮಿಳುನಾಡಿನ ದಿಂಬಂ, ತಾಳವಾಡಿಯಲ್ಲಿ ಉತ್ತಮ ಮಳೆ ಬಿದ್ದಿದೆ. ಈ ಹಿನ್ನೆಲೆ ಹಲವು ದಶಕದ ಬಳಿಕ ಅಕ್ಟೋಬರ್, ನವೆಂಬರ್‌ನಲ್ಲಿ ಭರ್ತಿಯಾಗ್ತಿದ್ದ ಅವಳಿ ಜಲಾಶಯಗಳು ಮೇ ನಲ್ಲೇ ಭರ್ತಿಯಾಗಿದೆ.

CNG DAM

ಚಾಮರಾಜನಗರದ ಸುವರ್ಣಾವತಿ, ಚಿಕ್ಕಹೊಳೆ ಜಲಾಶಯ ಹಿಂದೆಲ್ಲಾ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಡ್ಯಾಂಗಳು ಭರ್ತಿಯಾಗುತ್ತಿದ್ದವು. ಆದರೆ ಈ ವರ್ಷ ಮೇ ತಿಂಗಳಲ್ಲೇ ಡ್ಯಾಂ ಭರ್ತಿಯಾಗಿದ್ದು ಜಲ ವೈಭವ ವೀಕ್ಷಣೆಗೆ ಸಾರ್ವಜನಿಕರು ಬರುತ್ತಿದ್ದಾರೆ. ಕರ್ನಾಟಕಕ್ಕೆ ಸೇರಿರುವ ಬೇಡಗುಳಿ, ತಮಿಳುನಾಡಿನ ದಿಂಬಂ, ಹಾಸನೂರು ಪ್ರದೇಶಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ ಜಲಾಶಯಗಳಿಗೆ ಜೀವಕಳೆ ತಂದಿದೆ. ಸುವರ್ಣಾವತಿ ಜಲಾಶಯದ ನೀರು ಸಂಗ್ರಹಣದ ಗರಿಷ್ಠ ಮಟ್ಟ 2,455 ಅಡಿ. ಎರಡು ಅಡಿ ಬಾಕಿಯಿದ್ದು, ಬಹುತೇಕ ಭರ್ತಿ ಹಂತದಲ್ಲಿದೆ. ಅದೇ ರೀತಿ ಚಿಕ್ಕಹೊಳೆ 2,449 ಅಡಿ ನೀರು ಸಂಗ್ರಹ ಸಾಮರ್ಥ್ಯ ಹೊಂದಿದ್ದು ಭರ್ತಿಯಾಗಿದೆ. ಸುವರ್ಣಾವತಿ ಜಲಾಶಯ 6,400 ಎಕರೆ ಹಾಗೂ ಚಿಕ್ಕಹೊಳೆ 4,000 ಎಕರೆ ಅಚ್ಚುಕಟ್ಟು ಪ್ರದೇಶ ಹೊಂದಿದೆ. ಅಸನಿ ಚಂಡಮಾರುತದಿಂದ ಹವಾಮಾನದಲ್ಲಿ ಉಂಟಾದ ಬದಲಾವಣೆಯಿಂದ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಮಳೆ ಸುರಿದಿದ್ದು, ಜಲಾಶಯಗಳು ನಳನಳಿಸುತ್ತಿವೆ. ಇದನ್ನೂ ಓದಿ: ಜಪಾನ್‌ ಯುವಕರು ಒಮ್ಮೆಯಾದರೂ ಭಾರತಕ್ಕೆ ಭೇಟಿ ನೀಡಬೇಕು: ಮೋದಿ ಆಹ್ವಾನ

CNG DAM 2

ಈ ಜೋಡಿ ಜಲಾಶಯ ತುಂಬಿರುವುದರಿಂದ ಕೂಡಲೇ ರೈತರಿಗೆ ನೀರು ಹರಿಸುವಂತೆ ಒತ್ತಾಯ ಮಾಡ್ತಿದ್ದಾರೆ. ಅಲ್ಲದೇ ಕೇರಳ, ತಮಿಳುನಾಡು ಸೇರಿದಂತೆ ಎಲ್ಲೆಡೆಯಿಂದ ಪ್ರವಾಸಿಗರು ಬರುವುದರಿಂದ ಪ್ರವಾಸೋದ್ಯಮಕ್ಕೂ ಉತ್ತೇಜನ ಕೊಟ್ರೆ ಆದಾಯ ಬರುತ್ತೆ. ಬರದನಾಡು ಚಾಮರಾಜನಗರದ ಅವಳಿ ಜಲಾಶಯಗಳು ಅವಧಿಗೂ ಮುಂಚೆಯೇ ತುಂಬಿದ್ರಿಂದ ರೈತರು ಕೂಡ ಖುಷಿಯಲ್ಲಿದ್ದಾರೆ. ಇದನ್ನೂ ಓದಿ: ಪಠ್ಯ ಪುಸ್ತಕ ಪರಿಷ್ಕರಣೆಯ ಗೊಂದಲಗಳಿಗೆ ಸಚಿವ ಬಿ.ಸಿ.ನಾಗೇಶ್ ತೆರೆ – ಏನಿರುತ್ತೆ, ಏನಿರಲ್ಲ?

Share This Article
Leave a Comment

Leave a Reply

Your email address will not be published. Required fields are marked *